ಎಟಿಪಿ ಟೆನಿಸ್: ಪ್ರಜ್ಞೇಶ್ ಗುಣೇಶ್ವರನ್ ಪರಾಭವ
Team Udayavani, Aug 2, 2019, 5:22 AM IST
ಲಾಸ್ ಕಬೋಸ್: ಇಲ್ಲಿ ನಡೆ ಯುತ್ತಿರುವ ಎಟಿಪಿ ಟೆನಿಸ್ ಪಂದ್ಯಾವಳಿ ಯಲ್ಲಿ ಭಾರತದ ಪ್ರಜ್ಞೇಶ್ ಗುಣೇಶ್ವರನ್ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 90ನೇ ಕ್ರಮಾಂಕ ದಲ್ಲಿರುವ ಎಡಗೈ ಆಟಗಾರ ಪ್ರಜ್ಞೇಶ್ ಅವರನ್ನು 28ನೇ ರ್‍ಯಾಂಕಿಂಗ್‌ನ ಅಮೆರಿಕದ ಟೇಲರ್ ಫ್ರಿಟ್ಜ್ 3 ಸೆಟ್‌ಗಳ ಕಾದಾಟದ ಬಳಿಕ 4-6, 6-3, 6-2 ಅಂತರದಿಂದ ಪರಾಭವಗೊಳಿಸಿದರು.
ಡಬಲ್ಸ್ ನಲ್ಲಿ ಮಿಶ್ರಫಲ
ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಎಟಿಪಿ 250 ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ನಲ್ಲಿ ದಿವಿಜ್ ಶರಣ್-ಜೊನಾಥನ್ ಎಲ್ರಿಚ್ 4ನೇ ಶ್ರೇಯಾಂಕದ ಬೆನ್ ಮೆಕ್‌ಲಾನ್-ಜಾನ್ ಪ್ಯಾಟ್ರಿಕ್ ಸ್ಮಿತ್ ಅವರನ್ನು 7-5, 6-1 ಅಂತರದಿಂದ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.
ಇದೇ ಕೂಟದಲ್ಲಿ ಸ್ಪರ್ಧಿಸಿದ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಪರಾಭವಗೊಂಡಿದ್ದಾರೆ. ಲಿಯಾಂಡರ್ ಪೇಸ್-ಜಾಕ್ ಸಾಕ್ ಅವರನ್ನು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್-ಜಾನ್ ಪಿಯರ್ 7-5, 6-2ರಿಂದ ಸೋಲಿಸಿದರು. ರೋಹನ್ ಬೋಪಣ್ಣ-ಬೆನೋಯಿಟ್ ಪೇರ್ ಅವರು ಮ್ಯಾಥ್ಯೂ ಎಬ್ಡೆನ್-ನಿಕೋಲಸ್ ಮೊನ್ರೊ ಕೈಯಲ್ಲಿ 2-6, 6-3, 10-7 ಅಂತರದ ಸೋಲನುಭವಿಸಿದರು.
ಅಂಕಿತಾ ಗೆಲುವಿನ ಆಟ
ಗ್ರೇಟ್ ಬ್ರಿಟನ್ ಐಟಿಎಫ್ ನಲ್ಲಿ 3ನೇ ಶ್ರೇಯಾಂಕದ ಅಂಕಿತಾ ರೈನಾ ಅವಳಿ ಗೆಲುವು ಸಾಧಿಸಿದ್ದಾರೆ. ವನಿತಾ ಸಿಂಗಲ್ಸ್ ನಲ್ಲಿ ಅವರು ತೈವಾನಿನ ಜೋನಾ ಗಾರ್ಲೆಂಡ್ ವಿರುದ್ಧ 7-5, 6-1 ಅಂತರದ ಮೇಲುಗೈ ಸಾಧಿಸಿ ದ್ವಿತೀಯ ಸುತ್ತಿಗೆ ಮುನ್ನ ಡೆದರು. ಡಬಲ್ಸ್ನಲ್ಲಿ ಬ್ರಿಟನ್ನಿನ ನೈಕ್ತಾ ಬೈನ್ಸ್ ಜತೆಗೂಡಿ ಯುರಿಕೊ ಮಿಯಾಜಾಕಿ-ಹೋಲಿ ಹಚಿನ್ಸನ್ ಜೋಡಿಗೆ 7-5, 6-4ರಿಂದ ಸೋಲುಣಿಸಿ ಕ್ವಾ.ಫೈನಲ್ ತಲುಪಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.