ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಭಾರತಕ್ಕೆ 16 ಪದಕ
Team Udayavani, Apr 29, 2019, 12:14 PM IST
ಕ್ಸಿಯಾನ್ (ಚೀನ): ಗ್ರೀಕೋ- ರೋಮನ್ ಕುಸ್ತಿಪಟುಗಳು ಗೆದ್ದ ಒಂದು ಬೆಳ್ಳಿ, ಒಂದು ಕಂಚಿನ ಪದಕದೊಂದಿಗೆ ಭಾರತ “ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್’ ಕೂಟವನ್ನು 16 ಪದಕಗಳೊಂದಿಗೆ ಕೊನೆಗೊಳಿಸಿದೆ.
ಕೂಟದ ಕೊನೆಯ ದಿನವಾದ ರವಿವಾರ 82 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್‌ಪ್ರೀತ್ ಸಿಂಗ್ ಬೆಳ್ಳಿ ಗೆದ್ದರೆ, 60 ಕೆಜಿ ಸ್ಪರ್ಧೆಯಲ್ಲಿ ಗ್ಯಾನೇಂದರ್ ಕಂಚಿನ ಪದಕ ಗೆದ್ದರು.
ಪುರುಷರ ಫ್ರೀಸ್ಟೈಲ್ ಕುಸ್ತಿಪಟುಗಳಿಂದ ಒಟ್ಟು 8 ಪದಕ (1 ಚಿನ್ನ, 3 ಬೆಳ್ಳಿ, 4 ಕಂಚು), ವನಿತಾ ವಿಭಾಗದಲ್ಲಿ 4 ಕಂಚು ಮತ್ತು ಗ್ರೀಕೋ ರೋಮನ್ ಕುಸ್ತಿಪಟುಗಳಿಂದ 4 ಪದಕಗಳು (3 ಬೆಳ್ಳಿ, 1 ಕಂಚು) ಭಾರತಕ್ಕೆ ಒಲಿದವು.
ಫೈನಲ್ ಪ್ರವೇಶಿಸುವ ಹಾದಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹರ್‌ಪ್ರೀತ್, ಇಲ್ಲಿ ಇರಾನಿನ ಸಯ್ಯದ್ ಮೊರಾದ್ ಅಬ್ದವಾಲಿ ವಿರುದ್ಧ 0-8 ಅಂಕಗಳ ಹೀನಾಯ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಕಂಚಿನ ಪದಕದ ಸ್ಪರ್ಧೆಯಲ್ಲಿ ಗ್ಯಾನೇಂದರ್ ಚೈನೀಸ್ ತೈಪೆಯ ಜುಯಿ ಚಿ ಹ್ಯಾಂಗ್ ಅವರನ್ನು ಸೋಲಿಸಿ ಕಂಚು ಗೆದ್ದರು.
ಭಾರತಕ್ಕೆ 8ನೇ ಸ್ಥಾನ
ಒಟ್ಟು 16 ಪದಕಗಳನ್ನು ಗೆದ್ದಿರುವ ಭಾರತ ಈ ಕೂಟದಲ್ಲಿ 8ನೇ ಸ್ಥಾನ ಪಡೆದಿದೆ. 11 ಚಿನ್ನ, 6 ಕಂಚಿನ ಪದಕ ಗೆದ್ದ ಇರಾನ್ ಅಗ್ರಸ್ಥಾನಿಯಾಗಿದೆ. ಚೀನ ದ್ವಿತೀಯ (5 ಚಿನ್ನ, 5 ಬೆಳ್ಳಿ, 6 ಕಂಚು), ಜಪಾನ್ ತೃತೀಯ (4 ಚಿನ್ನ, 7 ಬೆಳ್ಳಿ, 6 ಕಂಚು) ಸ್ಥಾನ ಪಡೆದಿದೆ.
ಕೈತಪ್ಪಿದ 3 ಪದಕ
72 ಕೆಜಿ ವಿಭಾಗದ 3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಯೋಗೇಶ್ ಕಿರ್ಗಿಸ್ಥಾನದ ರುಶ್ಲಾನ್ ಸರೇವ್ ವಿರುದ್ಧ ಸೋತರು. ಉಳಿದಂತೆ ರವಿವಾರದ ಸ್ಪರ್ಧೆಯಲ್ಲಿದ್ದ ಭಾರತದ ಮತ್ತಿಬ್ಬರು ಕುಸ್ತಿಪಟುಗಳಲ್ಲಿ ರವೀಂದರ್ 67 ಕೆಜಿ ವಿಭಾಗದ ಅರ್ಹತಾ ಬೌಟ್‌ನಲ್ಲಿ ಪರಾಭವಗೊಂಡರೆ, ಹರ್‌ದೀಪ್ 97 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಸೋತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.