ಆದರ್ಶ್ ಫ್ರೆಂಡ್ಸ್ ಅಂಬಾಗಿಲು ತಂಡಕ್ಕೆ ಅಟಲ್ ಟ್ರೋಫಿ
Team Udayavani, Dec 25, 2022, 11:14 PM IST
ಉಡುಪಿ: ಬಿಜೆಪಿ ಉಡುಪಿ ನಗರ, ಗ್ರಾಮಾಂತರ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಪ್ರಯುಕ್ತ ಎಂಜಿಎಂ ಮೈದಾನದಲ್ಲಿ ನಡೆದ “ಅಟಲ್ ಉತ್ಸವ’ದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾಟ “ಅಟಲ್ ಟ್ರೋಫಿ -2022′ ಆದರ್ಶ್ ಫ್ರೆಂಡ್ಸ್ ಅಂಬಾಗಿಲು ಪಾಲಾಯಿತು. ಮಹಿಳಾ ವಿಭಾಗದಲ್ಲಿ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಜಯಿಸಿತು.
ಪುರುಷರ ವಿಭಾಗದಲ್ಲಿ ಬೆಂಗ ಳೂರು ಬ್ಯಾಂಕ್ ಆಫ್ ಬರೋಡ ಪ್ರಾಯೋಜಿತ ಒಂದು ಲಕ್ಷ ರೂ., ನಗದು ಬಹುಮಾನ ಮತ್ತು ಅಟಲ್ ಟ್ರೋಫಿಯನ್ನು ಆದರ್ಶ್ ಫ್ರೆಂಡ್ಸ್ ಅಂಬಾಗಿಲು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಸ್ಥಾನ ಪಡೆದ ಮಾಲ್ಗುಡಿ ಗ್ಲ್ಯಾಡಿಯೇಟರ್ಸ್ ಬ್ರಹ್ಮಾವರ ತಂಡವು ಮಹಾರಾಷ್ಟ್ರ ಹಿಂದೂಜ ಹಾಸ್ಪಿಟಲ್ಸ್ ಪ್ರಾಯೋಜಿತ 75 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಆಳ್ವಾಸ್ ಮೂಡುಬಿದಿರೆ ತಂಡವು ಗುರ್ಮೆ ಫೌಂಡೇಶನ್ ಪ್ರಾಯೋಜಿತ 50 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ, 4ನೇ ಸ್ಥಾನಿ ಹರ್ಯಾಣ ತಂಡವು ಬಾಲಾಜಿ ವೆಂಚರ್ಸ್ ಪ್ರಾಯೋಜಿತ 25 ಸಾವಿರ ರೂ. ನಗದು ಬಹುಮಾನ, ಟ್ರೊಫಿ ಪಡೆದುಕೊಂಡಿತು.
ಮಹಿಳಾ ವಿಭಾ ಗ ದಲ್ಲಿ ತೆಂಕನಿಡಿ ಯೂರು ಸ್ಪೋರ್ಟ್ಸ್ ಕ್ಲಬ್ ಚಾಂಪಿ ಯನ್ ಪಟ್ಟದೊಂದಿಗೆ 20 ಸಾವಿರ ರೂ. ನಗದು ಬಹುಮಾನ, ರನ್ನರ್ ಅಪ್ ಎಸ್ಡಿಎಂ ಉಜಿರೆ 15 ಸಾವಿರ ರೂ. ನಗದು ಬಹುಮಾನ ಪಡೆದವು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ವಿ. ನಾಯ್ಕ, ಕಾರ್ಯಕ್ರಮ ಸಂಚಾಲಕ ಗಿರೀಶ್ ಅಂಚನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.