Australia ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್‌ಗೆ ಕಿಡ್ನಿ ಕಾಯಿಲೆ; ಎರಡನೇ ಹಂತದಲ್ಲಿದೆ…
Team Udayavani, Dec 15, 2023, 6:05 AM IST
ಪರ್ತ್: ಆಸ್ಟ್ರೇಲಿಯದ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಅವರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲು ತ್ತಿದ್ದಾರೆ. ಒಂದು ಹಂತ ದಲ್ಲಿ ಅವರ ಜೀವಿತಾವಧಿ 12 ವರ್ಷವೆಂದು ಹೇಳಲಾಗಿತ್ತು.
ಆಸ್ಟ್ರೇಲಿಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬ ರಾಗಿ ರುವ ಗ್ರೀನ್ ಅವ ರಿಗೆ ಈ ಕಾಯಿಲೆಯ ಯಾವುದೇ ಲಕ್ಷಣ ಗಳಿಲ್ಲ. ಆದರೆ ಕಾಯಿಲೆ ಯನ್ನು ಬದ ಲಾಯಿಸ ಲಾಗದು ಎಂದು ಹೇಳಿದ್ದಾರೆ.
ನಾನು ಹುಟ್ಟುವಾಗಲೇ ಮೂತ್ರ ಪಿಂಡದ ಕಾಯಿಲೆಯಿತ್ತು ಎಂದು ಹೆತ್ತವರಿಗೆ ತಿಳಿಸಲಾಗಿತ್ತು. ಆದರೆ ಕಾಯಿಲೆಯ ಲಕ್ಷಣಗಳೇನೂ ಇಲ್ಲ. ಆದರೆ ಅಲ್ಟ್ರಾ ಸೌಂಡ್ ಪರೀಕ್ಷೆ ನಡೆಸಿದ ಬಳಿಕ ಕಾಯಿಲೆ ಇರುವುದು ಖಚಿತವಾಯಿತು ಎಂದು ಅವರು ತಿಳಿಸಿದರು.ಮೂತ್ರಪಿಂಡವು ಪ್ರಸ್ತು ಶೇಕಡಾ 60ರಷ್ಟು ಕೆಲಸ ಮಾಡುತ್ತಿದ್ದು ಎರಡನೇ ಹಂತದಲ್ಲಿದೆ. ಒಂದು ವೇಳೆ ಈ ಕಾಯಿಲೆ ಐದನೇ ಹಂತ ತಲುಪಿದರೆ ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡಬೇಕಾದ ಅಗತ್ಯವಿದೆ ಎಂದು 24ರ ಹರೆಯದ ಗ್ರೀನ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.