ಎಟಿಪಿ ಟೆನಿಸ್: ಜಾನ್ ಇಸ್ನರ್ ಫೈನಲಿಗೆ
Team Udayavani, Jul 22, 2019, 5:18 AM IST
ನ್ಯೂಪೋರ್ಟ್: ಇಲ್ಲಿನ ರೋಡ್ ಐಲ್ಯಾಂಡ್ನಲ್ಲಿ ನಡೆಯುತ್ತಿರುವ ಎಟಿಪಿ ಗ್ರಾಸ್ ಕೋರ್ಟ್ ಕೂಟದಲ್ಲಿ ಮೂರು ಬಾರಿಯ ಚಾಂಪಿಯನ್ ಜಾನ್ ಇಸ್ನರ್ ಕಠಿನ ಹೋರಾಟದಲ್ಲಿ 4ನೇ ಶ್ರೇಯಾಂಕದ ಫ್ರಾನ್ಸ್ನ ಯುಗೊ ಹಂಬರ್ಟ್ ಅವರನ್ನು ಸೋಲಿಸಿ ಫೈನಲ್ ಹಂತಕ್ಕೇರಿದರು.
ಮೊದಲೆರಡು ಸೆಟ್ಗಳಲ್ಲಿ ಇಸ್ನರ್ ಮತ್ತು ಹಂಬರ್ಟ್ ತಮ್ಮ ಸರ್ವೀಸ್ ಬ್ರೇಕ್ ಮಾಡಲು ಆಸ್ಪದ ಕೊಡಲಿಲ್ಲ. ಹೀಗಾಗಿ ಸೆಟ್ ಟೈಬ್ರೇಕರ್ಗೆ ಹೋಯಿತು. ಮೊದಲ ಸೆಟ್ ಕಳೆದುಕೊಂಡ ಇಸ್ನರ್ ಆಬಳಿಕ ಅಮೋಘವಾಗಿ ಆಡಿ ಸತತ ಎರಡು ಸೆಟ್ಗಳನ್ನು ಗೆದ್ದು ಮುನ್ನಡೆದರು. ಇಸ್ನರ್ ಗೆಲುವಿನ ಅಂತರ 6-7 (4-7), 7-6 (7-5), 6-3.
ಕಳೆದ ಎಪ್ರಿಲ್ನಲ್ಲಿ ಮಯಾಮಿ ಯಲ್ಲಿ ನಡೆದ ಕೂಟದಲ್ಲಿ ಫೈನಲ್ ತಲುಪಿದ ಬಳಿಕ ಇಸ್ನರ್ ಪಾದದ ಸ್ನಾಯು ಸೆಳೆತದಿಂದಾಗಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು.
ಇಸ್ನರ್ ಫೈನಲ್ ಹೋರಾಟದಲ್ಲಿ ಏಳನೇ ಶ್ರೇಯಾಂಕದ ಕಜಾಕ್ಸ್ಥಾನದ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು ಎದುರಿಸಲಿದ್ದಾರೆ. ಬಬ್ಲಿಕ್ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ನ ಮಾರ್ಸೆಲ್ ಗ್ರ್ಯಾನೊಲ್ಲರ್ ಅವರನ್ನು 7-6 (7-5), 3-6, 6-4 ಸೆಟ್ಗಳಿಂದ ಕೆಡವಿದರು.
ಪೇಸ್ ಜೋಡಿ ಪರಾಭವ
ಹಾಲ್ ಆಫ್ ಫೇಮ್ ಕೂಟದ ಪುರುಷರ ಡಬಲ್ಸ್ನಲ್ಲಿ ಲಿಯಾಂಡರ್ ಪೇಸ್-ಮಾರ್ಕಸ್ ಡೇನಿಯಲ್ (ನ್ಯೂಜಿಲ್ಯಾಂಡ್) ಜೋಡಿ ಸೆಮಿಫೈನಲ್ನಲ್ಲಿ ಪರಾಭವಗೊಂಡಿದೆ. ರವಿವಾರದ ಮುಖಾಮುಖೀಯಲ್ಲಿ ಶ್ರೇಯಾಂಕರಹಿತ ಮಾರ್ಸೆಲ್ ಗ್ರ್ಯಾನೊಲರ್- ಸರ್ಗಿ ಸ್ಟಾಖೋವ್ಸ್ಕಿ ಸೇರಿಕೊಂಡು ಇಂಡೋ-ಕಿವೀಸ್ ಜೋಡಿಯನ್ನು ಭಾರೀ ಹೋರಾಟ ನಡೆಸಿ 3-6, 7-6 (8), 11-9 ಅಂತರದಿಂದ ಮಣಿಸಿತು. ಲಿಯಾಂಡರ್ ಪೇಸ್ ಎಟಿಪಿ ಟೂರ್ ಸೆಮಿಫೈನಲ್ ತಲುಪಿದ ವಿಶ್ವದ 2ನೇ ಅತೀ ಹಿರಿಯ ಟೆನಿಸಿಗನಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.