AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್ ಆಟ!
Team Udayavani, Nov 23, 2024, 9:56 PM IST
ಪರ್ತ್: ಬೋರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಪರ್ತ್ ಟೆಸ್ಟ್‌ನಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯಾದ ವಿರುದ್ಧ ಬಿಗಿಹಿಡಿತ ಸಾಧಿಸಿದೆ. ಮೊದಲ ದಿನ 150 ರನ್ನಿಗೆ ಆಲೌಟಾಗಿದ್ದ ಭಾರತ ಆಬಳಿಕ ಬಿಗು ದಾಳಿ ಸಂಘಟಿಸಿ 67 ರನ್ನಿಗೆ ಆಸ್ಟ್ರೇಲಿಯದ 7 ವಿಕೆಟ್ ಕೆಡವಿತ್ತು.
ಶನಿವಾರ 67 ರನ್ನಿನಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ 104 ರನ್ನಿಗೆ ಆಸೀಸ್ ಆಲೌಟಾಯಿತು. ಇದಕ್ಕುತ್ತರವಾಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಟಿ20 ಯುಗದಲ್ಲಿ ಟೆಸ್ಟ್ ಕ್ರಿಕೆಟ್‌ನ ನೈಜ ಆಟದ ರೀತಿಗೆ ಮರಳಿತು. ಅತ್ಯಂತ ನಿಧಾನವಾಗಿ ಕ್ರೀಸ್‌ಗೆ ಕಚ್ಚಿಕೊಂಡು ಆಡಿದ ಆರಂಭಿಕರಾದ ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ ತಂಡದ ಒಂದೂ ವಿಕೆಟ್ ಉರುಳಲು ಬಿಟ್ಟಿಲ್ಲ!
ರಾಹುಲ್ ಮತ್ತು ಜೈಸ್ವಾಲ್ ಅವರ ಆಟದ ರೀತಿ ನೋಡಿದರೆ ತಂಡ ಬೃಹತ್ ಮೊತ್ತ ಗಳಿಸುವುದು ಖಚಿತ. ಸದ್ಯ ಪ್ರವಾಸಿಗರು ವಿಕೆಟ್ ನಷ್ಟವಿಲ್ಲದೇ 172 ರನ್ ಗಳಿಸಿದ್ದು, 218 ರನ್‌ಗಳ ಮುನ್ನಡೆಯಲ್ಲಿದೆ. ಜೈಸ್ವಾಲ್ ಮತ್ತು ರಾಹುಲ್ ಭರ್ಜರಿ ಜೊತೆಯಾಟವಾಡಿದರು. 193 ಎಸೆತ ಎದುರಿಸಿದ ಜೈಸ್ವಾಲ್, 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಅಜೇಯ 90, 153 ಎಸೆತ ಎದುರಿಸಿದ ರಾಹುಲ್, 4 ಬೌಂಡರಿಗಳೊಂದಿಗೆ ಅಜೇಯ 62 ರನ್ ಬಾರಿಸಿ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದಾರೆ. ರವಿವಾರ 3ನೇ ದಿನದಾಟದ ವೇಳೆ ಭಾರತ, ಮುನ್ನಡೆಯನ್ನು 400+ ರನ್‌ಗೆ ಹೆಚ್ಚಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಬುಮ್ರಾಗೆ 5 ವಿಕೆಟ್:
2ನೇ ದಿನವೂ ಭಾರತೀಯ ವೇಗಿಗಳು ಬಿಗು ದಾಳಿ ಮುಂದುವರಿಸಿದರು. ಶುಕ್ರವಾರ 4 ವಿಕೆಟ್ ಪಡೆದಿದ್ದ ನಾಯಕ ಜಸ್‌ಪ್ರೀತ್ ಬುಮ್ರಾ ಒಟ್ಟಾರೆ 30ಕ್ಕೆ 5 ವಿಕೆಟ್ ಪಡೆದರು. ಹರ್ಷಿತ್ ರಾಣ 48ಕ್ಕೆ 3 ಮತ್ತು ಮೊಹಮ್ಮದ್ ಸಿರಾಜ್ 20ಕ್ಕೆ 2 ವಿಕೆಟ್ ಉರುಳಿಸಿದ ಪರಿಣಾಮ ಆಸೀಸ್ 104 ರನ್‌ಗೆ ಸರ್ವಪತನ ಕಂಡಿತು.
ವರ್ಷದಲ್ಲಿ ಅಧಿಕ ಟೆಸ್ಟ್ ಸಿಕ್ಸರ್: ಜೈಸ್ವಾಲ್ ಜಂಟಿ ಅಗ್ರ
ಪರ್ತ್ ಟೆಸ್ಟ್‌ನಲ್ಲಿ 2 ಸಿಕ್ಸರ್ ಬಾರಿಸಿರುವ ಜೈಸ್ವಾಲ್, ಈ ವರ್ಷ ಒಟ್ಟಾರೆ 33 ಸಿಕ್ಸರ್ ಬಾರಿಸಿದ್ದಾರೆ. ಅಲ್ಲಿಗೆ ವರ್ಷವೊಂದರಲ್ಲಿ ಅಧಿಕ ಟೆಸ್ಟ್ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರ1ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ ಕೂಡ 2014ರಲ್ಲಿ ಇಷ್ಟೇ ಸಿಕ್ಸರ್ ಬಾರಿಸಿದ್ದರು.
7 ಬಾರಿ 5 ವಿಕೆಟ್: ಕಪಿಲ್ ದಾಖಲೆ ಸರಿದೂಗಿಸಿದ ಬುಮ್ರಾ
ಸೆನಾ (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸೀಸ್) ರಾಷ್ಟ್ರಗಳಲ್ಲಿ 7ನೇ ಬಾರಿಗೆ ಟೆಸ್ಟ್ 5 ವಿಕೆಟ್ ಉರುಳಿಸಿರುವ ಬುಮ್ರಾ, ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿದೂಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.