ಆಸ್ಟ್ರೇಲಿಯ ಸೆಮಿಫೈನಲಿಗೆ : ಆತಿಥೇಯ ಇಂಗ್ಲೆಂಡಿಗೆ 64 ರನ್ ಸೋಲು
Team Udayavani, Jun 26, 2019, 5:19 AM IST
ಲಂಡನ್: ಚಾಂಪಿಯನ್ನರಂತೆ ಆಡಿದ ಆಸ್ಟ್ರೇಲಿಯ ತಂಡವು ಮಂಗಳವಾರದ ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು 64 ರನ್ನುಗಳಿಂದ ಭರ್ಜರಿಯಾಗಿ ಮಣಿಸಿದೆ. ಫಿಂಚ್, ಬೆಹ್ರಂಡಾಫ್ì, ಸ್ಟಾರ್ಕ್ ಗೆಲುವಿನ ರೂವಾರಿಗಳಾಗಿ ಕಾಣಿಸಿಕೊಂಡರು.
ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡವು ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತಲ್ಲದೇ ಅಧಿಕೃತವಾಗಿ ಸೆಮಿಫೈನಲಿಗೇರಿದ ಮೊದಲ ತಂಡವೆನಿಸಿತು.
ಆರನ್ ಫಿಂಚ್ ಅವರ ಆಕರ್ಷಕ ಶತಕ ಹಾಗೂ ವಾರ್ನರ್, ಸ್ಮಿತ್ ಅವರ ಸೊಗಸಾದ ಆಟದಿಂದಾಗಿ ಆಸ್ಟ್ರೇಲಿಯ ತಂಡವು 7 ವಿಕೆಟಿಗೆ 285 ರನ್ ಪೇರಿಸಿದರೆ ಮಿಚೆಲ್ ಸ್ಟಾರ್ಕ್ ಮತ್ತು ಬೆಹ್ರಂಡಾಫ್ì ಅವರ ಮಾರಕ ದಾಳಿಗೆ ಕುಸಿದ ಇಂಗ್ಲೆಂಡ್ 44.4 ಓವರ್‌ಗಳಲ್ಲಿ 221 ರನ್ನಿಗೆ ಆಲೌಟಾಯಿತು.
ಗೆಲ್ಲಲು ಕಠಿನ ಗುರಿ ಪಡೆದ ಇಂಗ್ಲೆಂಡ್ ತಂಡವು ಆರಂಭದಿಂದಲೇ ಎಡವಿತು.
ಸ್ಟಾರ್ಕ್, ಬೆಹ್ರಂಡಾಫ್ì ದಾಳಿಗೆ ಉತ್ತರಿಸಲು ಇಂಗ್ಲೆಂಡ್ ಸಂಪೂರ್ಣ ವಿಫಲವಾಯಿತು. ಬೆನ್ ಸ್ಟೋಕ್ಸ್ ಅವರನ್ನು ಬಿಟ್ಟರೆ ಉಳಿದವರ್ಯಾರೂ ಉತ್ತಮ ಬ್ಯಾಟಿಂಗ್ ತೋರಲಿಲ್ಲ. 89 ರನ್ ಗಳಿಸಿದ ಸ್ಟೋಕ್ಸ್ ಔಟಾಗುತ್ತಲೇ ಇಂಗ್ಲೆಂಡಿನ ಸೋಲು ಖಚಿತವಾಯಿತು. ಬೆಹ್ರಂಡಾಫ್ì 44 ರನ್ನಿಗೆ 5 ವಿಕೆಟ್ ಕಿತ್ತು ಮಿಂಚಿದರೆ ಸ್ಟಾರ್ಕ್ 43 ರನ್ನಿಗೆ 4 ವಿಕೆಟ್ ಕಬಳಿಸಿದರು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಫಿಂಚ್ ಮತ್ತು ಡೇವಿಡ್ ವಾರ್ನರ್ ಎಂದಿನಂತೆ ಬಿರುಸಿನ ಆಟಕ್ಕೆ ಮುಂದಾದರು. ಇಂಗ್ಲೆಂಡ್ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಓವರೊಂದಕ್ಕೆ ಐದರಂತೆ ರನ್ ಪೇರಿಸತೊಡಗಿದರು. 22 ಓವರ್ ತನಕ ಅವರಿಬ್ಬರ ಜತೆಯಾಟ ಮುಂದುವರಿದಿತ್ತು.
ಶತಕ ಜತೆಯಾಟ
ಫಿಂಚ್ ಮತ್ತು ವಾರ್ನರ್ ಮೊದಲ ವಿಕೆಟಿಗೆ ಮತ್ತೂಮ್ಮೆ ಶತಕ (123)ದ ಜತೆಯಾಟ ನಡೆಸಿದರು. ಈ ಕೂಟದಲ್ಲಿ ಇದು ಅವರ ಸತತ ಐದನೇ 50 ಪ್ಲಸ್ ಜತೆಯಾಟವಾಗಿದ್ದು ವಿಶ್ವಕಪ್ ದಾಖಲೆಯಾಗಿದೆ. ಈ ಕೂಟದ ಗರಿಷ್ಠ ರನ್ ಪೇರಿಸಿದ ವಾರ್ನರ್ 62 ಎಸೆತಗಳಿಂದ 53 ರನ್ ಪೇರಿಸಿದ ಬಳಿಕ ಬೇರ್ಪಟ್ಟರು.
15 ರನ್ ಗಳಿಸಿದ ವೇಳೆ ಜೀವದಾನ ಪಡೆದ ಫಿಂಚ್ 116 ಎಸೆತ ಎದುರಿಸಿ ಏಕದಿನ ಕ್ರಿಕೆಟ್‌ನಲ್ಲಿ 15ನೇ ಮತ್ತು ಈ ವಿಶ್ವಕಪ್‌ನ ಎರಡನೇ ಶತಕ ಪೂರ್ತಿಗೊಳಿಸಿದರು.
11 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್ ಬಾರಿಸಿದ್ದರು. ಆದರೆ ಶತಕದ ಬಳಿಕದ ಮೊದಲ ಎಸೆತದಲ್ಲಿ ಅವರು ಔಟಾದ ಬಳಿಕ ಆಸ್ಟ್ರೇಲಿಯ ಒತ್ತಡಕ್ಕೆ ಸಿಲುಕಿತು. ಆ ಬಳಿಕ ಸ್ಮಿತ್ ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು.
ಹಠಾತ್ ಕುಸಿತ
ಒಂದು ಹಂತದಲ್ಲಿ 36 ಓವರ್‌ಗಳಲ್ಲಿ 185 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ ತಂಡ 300 ಪ್ಲಸ್ ರನ್ ಗಳಿಸುವತ್ತ ಮುನ್ನುಗ್ಗುತ್ತಿತ್ತು. ಆದರೆ ಆತಿಥೇಯರ ನಿಖರ ದಾಳಿಯಿಂದಾಗಿ ಕೆಲವು ವಿಕೆಟ್ ಕಳೆದುಕೊಂಡ ಬಳಿಕ ಆಸ್ಟ್ರೇಲಿಯದ ರನ್‌ವೇಗಕ್ಕೂ ಕಡಿವಾಣ ಬಿತ್ತು.
ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ಬಿರುಸಿನ ಆಟವಾಡಿದರೆ ಬಿಗ್ ಹಿಟ್ಟರ್‌ಗಳಾದ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟಾಯಿನಿಸ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ
ಆರನ್ ಫಿಂಚ್ ಸಿ ವೋಕ್ಸ್ ಬಿ ಆರ್ಚರ್ 100
ಡೇವಿಡ್ ವಾರ್ನರ್ ಸಿ ರೂಟ್ ಬಿ ಮೊಯಿನ್ 53
ಉಸ್ಮಾನ್ ಖ್ವಾಜಾ ಬಿ ಸ್ಟೋಕ್ಸ್ 23
ಸ್ಟೀವನ್ ಸ್ಮಿತ್ ಸಿ ಆರ್ಚರ್ ಬಿ ವೋಕ್ಸ್ 38
ಗ್ಲೆàನ್ ಮ್ಯಾಕ್ಸ್‌ವೆಲ್ ಸಿ ಬಟ್ಲರ್ ಬಿ ವುಡ್ 12
ಮಾರ್ಕಸ್ ಸ್ಟೋಯಿನಿಸ್ ರನೌಟ್ 8
ಅಲೆಕ್ಸ್ ಕ್ಯಾರಿ ಔಟಾಗದೆ 38
ಪ್ಯಾಟ್ ಕಮಿನ್ಸ್ ಸಿ ಬಟ್ಲರ್ ಬಿ ವೋಕ್ಸ್ 1
ಮಿಚೆಲ್ ಸ್ಟಾರ್ಕ್ ಔಟಾಗದೆ 4
ಇತರ 8
ಒಟ್ಟು ( 50 ಓವರ್‌ಗಳಲ್ಲಿ 7 ವಿಕೆಟಿಗೆ) 285
ವಿಕೆಟ್ ಪತನ: 1-123, 2-173, 3-185, 4-213, 5-228, 6-250, 7-259.
ಬೌಲಿಂಗ್: ಕ್ರಿಸ್ ವೋಕ್ಸ್ 10-0-46-2
ಜೋಫÅ ಆರ್ಚರ್ 9-0-56-1
ಮಾರ್ಕ್ ವುಡ್ 9-0-59-1
ಬೆನ್ ಸ್ಟೋಕ್ಸ್ 6-0-29-1
ಮೊಯಿನ್ ಅಲಿ 6-0-42-1
ಆದಿಲ್ ರಶೀದ್ 10-0-49-0
ಇಂಗ್ಲೆಂಡ್
ಜೇಮ್ಸ್ ವಿನ್ಸ್ ಬಿ ಬೆಹೆÅಂಡಾಫ್ì 0
ಜಾನಿ ಬೇರ್‌ಸ್ಟೊ ಸಿ ಕಮಿನ್ಸ್ ಬಿ ಬೆಹೆÅಂಡಾಫ್ì 27
ಜೋ ರೂಟ್ ಎಲ್‌ಬಿಡಬ್ಲ್ಯು ಬಿ ಸ್ಟಾರ್ಕ್ 8
ಇಯಾನ್ ಮಾರ್ಗನ್ ಸಿ ಕಮಿನ್ಸ್ ಬಿ ಸ್ಟಾರ್ಕ್ 4
ಬೆನ್ ಸ್ಟೋಕ್ಸ್ ಬಿ ಸ್ಟಾರ್ಕ್ 89
ಜಾಸ್ ಬಟ್ಲರ್ ಸಿ ಖ್ವಾಜ ಬಿ ಸ್ಟೋಯಿನಸ್ 25
ಕ್ರಿಸ್ ವೋಕ್ಸ್ ಸಿ ಫಿಂಚ್ ಬಿ ಬೆಹೆÅಂಡಾಫ್ì 26
ಮೊಯಿನ್ ಅಲಿ ಸಿ ಕ್ಯಾರಿ ಬಿ ಬೆಹೆÅಂಡಾಫ್ì 6
ಆದಿಲ್ ರಶೀದ್ ಸಿ ಸ್ಟೋಯಿನಿಸ್ ಬಿ ಸ್ಟಾರ್ಕ್ 25
ಜೋಫÅ ಆರ್ಚರ್ ಸಿ ವಾರ್ನರ್ ಬಿ ಬೆಹೆÅಂಡಾಫ್ì 1
ಮಾರ್ಕ್ ವುಡ್ ಔಟಾಗದೆ 1
ಇತರ 9
ಒಟ್ಟು ( 44.4 ಓವರ್‌ಗಳಲ್ಲಿ ಆಲೌಟ್) 221
ವಿಕೆಟ್ ಪತನ: 1-0, 2-15, 3-26, 4-53, 5-124, 6-177, 7-187, 8-202, 9-211.
ಬೌಲಿಂಗ್: ಜಾಸ್ ಬೆಹೆÅಂಡಾಫ್ì 10-0-44-5
ಮಿಚೆಲ್ ಸ್ಟಾರ್ಕ್ 8.4-1-43-4
ಪ್ಯಾಟ್ ಕಮಿನ್ಸ್ 8-1-41-0
ನಥನ್ ಲಿಯಾನ್ 9-0-43-0
ಮಾರ್ಕಸ್ ಸ್ಟೋಯಿನಿಸ್ 7-0-29-1
ಗ್ಲೆನ್ ಮ್ಯಾಕ್ಸ್‌ವೆಲ್ 2-0-15-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.