ಇಂಡೋ-ಆಸೀಸ್ ಕಂಬೈನ್ಡ್ ಟೆಸ್ಟ್ ಇಲೆವೆನ್!
Team Udayavani, Jul 31, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮೆಲ್ಬರ್ನ್: ವರ್ಷಾಂತ್ಯದಲ್ಲಿ ನಡೆಯಲಿರುವ ಭಾರತ – ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಸರಣಿ ಈಗಾಗಲೇ ಸಂಚಲನ ಮೂಡಿಸಿದೆ.
ನಿರೀಕ್ಷೆಗಳು ಗರಿಗೆದರಿವೆ, ಈ ಸಂದರ್ಭದಲ್ಲಿ ಎರಡೂ ತಂಡಗಳ ಸಮಕಾಲೀನ ಆಟಗಾರರನ್ನೊಳಗೊಂಡ ಟೆಸ್ಟ್ ತಂಡವೊಂದನ್ನು ರಚಿಸಿದರೆ ಹೇಗಿದ್ದೀತು?
ಆಸ್ಟ್ರೇಲಿಯದ ವೇಗಿ ಜೋಶ್ ಹ್ಯಾಝಲ್‌ವುಡ್ ಇಂಥದೊಂದು ತಂಡವನ್ನು ರಚಿಸಿ ಕುತೂಹಲ ಮೂಡಿಸಿದ್ದಾರೆ.
ಆರಂಭಿಕರಾಗಿ ಡೇವಿಡ್ ವಾರ್ನರ್ – ಮಾಯಾಂಕ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ. ಬಳಿಕ ಸ್ಟೀವನ್ ಸ್ಮಿತ್, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಅನಂತರ ಚೇತೇಶ್ವರ್ ಪೂಜಾರ ಕಾಣಿಸಿಕೊಂಡಿದ್ದಾರೆ. ಮುಂದಿನ ಸ್ಥಾನಕ್ಕಾಗಿ ರೋಹಿತ್ ಶರ್ಮ ಮತ್ತು ಮಾರ್ನಸ್ ಲಬುಶೇನ್ ನಡುವೆ ಸ್ಪರ್ಧೆಯೊಂದು ಕಂಡುಬಂದಿದೆ.
ಸ್ವತಃ ತಾನೇ ಈ ತಂಡದ ಪ್ರಧಾನ ವೇಗಿಯಾಗಿದ್ದೇನೆ ಎಂದು ಹ್ಯಾಝಲ್‌ವುಡ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅವರು ಮೊದಲು ಸೀಮರ್‌ಗಳನ್ನೇ ಆಯ್ಕೆ ಮಾಡಿ ಬಳಿಕ ಉಳಿದ ಆಟಗಾರರನ್ನು ಹೆಸರಿಸಿರುವುದು ವಿಶೇಷ. ಇನ್ನೊಂದು ಸ್ವಾರಸ್ಯವಿದೆ, ಈ ತಂಡಕ್ಕೆ ನಾಯಕ, ವಿಕೆಟ್ ಕೀಪರ್ ಇಬ್ಬರೂ ಇಲ್ಲ!
ಭಾರತ-ಆಸ್ಟ್ರೇಲಿಯ ಸಮ್ಮಿಶ್ರ ಟೆಸ್ಟ್ ತಂಡ: ಮಾಯಾಂಕ್ ಅಗರ್ವಾಲ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಆಜರ, ಮಾರ್ನಸ್ ಲಬುಶೇನ್/ರೋಹಿತ್ ಶರ್ಮ, ನಥನ್ ಲಿಯೋನ್/ಆರ್. ಅಶ್ವಿನ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜಸ್‌ಪ್ರೀತ್ ಬುಮ್ರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.