ಎಟಿಪಿ ಫೈನಲ್ಸ್: ಜೊಕೋವಿಕ್ ಸೆಮಿಫೈನಲ್ ಪ್ರವೇಶ
Team Udayavani, Nov 16, 2018, 6:20 AM IST
ಲಂಡನ್: ವಿಶ್ವದ ಅಗ್ರಮಾನ್ಯ ಟೆನಿಸಿಗ ನೊವಾಕ್ ಜೊಕೋವಿಕ್ “ಎಟಿಪಿ ಫೈನಲ್ಸ್’ ಕೂಟದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಬುಧವಾರ ರಾತ್ರಿ ನಡೆದ “ಗುಸ್ತಾವೊ ಕುರ್ಟೆನ್’ ಗುಂಪಿನ ಲೀಗ್ ಸ್ಪರ್ಧೆಯಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ 6-4, 6-1 ಅಂತರದ ಗೆಲುವು ಸಾಧಿಸಿದರು.
ಇನ್ನೊಂದು ಪಂದ್ಯದಲ್ಲಿ ಜಾನ್ ಇಸ್ನರ್ ಅವರನ್ನು ಮರಿನ್ ಸಿಲಿಕ್ 6-7 (2), 6-3, 6-4ರಿಂದ ಮಣಿಸುವುದರೊಂದಿಗೆ ಜೊಕೋವಿಕ್ ಅವರ ಸೆಮಿ ಪ್ರವೇಶ ಅಧಿಕೃತಗೊಂಡಿತು. ಇದರೊಂದಿಗೆ 2018 ಎಟಿಪಿ ಫೈನಲ್ಸ್‌ನಲ್ಲಿ ಉಪಾಂತ್ಯ ತಲುಪಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಜೊಕೋವಿಕ್ ಅವರದಾಗಿದೆ. ಮೊದಲ ಪಂದ್ಯದಲ್ಲಿ ಅವರು ಇಸ್ನರ್‌ಗೆ ಸೋಲುಣಿಸಿದ್ದರು. ಕೊನೆಯ ಲೀಗ್ ಪಂದ್ಯದಲ್ಲಿ ಸಿಲಿಕ್ ವಿರುದ್ಧ ಸೆಣಸಲಿದ್ದಾರೆ.
ಜ್ವೆರೇವ್ ಈ ವಿಭಾಗದ ದ್ವಿತೀಯ ಸ್ಥಾನದಲ್ಲಿದ್ದಾರೆ. ಶುಕ್ರವಾರ ಇಸ್ನರ್‌ಗೆ ಸೋಲುಣಿಸಿದರೆ ಜ್ವೆರೇವ್‌ಗೆ ಸೆಮಿಫೈನಲ್ ಹಾದಿ ತೆರೆಯಲ್ಪಡಲಿದೆ. ಜ್ವೆರೇವ್ ಸೋತರೆ ಸಿಲಿಕ್ ಮತ್ತು ಇಸ್ನರ್ ಅವರಿಗೂ ಅವಕಾಶ ಎದುರಾಗಲಿದೆ. ಇಸ್ನರ್ ಈ ಕೂಟದಲ್ಲಿ ಆಡುತ್ತಿರುವುದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.