Football ಆಟಗಾರ್ತಿಯರ ಮೇಲೆ ಹಲ್ಲೆ: ದೀಪಕ್ ಶರ್ಮ ಅಮಾನತು
Team Udayavani, Apr 2, 2024, 9:20 PM IST
ಪಣಜಿ: ಫುಟ್‌ಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೂಲಕ ಹೊರಬಂದಿದ್ದ, ಅಖಿಲ ಭಾರತ ಫುಟ್‌ಬಾಲ್ ಕಾರ್ಯಕಾರಿ ಸಮಿತಿ (ಎಐಎಫ್ಎಫ್) ಸದಸ್ಯ ದೀಪಕ್ ಶರ್ಮ ಅಮಾನತುಗೊಂಡಿದ್ದಾರೆ. ಮುಂದಿನ ಆದೇಶದ ವರೆಗೆ ಶರ್ಮ ಅವರನ್ನು ಅಮಾನತುಗೊಳಿಸಿರುವುದಾಗಿ ಭಾರತೀಯ ಫುಟ್‌ಬಾಲ್ ಫೆಡರೇಶನ್ ಮಂಗಳವಾರ ಪ್ರಕಟಿಸಿದೆ.
ಇಂಡಿಯನ್ ವುಮೆನ್ಸ್ ಫುಟ್‌ಬಾಲ್ ಲೀಗ್‌ನಲ್ಲಿ (ಐಡಬ್ಲ್ಯುಎಲ್) ಆಡುತ್ತಿರುವ ಹಿಮಾಚಲ ಪ್ರದೇಶ ಮೂಲದ ಖಾದ್ ಫುಟ್ಬಾಲ್ ಕ್ಲಬ್‌ನ ಇಬ್ಬರು ಆಟಗಾರ್ತಿಯರ ಮೇಲೆ, ದೀಪಕ್ ಶರ್ಮ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿತ್ತು. ಕ್ಲಬ್‌ನ ಮಾಲಕನಾಗಿರುವ ಶರ್ಮ, ಮಾರ್ಚ್ 28ರಂದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಆಟಗಾರ್ತಿಯರು ದೂರು ನೀಡಿದ್ದರು.
ದೂರಿನ ಬೆನ್ನಲ್ಲೇ ದೀಪಕ್ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಮೂಲಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.