ಟಿ20 ವಿಶ್ವಕಪ್‌: ಐರ್ಲೆಂಡ್‌ ಮೇಲೆ ಕಾಂಗರೂ ಸವಾರಿ


Team Udayavani, Oct 31, 2022, 10:46 PM IST

ಟಿ20 ವಿಶ್ವಕಪ್‌: ಐರ್ಲೆಂಡ್‌ ಮೇಲೆ ಕಾಂಗರೂ ಸವಾರಿ

ಬ್ರಿಸ್ಬೇನ್: ಆಕ್ರಮಣಕಾರಿ ಅರ್ಧ ಶತಕದ ಮೂಲಕ ಫಾರ್ಮ್ ಗೆ ಮರಳಿದ ನಾಯಕ ಆರನ್‌ ಫಿಂಚ್‌, ಐರ್ಲೆಂಡ್‌ ಎದುರಿನ ಸೋಮವಾರದ ಟಿ20 ವಿಶ್ವಕಪ್‌ ಸೂಪರ್‌-12 ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿನ ರೂವಾರಿಯಾಗಿ ಮೂಡಿಬಂದರು.

ಇದರೊಂದಿಗೆ ಹಾಲಿ ಚಾಂಪಿಯನ್‌ ಆಸೀಸ್‌ ತನ್ನ 4ನೇ ಪಂದ್ಯದಲ್ಲಿ 2ನೇ ಜಯ ದಾಖಲಿಸಿತು. ಅಂತರ 42 ರನ್‌.

ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯ 5 ವಿಕೆಟಿಗೆ 179 ರನ್‌ ಪೇರಿಸಿದರೆ, ಐರ್ಲೆಂಡ್‌ 18.1 ಓವರ್‌ಗಳಲ್ಲಿ 137ಕ್ಕೆ ಆಲೌಟ್‌ ಆಯಿತು. ಅರ್ಹತಾ ಸುತ್ತಿನಲ್ಲಿ ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸನ್ನು ಹೊರದಬ್ಬಿ, ಸೂಪರ್‌-12 ಹಂತದಲ್ಲಿ ಬಲಿಷ್ಠ ಇಂಗ್ಲೆಂಡ್‌ಗೆ ಸೋಲಿನ ಆಘಾತವಿಕ್ಕಿದ ಐರ್ಲೆಂಡ್‌ ಆಟ ಚಾಂಪಿಯನ್ನರ ಮುಂದೆ ನಡೆಯಲಿಲ್ಲ. ಅದು ಎಲ್ಲ ವಿಭಾಗಗಳಲ್ಲೂ ವೈಫ‌ಲ್ಯ ಕಂಡಿತು. ಆದರೂ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಗಿದೆ. 4 ಪಂದ್ಯಗಳಲ್ಲಿ ಐರ್ಲೆಂಡ್‌ ಎದುರಿಸಿದ 2ನೇ ಸೋಲು ಇದಾಗಿದೆ. ಒಂದು ಪಂದ್ಯ ರದ್ದುಗೊಂಡಿದೆ.

ಆಸ್ಟ್ರೇಲಿಯವೀಗ ಅಂಕಪಟ್ಟಿಯಲ್ಲಿ ಇಂಗ್ಲೆಂಡನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಏರಿದೆ. ನ್ಯೂಜಿಲ್ಯಾಂಡ್‌ನ‌ಂತೆ 5 ಅಂಕ ಹೊಂದಿದೆ. ಆದರೆ ಕಾಂಗರೂಗಳ ರನ್‌ರೇಟ್‌ ಮಾತ್ರ ಮೈನಸ್‌ನಲ್ಲಿದೆ. ಶುಕ್ರವಾರದ ಅಂತಿಮ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು ಎದುರಿಸಬೇಕಿದ್ದು, ಇಲ್ಲಿ ದೊಡ್ಡ ಗೆಲುವಿನೊಂದಿಗೆ ರನ್‌ರೇಟ್‌ನಲ್ಲಿ ಪ್ರಗತಿ ಸಾಧಿಸಬೇಕಿದೆ. ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಇನ್ನೂ 2 ಪಂದ್ಯಗಳನ್ನು ಆಡಬೇಕಿರುವುದರಿಂದ ಇಲ್ಲಿ ನಾಕೌಟ್‌ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಫಿಂಚ್‌ ಆಕ್ರಮಣಕಾರಿ ಆಟ
ಆರನ್‌ ಫಿಂಚ್‌ ಆಕ್ರಮಣಕಾರಿ ಆಟದ ಮೂಲಕ ಐರ್ಲೆಂಡ್‌ ಬೌಲರ್‌ಗಳ ಮೇಲೆರಗಿ ಹೋದರು. 44 ಎಸೆತಗಳಿಂದ 63 ರನ್‌ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ 5 ಫೋರ್‌, 3 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು. ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಫಿಂಚ್‌ ಹೊಡೆದ ಮೊದಲ ಅರ್ಧ ಶತಕ ಇದಾಗಿದೆ.

ಡೇವಿಡ್‌ ವಾರ್ನರ್‌ (8) ಅವರನ್ನು ಬೇಗನೇ ಕಳೆದುಕೊಂಡ ಆಸ್ಟ್ರೇಲಿಯಕ್ಕೆ ಆರನ್‌ ಫಿಂಚ್‌-ಮಿಚೆಲ್‌ ಮಾರ್ಷ್‌ ಆಧಾರ ವಾದರು. ಇವರ ನಡುವೆ 6 ಓವರ್‌ಗಳ ಜತೆಯಾಟ ಸಾಗಿತು. 52 ರನ್‌ ಒಟ್ಟುಗೂಡಿತು. ಮಾರ್ಷ್‌ ಕೂಡ ಆಕ್ರಮಣಕಾರಿ ಆಟವಾಡಿದರು. ಅವರ 28 ರನ್‌ 2 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಆಸೀಸ್‌ ಸರದಿಯಲ್ಲಿ ಸಿಡಿದು ನಿಂತ ಮತ್ತೋರ್ವ ಬ್ಯಾಟರ್‌ ಮಾರ್ಕಸ್‌ ಸ್ಟೋಯಿನಿಸ್‌. ಅವರು 3 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 35 ರನ್‌ ಹೊಡೆದರು.

ಡೆತ್‌ ಓವರ್‌ನಲ್ಲಿ ಫಿಂಚ್‌ ಮತ್ತು ಸ್ಟೋಯಿನಿಸ್‌ ವಿಕೆಟ್‌ ಉರುಳಿದ್ದರಿಂದ ಆಸೀಸ್‌ ರನ್‌ಗತಿ ಕುಂಟಿತಗೊಂಡಿತು. ಇನ್ನೂರರ ಗಡಿ ಮರೀಚಿಕೆಯಾಯಿತು.

4 ಓವರ್‌, 5 ವಿಕೆಟ್‌!
ಐರ್ಲೆಂಡ್‌ ಚೇಸಿಂಗ್‌ ಅತ್ಯಂತ ಆಘಾತಕಾರಿಯಾಗಿತ್ತು. ಸ್ಟಾರ್ಕ್‌, ಮ್ಯಾಕ್ಸ್‌ವೆಲ್‌, ಕಮಿನ್ಸ್‌ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಅದು 4 ಓವರ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು. ಸ್ಕೋರ್‌ ಕೇವಲ 25 ರನ್‌ ಆಗಿತ್ತು. ವನ್‌ಡೌನ್‌ ಬ್ಯಾಟರ್‌ ಲಾರ್ಕನ್‌ ಟ್ಯುಕರ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು, ಕೆಳ ಕ್ರಮಾಂಕದ ಆಟಗಾರರ ಅಲ್ಪಸ್ವಲ್ಪ ಬೆಂಬಲ ಪಡೆದು ಹೋರಾಟವೊಂದನ್ನು ಸಂಘಟಿಸಿದರು. ಸ್ಕೋರ್‌ 130ರ ಗಡಿ ದಾಟಿತು. ಟ್ಯುಕರ್‌ ಪಂದ್ಯದಲ್ಲೇ ಸರ್ವಾಧಿಕ 71 ರನ್‌ ಬಾರಿಸಿದರು (48 ಎಸೆತ, 9 ಬೌಂಡರಿ, 1 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-5 ವಿಕೆಟಿಗೆ 179 (ಫಿಂಚ್‌ 63, ಸ್ಟೋಯಿನಿಸ್‌ 35, ಮಾರ್ಷ್‌ 28, ಮೆಕಾರ್ಥಿ 29ಕ್ಕೆ 3, ಲಿಟ್ಲ 21ಕ್ಕೆ 2). ಐರ್ಲೆಂಡ್‌-18.1 ಓವರ್‌ಗಳಲ್ಲಿ 137 (ಟ್ಯುಕರ್‌ 71, ಡೆಲಾನಿ 14, ಮ್ಯಾಕ್ಸ್‌ವೆಲ್‌ 14ಕ್ಕೆ 2, ಝಂಪ 19ಕ್ಕೆ 2, ಕಮಿನ್ಸ್‌ 28ಕ್ಕೆ 2, ಸ್ಟಾರ್ಕ್‌ 43ಕ್ಕೆ 2).
ಪಂದ್ಯಶ್ರೇಷ್ಠ: ಆರನ್‌ ಫಿಂಚ್‌.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.