ಕಂಠೀರವಕ್ಕಾಗಿ ಅಥ್ಲೀಟ್ಸ್‌, ಜಿಂದಾಲ್‌ ಗುದ್ದಾಟ!


Team Udayavani, Jun 15, 2017, 3:28 PM IST

foot.jpg

ಬೆಂಗಳೂರು: ಒಂದು ಕಡೆ ಐ ಲೀಗ್‌ ಚಾಂಪಿಯನ್‌ ಭಾರತದ ಪ್ರತಿಷ್ಠಿತ ಫ‌ುಟ್‌ಬಾಲ್‌ ತಂಡ ಬೆಂಗಳೂರು ಎಫ್ಸಿ, ಇನ್ನೊಂದು ಕಡೆ ಒಲಿಂಪಿಕ್ಸ್‌, ಕಾಮನ್ವೆಲ್ತ್‌ ಹಾಗೂ ಏಷ್ಯಾಡ್‌ ಕೂಟಗಳಲ್ಲಿ ಭಾರತ ಪ್ರತಿನಿಧಿಸಿ ಪದಕ ತರಬಲ್ಲ ರಾಜ್ಯದ ಅಥ್ಲೀಟ್‌ಗಳು… ಇವರಿಬ್ಬರಿಗೂ ಇರುವುದು ಒಂದೇ ಸಮಸ್ಯೆ. ಅಭ್ಯಾಸ ನಡೆಸಲು ಮೈದಾನವಿಲ್ಲ. ಆದ್ದರಿಂದ ಇಬ್ಬರ ನಡುವೆ ಕಂಠೀರವ ಕ್ರೀಡಾಂಗಣಕ್ಕಾಗಿ ಹೋರಾಟ ಆರಂಭವಾಗಿದೆ. ಜಿಂದಾಲ್‌ ಮಾಲಿಕತ್ವದ ಬೆಂಗಳೂರು ಎಫ್ಸಿಗೆ ಫ‌ುಟ್‌ಬಾಲ್‌ ಅಭ್ಯಾಸ ನಡೆಸಲು ಕಂಠೀರವ ಅನಿವಾರ್ಯ. ವಿಪರ್ಯಾಸವೆಂದರೆ ಅವರು ಅಭ್ಯಾಸ ನಡೆಸಿದರೆ ಅಥ್ಲೀಟ್‌ ಗಳಿಗೆ ಅಭ್ಯಾಸ ನಡೆಸಲು ಮೈದಾನವೇ ಇಲ್ಲ. ಇಂತಹ ಇಬ್ಬಂದಿಯಲ್ಲಿ ಕಂಠೀರವದ ಹಕ್ಕಿಗಾಗಿ ಮುಸುಕಿನ ಗುದ್ದಾಟವೊಂದು ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಲ್ಲಿಯವರೆಗೆ ಕಂಠೀರವದಲ್ಲಿ ಫ‌ುಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದೊಂದಿಗೆ ಜಿಂದಾಲ್‌ ಕಂಪನಿ 3 ವರ್ಷದವರೆಗೆ ಅನುಮತಿ ಪಡೆದುಕೊಂಡಿತ್ತು. ಇದು ಮೇ ತಿಂಗಳಿಗೆ ಮುಗಿದಿದೆ. ಆದರೆ ಜಿಂದಾಲ್‌ನೊಂದಿಗೆ ಸರ್ಕಾರ ಮತ್ತೆ ಒಪ್ಪಂದ ಮುಂದುವರಿಸುತ್ತದೆ ಎಂಬ ಅನುಮಾನ ಅಥ್ಲೀಟ್‌ಗಳಿಗೆ ಶುರುವಾಗಿದೆ. ಇದಕ್ಕೆ ಅಥ್ಲೀಟ್‌ಗಳು ಸುತಾರಾಂ ಒಪ್ಪುತ್ತಿಲ್ಲ.

ಅಥ್ಲೀಟ್‌ಗಳ ವಿರೋಧಕ್ಕೆ ಕಾರಣವೂ ಇದೆ. ಬೆಂಗಳೂರು ಎಫ್ಸಿ ಪಂದ್ಯಗಳು ಕಂಠೀರವದಲ್ಲಿ ನಡೆದಾಗೆಲ್ಲ ನೂರಾರು ಅಥ್ಲೀಟ್‌ಗಳು ಅಭ್ಯಾಸ ನಡೆಸಲಾಗದೆ ಪರದಾಡುತ್ತಿದ್ದಾರೆ. ಅಥ್ಲೀಟ್‌ಗಳು ಒಳಪ್ರವೇಶಿಸುವುದಕ್ಕೇ ಫ‌ುಟ್‌ಬಾಲ್‌ ಸಂಘಟಕರು ಅವಕಾಶ ನೀಡುತ್ತಿಲ್ಲ. ಇದಕ್ಕೆಲ್ಲ ಜಿಂದಾಲ್‌ ಕಾರಣ ಎಂದು ಅಥ್ಲೀಟ್‌ಗಳು ಅಸಮಾಧಾನಗೊಂಡಿದ್ದಾರೆ. ಅಥ್ಲೀಟ್‌ಗಳು ಕ್ರೀಡಾ ಸಚಿವ ರಾಜ್ಯದ ಕ್ರೀಡಾ ದುರಂತದ ಸಾಕ್ಷಾತ್‌ ವರದಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಭೇಟಿಯಾಗಿ ಒಪ್ಪಂದ ಮುಂದುವರಿಸಲು ಅವಕಾಶ ನೀಡಬಾರದು ಎಂದು ಪ್ರತಿ ಮನವಿ ಸಲ್ಲಿಸಿದ್ದಾರೆ.

ಏನಿದು ಸಮಸ್ಯೆ?: ಕಂಠೀರವ ಕ್ರೀಡಾಂಗಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿದೆ. 2015ರಲ್ಲಿ ಜಿಂದಾಲ್‌ ಸ್ಟೀಲ್‌ ಕಂಪನಿ ಮೂರು ವರ್ಷದ ಒಪ್ಪಂದ ಮಾಡಿಕೊಂಡಿತ್ತು. 2017ಕ್ಕೆ ಒಪ್ಪಂದ ಅಂತ್ಯವಾಗಿದೆ.

ಸರ್ಕಾರ ಜಿಂದಾಲ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದ ಆರಂಭದಲ್ಲೇ ಅಥ್ಲೀಟ್‌ಗಳು ಇದನ್ನು ವಿರೋಧಿಸಿದ್ದರು.
ತಮ್ಮ ದೈನಂದಿನ ಅಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ದೂರಿದ್ದರು. ಆ ಬಳಿಕ ಫ‌ುಟ್‌ಬಾಲ್‌ ಕೂಟದಿಂದಾಗಿ ದಿನನಿತ್ಯ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿ ಬಂದಿದ್ದವು. ಪ್ರತಿಭಟನೆಗಳು ಕೂಡ ನಡೆದ ಉದಾಹರಣೆ ಇದೆ. 

600 ಅಥ್ಲೀಟ್‌ಗಳಿಗೆ ಫ‌ುಟ್‌ಬಾಲ್‌ನಿಂದ ಅಭ್ಯಾಸಕ್ಕೆ ತೊಂದರೆ
ಕಂಠೀರವದೊಂದಿಗಿನ ಒಪ್ಪಂದವನ್ನು ಮುಂದುವರಿಸಿ ಎಂದು ಜಿಂದಾಲ್‌ ಕಂಪನಿ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನು ವಿರೋಧಿಸಿ ಕರ್ನಾಟಕ ಅಥಟಿಕ್ಸ್‌ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ರೈ, ಮಾಜಿ ಅಥ್ಲೀಟ್‌ಗಳಾದ
ಉದಯ್‌ ಪ್ರಭು, ಪ್ರಮೀಳಾ ಅಯ್ಯಪ್ಪ, ಅರ್ಜುನ ಪುರಸ್ಕೃತ ಎಸ್‌.ಡಿ.ಈಶನ್‌ ಹಾಗೂ ಕೋಚ್‌ ಗಾಂವ್ಕರ್‌ ಒಳಗೊಂಡ ತಂಡ ಕ್ರೀಡಾ ಸಚಿವರನ್ನು ಮಂಗಳವಾರ ಭೇಟಿಯಾಗಿ ಪ್ರತಿ ಮನವಿ ಸಲ್ಲಿಸಿದೆ.

ಮನವಿಯ ಸಾರಾಂಶ: “ಕಂಠೀರವದಲ್ಲಿ 600ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ದಿನನಿತ್ಯ ಬೆಳಗ್ಗೆ,
ಸಂಜೆ ಅಭ್ಯಾಸ ನಡೆಸುತ್ತಾರೆ. ಆಗಾಗ್ಗೆ ಇಲ್ಲಿ ಫ‌ುಟ್‌ ಬಾಲ್‌ ಕೂಟಗಳು ನಡೆಯುತ್ತಿದ್ದರೆ ಅಭ್ಯಾಸ ನಡೆಸಲು
ಅಡ್ಡಿಯಾಗುತ್ತದೆ. ಫ‌ುಟ್‌ಬಾಲ್‌ ಪಂದ್ಯ ನಡೆಯುವ ಸ್ಥಳಕ್ಕೆ ಸಮೀಪವಾಗಿ ಜಾವೆಲಿನ್‌ ಥ್ರೋ, ಎತ್ತರ ಜಿಗಿತ,
ಉದ್ದಜಿಗಿತ ಅಭ್ಯಾಸ ನಡೆಸಬೇಕು. ಫ‌ುಟ್‌ಬಾಲ್‌ ಅಭ್ಯಾಸ ನಡೆಸುತ್ತಿದ್ದಾಗ ಜಾವೆಲಿನ್‌ ಎಸೆದರೆ ಅದು
ನೇರವಾಗಿ ಫ‌ುಟ್‌ಬಾಲಿಗರು ಅಭ್ಯಾಸ ನಡೆಸುವ ಸ್ಥಳಕ್ಕೇ ಹೋಗಿ ಬೀಳುತ್ತದೆ. ಹೀಗಾದರೆ ಅಭ್ಯಾಸ ಹೇಗೆ?
ಇದರಿಂದ ಜಾವೆಲಿನ್‌, ಹೈಜಂಪ್‌, ಹ್ಯಾಮರ್‌ ಥ್ರೋ, ಡಿಸ್ಕಸ್‌ನಲ್ಲಿ ನಮಗೆ ಪದಕಗಳ ಸಂಖ್ಯೆ ಕಡಿಮೆ ಆಗಿದೆ. ಜತೆಗೆ ಮುಂದಿನ ಏಷ್ಯಾಡ್‌, ಕಾಮನ್ವೆಲ್ತ್‌ ಕೂಟಗಳಿವೆ. ಇದಕ್ಕೆಲ್ಲ ನಾವು ಸಿದ್ಧರಾಗಬೇಕಿದೆ. ಹೀಗಾಗಿ ದಯವಿಟ್ಟು
ಜಿಂದಾಲ್‌ನೊಂದಿಗೆ ಒಪ್ಪಂದ ನವೀಕರಿಸಬಾರದು’ ಎನ್ನುವುದು ಹಿರಿಯ ಅಥ್ಲೀಟ್‌ಗಳ ಮನವಿ.

ಕಂಠೀರವ ಬಿಟ್ಟು ನಮಗೆ ಬೇರೆಆಯ್ಕೆಯಿಲ್ಲ: ಜಿಂದಾಲ್‌ ಮೂಲಗಳು
ಬೆಂಗಳೂರು ಫ‌ುಟ್‌ಬಾಲ್‌ ಕ್ರೀಡಾಂಗಣದಲ್ಲಿ ಇನ್ನೂ ನವೀಕರಣ ಕೆಲಸ ಆರಂಭವಾಗಿಲ್ಲ. ಅಲ್ಲೇ ನೀವು ಪಂದ್ಯ ನಡೆಸಿಕೊಂಡು ಹೋಗಬಹುದು? ಹೀಗಿದ್ದರೂ ನೀವು ಕಂಠೀರವ ಕ್ರೀಡಾಂಗಣ ಕೇಳುತ್ತಿರುವುದು ಏಕೆ? ಈ ಪ್ರಶ್ನೆಗೆ ಜಿಂದಾಲ್‌ನ ಫ‌ುಟ್‌ಬಾಲ್‌ ಮೂಲಗಳು ಪ್ರತಿಕ್ರಿಯೆ ಭಿನ್ನವಾಗಿದೆ. ಅಥ್ಲೀಟ್‌ಗಳಿಗೆ ತೊಂದರೆ ಮಾಡಬೇಕು ಎನ್ನುವ ಉದ್ದೇಶ ನಮಗಿಲ್ಲ. ಬೆಂಗಳೂರು ಫ‌ುಟ್‌ಬಾಲ್‌ ಕ್ರೀಡಾಂಗಣ ಎಎಫ್ಸಿ (ಏಷ್ಯನ್‌ ಫ‌ಟ್‌ಬಾಲ್‌ ಒಕ್ಕೂಟ) ಮಾನದಂಡದಂತೆ ಇಲ್ಲ. ಒಂದು ಕೂಟ ಆಯೋಜಿಸಲು ಕೆಲ ಮೂಲ ಸೌಕರ್ಯ ವ್ಯವಸ್ಥೆ ಇರಬೇಕು. ಅದು ಅಲ್ಲಿ ಇಲ್ಲ. ಹೀಗಾಗಿ ಕಂಠೀರವದಲ್ಲಿ ಕೂಟ ನಡೆಸಬೇಕಿರುವ ಅನಿವಾರ್ಯತೆ ನಮ್ಮ ಮುಂದಿದೆ. ಒಂದು ವೇಳೆ ಇದಕ್ಕೆ ಅವಕಾಶ ಸಿಗದಿದ್ದರೆ ಬೆಂಗಳೂರು ಎಫ್ಸಿ ತಂಡದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅಥ್ಲೀಟ್‌ಗಳಿಗೆ ತೊಂದರೆಯಾಗದಂತೆ
ಕ್ರಮ: ಪ್ರಮೋದ್‌ ಮಧ್ವರಾಜ್‌

ಜೆಎಸ್‌ಡಬ್ಲೂé,ಅಥ್ಲೀಟ್‌ಗಳ ನಡುವಿನ ಗುದ್ದಾಟದ ಕುರಿತಂತೆ ಉದಯವಾಣಿಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌
ಪ್ರತಿಕ್ರಿಯಿಸಿದ್ದಾರೆ. ಅಥ್ಲೀಟ್‌ಗಳ ಜತೆ ಸಭೆ ನಡೆಸಿದ್ದೇನೆ. ಕೆಲ ಹಿರಿಯ ಅಥ್ಲೀಟ್‌ ಗಳು ಬಂದು ಇಲ್ಲಿನ ಸಮಸ್ಯೆ ಬಗ್ಗೆ
ನನ್ನ ಗಮನಕ್ಕೆ ತಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಥ್ಲೀಟ್‌ಗಳಿಗೆ ತೊಂದರೆಯಾಗುವ ಯಾವ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.