ನ್ಯೂಯಾರ್ಕ್‌ನಲ್ಲಿ ಅಮ್ಮಂದಿರ ಓಟ; ಅಜರೆಂಕಾ, ಪಿರೊಂಕೋವಾ, ಸೆರೆನಾ ಕ್ವಾರ್ಟರ್ ಫೈನಲಿಗೆ
Team Udayavani, Sep 8, 2020, 10:32 PM IST
ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಅಮ್ಮಂದಿರ ಗೆಲುವಿನ ಆಟ ಮುಂದುವರಿದಿದೆ. ವಿಕ್ಟೋರಿಯಾ ಅಜರೆಂಕಾ, ಸ್ವೆತಾನಾ ಪಿರೊಂಕೋವಾ ಮತ್ತು ಸೆರೆನಾ ವಿಲಿಯಮ್ಸ್ ಕ್ವಾರ್ಟರ್ ಫೈನಲ್ ಪ್ರವೇಶದ ಸಂಭ್ರಮವನ್ನಾಚರಿಸಿದ್ದಾರೆ.
ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ 4 ವರ್ಷಗಳ ಬಳಿಕ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆಗೈದರು. ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಶೋವಾ ಆಟವನ್ನು ಅವರು 5-7, 6-1, 6-4ರಿಂದ ಕೊನೆಗಾಣಿಸಿದರು. ಮಾಜಿ ನಂ.1 ಆಟಗಾರ್ತಿ ಅಜರೆಂಕಾ ಅವರಿನ್ನು ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ತವರಿನ ಆಟಗಾರ್ತಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ಅವರನ್ನು ಮಾರ್ಟೆನ್ಸ್ ಮನೆಗೆ ಕಳುಹಿಸಿದರು. ಮಾರ್ಟೆನ್ಸ್ ಗೆಲುವಿನ ಅಂತರ 6-3, 6-3. 2016ರ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಅವರಿಗೆ ಶರಣಾದ ಬಳಿಕ ಅಜರೆಂಕಾ ಮೊದಲ ಸಲ ಈ ಹಂತದಲ್ಲಿ ಅದೃಷ್ಟಪರೀಕ್ಷೆ ಎದುರಿಸುತ್ತಿದ್ದಾರೆ.
ಪಿರೊಂಕೋವಾ ಕಠಿನ
ಯಾವುದೇ ಶ್ರೇಯಾಂಕ ಹೊಂದಿಲ್ಲದ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ 3 ಗಂಟೆಗಳ ಕಠಿನ ಕಾದಾಟದ ಬಳಿಕ ಫ್ರಾನ್ಸ್‌ನ ಎಲೈಜ್ ಕಾರ್ನೆಟ್ ಅವರನ್ನು 6-4, 6-7 (5-7), 6-3 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ತಮ್ಮ ಈ ಗೆಲುವನ್ನು ಅವರು 2 ವರ್ಷದ ಮಗ ಅಲೆಕ್ಸಾಂಡರ್‌ಗೆ ಅರ್ಪಿಸಿದರು. ಗೆಲುವಿನ ಬಳಿಕ ಅವರು ಆನಂದಬಾಷ್ಪ ಸುರಿಸುತ್ತ ಮಗನನ್ನು ಅಪ್ಪಿಕೊಂಡ ದೃಶ್ಯ ಎಲ್ಲರ ಗಮನ ಸೆಳೆಯಿತು. ಕೂಟದ ಮತ್ತೋರ್ವ ಅಮ್ಮ ಸೆರೆನಾ ವಿಲಿಯಮ್ಸ್ ಗ್ರೀಸ್‌ನ ಮರಿಯಾ ಸಕ್ಕರಿ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-3, 6-7 (6-8), 6-3 ಅಂತರದಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಬುಧವಾರ ರಾತ್ರಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ-ಪಿರೊಂಕೋವಾ ಮುಖಾಮುಖೀ ಆಗಲಿದ್ದಾರೆ. ಪಂದ್ಯದ ವೇಳೆ ಸೆರೆನಾ ಪುತ್ರಿ ಕೂಡ ಸ್ಟೇಡಿಯಂನಲ್ಲಿ ಸಂಬಂಧಿಕರೊಂದಿಗೆ ಕಂಡುಬಂದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.