ಆಸೀಸ್-ಕಿವೀಸ್ ಏಕದಿನ ಕ್ರಿಕೆಟ್ ಸರಣಿಯೂ ರದ್ದು
ಒಂದೇ ಪಂದ್ಯಕ್ಕೆ ಮುಗಿದ ಸರಣಿ; 1-0 ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯ
Team Udayavani, Mar 14, 2020, 11:40 PM IST
ಮೆಲ್ಬರ್ನ್: ಕೊರೊನಾ ವೈರಸ್ ಕಾರಣದಿಂದ ಆಸ್ಟ್ರೇಲಿಯ–ನ್ಯೂಜಿಲ್ಯಾಂಡ್ ನಡುವಿನ ಏಕದಿನ ಸರಣಿಯನ್ನು ಶನಿವಾರ ರದ್ದುಗೊಳಿಸಲಾಯಿತು. ಹೀಗಾಗಿ 3 ಪಂದ್ಯಗಳ ಈ ಸರಣಿ ಕೇವಲ ಒಂದು ಪಂದ್ಯಕ್ಕೆ ಸೀಮಿತಗೊಂಡಿತು.
ನ್ಯೂಜಿಲ್ಯಾಂಡ್ ಸರಕಾರ ರೂಪಿಸಿದ ನೂತನ ನಿಯಮಾನುಸಾರ, ಆಸ್ಟ್ರೇಲಿಯ ಪ್ರವಾಸದಲ್ಲಿರುವ ಕ್ರಿಕೆಟಿಗರು ಕೂಡಲೇ ತವರಿಗೆ ಮರಳಬೇಕಿದೆ ಎಂಬುದಾಗಿ “ಕ್ರಿಕೆಟ್ ಆಸ್ಟ್ರೇಲಿಯ’ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಹಾಗೆಯೇ ಕ್ರಿಕೆಟ್ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಗಳು ಸೇರಿ ಈ ಸರಣಿಯನ್ನು ಯಾವಾಗ ಮುಂದುವರಿಸಬೇಕೆಂದು ತೀರ್ಮಾನಿಸಲಿವೆ ಎಂದೂ ಹೇಳಿದೆ.
ನ್ಯೂಜಿಲ್ಯಾಂಡ್ ನೂತನ ನಿಯಮ
ನ್ಯೂಜಿಲ್ಯಾಂಡ್ ಸರಕಾರ ರೂಪಿಸಿದ ನೂತನ ನಿಯಮದಂತೆ, ಆಸ್ಟ್ರೇಲಿಯದಿಂದ ನೆರೆಯ ನ್ಯೂಜಿಲ್ಯಾಂಡಿಗೆ ಬರುವವರೆಲ್ಲ 14 ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಬೇಕಾಗುತ್ತದೆ. ಈ ನಿಯಮ ರವಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಈ ಕಾರಣಕ್ಕಾಗಿ ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಸರಣಿಯನ್ನು ಮೊಟಕುಗೊಳಿಸಿ ಕೂಡಲೇ ತವರಿಗೆ ವಾಪಸಾಗುವ ಯೋಜನೆ ಹಾಕಿಕೊಂಡರು.
“ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸರಕಾರದ ನಿಯಮವನ್ನು ಪಾಲಿಸಲಿದೆ. ಯಾವುದೇ ಕಾರಣಕ್ಕೂ ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಆಟಗಾರರ ಆರೋಗ್ಯ ನಮಗೆ ಬಹಳ ಮುಖ್ಯ’ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಸಿಡ್ನಿಯದೇ ಕೊನೆಯ ಪಂದ್ಯ
ಇದರೊಂದಿಗೆ ಪ್ರಸ್ತುತ ಜಾಗತಿಕ ಕ್ರಿಕೆಟ್‌ನಲ್ಲಿ ನಡೆಯಬೇಕಿರುವ ಎಲ್ಲ ಕ್ರಿಕೆಟ್ ಸರಣಿಗಳೂ ರದ್ದುಗೊಂಡಂತಾಗಿದೆ. ಕೆಲವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ.
ಶುಕ್ರವಾರ “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ನಡೆಸಲಾದ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ “ಚಾಪೆಲ್-ಹ್ಯಾಡ್ಲಿ ಸರಣಿಯ’ ಮೊದಲ ಏಕದಿನ ಪಂದ್ಯವೇ ಸದ್ಯದ ಸ್ಥಿತಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆನಿಸಿತು.
ಈ ಪಂದ್ಯವನ್ನು ಆಸ್ಟ್ರೇಲಿಯ 71 ರನ್ನುಗಳಿಂದ ಜಯಿಸಿತ್ತು. ಸರಣಿಯ ಮುಂದಿನೆರಡು ಪಂದ್ಯ ಮಾ. 15 (ಸಿಡ್ನಿ) ಮತ್ತು ಮಾ. 20ರಂದು (ಹೋಬರ್ಟ್) ನಡೆಯಬೇಕಿತ್ತು.
ಇದಕ್ಕೂ ಮೊದಲು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನೂ ರದ್ದುಗೊಳಿಸಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಿಂದಲೂ ಹಿಂದೆ ಸರಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.