ಎಟಿಪಿ ಫೈನಲ್ಸ್: ಟ್ರೋಫಿ ಎತ್ತಿದ ಸಿಸಿಪಸ್
Team Udayavani, Nov 19, 2019, 12:29 AM IST
ಲಂಡನ್: ಗ್ರೀಕ್‌ನ ಯುವ ಟೆನಿಸಿಗ ಸ್ಟೆಫನೆಸ್‌ಸಿಸಿಪಸ್ ವರ್ಷಾಂತ್ಯದ ಎಟಿಪಿ ಫೈನಲ್ಸ್ ಟೆನಿಸ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ರವಿವಾರ ರಾತ್ರಿಯ ಫೈನಲ್‌ನಲ್ಲಿ ಅವರು ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿರುದ್ಧ 6-7 (6-8), 6-2, 7-6 (7-4) ಅಂತರದ ಕಠಿನ ಗೆಲುವು ಸಾಧಿಸಿದರು.
ಇದು ಸಿಸಿಪಸ್ ಮತ್ತು ಥೀಮ್ ಇಬ್ಬರಿಗೂ ಮೊದಲ “ಎಟಿಪಿ ಫೈನಲ್ಸ್’ ಪ್ರಶಸ್ತಿ ಸಮರವಾಗಿತ್ತು. ಹೀಗಾಗಿ ಯಾರೇ ಗೆದ್ದರೂ ಇಲ್ಲಿ ಮೊದಲ ಸಲ ಚಾಂಪಿಯನ್ ಆಗುತ್ತಿದ್ದರು. ತೀವ್ರ ಪೈಪೋಟಿಯ ಈ ಹೋರಾಟದಲ್ಲಿ ಅದೃಷ್ಟ ಸಿಸಿಪಸ್ ಪಾಲಾಯಿತು. ಗ್ರೀಕ್ ಆಟಗಾರನೊಬ್ಬನಿಗೆ ಮೊದಲ ಸಲ ಈ ಪ್ರಶಸ್ತಿ ಒಲಿಯಿತು. ಅಷ್ಟೇ ಅಲ್ಲ, ಗ್ರೀಕ್ ಟೆನಿಸಿಗನೊಬ್ಬ ಈ ಕೂಟಕ್ಕೆ ಅರ್ಹತೆ ಪಡೆದದ್ದು ಇದೇ ಮೊದಲ ಸಲವಾಗಿತ್ತು.
ಕಿರಿಯ ಟೆನಿಸ್ ಸಾಧಕ
21ರ ಹರೆಯದ ಸಿಸಿಪಸ್ ಈ ಕೂಟದ 8 ಮಂದಿ ಸ್ಪರ್ಧಿಗಳಲ್ಲೇ ಅತ್ಯಂತ ಕಿರಿಯ ಆಟಗಾರನಾಗಿದ್ದರು. ಇದರೊಂದಿಗೆ 2001ರ ಬಳಿಕ ಈ ಪ್ರಶಸ್ತಿ ಎತ್ತಿದ ಕಿರಿಯ ಟೆನಿಸಿಗನೆಂಬ ಹಿರಿಮೆಗೆ ಪಾತ್ರರಾದರು. ಅಂದು ಲೇಟನ್ ಹೆವಿಟ್ ಈ ಸಾಧನೆ ಮಾಡಿದ್ದರು. ಹಾಗೆಯೇ 1991ರ ಬಳಿಕ ಪದಾರ್ಪಣ ಕೂಟದಲ್ಲೇ ಫೈನಲ್ ಪ್ರವೇಶಿಸಿದ ಕಿರಿಯ ಆಟಗಾರನಾಗಿಯೂ ಸಿಸಿಪಸ್ ಮೂಡಿಬಂದಿದ್ದರು. ಅಂದಿನ ಸಾಧಕ ಜಿಮ್ ಕೊರಿಯರ್.
“ಮೊದಲ ಸೆಟ್ ಬಹಳ ಕಠಿನವಾಗಿತ್ತು. ಆದರೆ 2ನೇ ಸೆಟ್ ವೇಳೆ ಉತ್ತಮ ಪ್ರದರ್ಶನ ನೀಡಲು ಹೇಗೆ ಸಾಧ್ಯವಾಯಿತು ಎಂಬುದೇ ತಿಳಿಯುತ್ತಿಲ್ಲ. ಇಂಥ ದೊಡ್ಡ ಕೂಟದಲ್ಲಿ ಆಡುವಾಗ ಸಹಜವಾಗಿಯೇ ನಾನು ನರ್ವಸ್ ಆಗುತ್ತೇನೆ. ಆದರೆ ಇಂದು ಹೋರಾಟ ನೀಡುವಲ್ಲಿ ಯಶಸ್ವಿಯಾದೆ’ ಎಂದು ವಿಶ್ವದ 6ನೇ ರ್‍ಯಾಂಕಿಂಗ್ ಆಟಗಾರ ಸಿಸಿಪಸ್ ಪ್ರತಿಕ್ರಿಯಿಸಿದ್ದಾರೆ.
ರಫೆಲ್ ನಡಾಲ್ ಎದುರಿನ ಗ್ರೂಪ್ ಹಂತದ ಪಂದ್ಯದಲ್ಲಷ್ಟೇ ಪರಾಭವಗೊಂಡ ಸಿಸಿಪಸ್, ಸತತ 3 ದಿನವೂ ಪಂದ್ಯವಾಡಿ ಪ್ರಶಸ್ತಿ ಗೆದ್ದದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.