ಟಿ20: ಕಾಂಗರೂ ವಿಶ್ವದಾಖಲೆಯ ಚೇಸಿಂಗ್‌

Team Udayavani, Feb 17, 2018, 6:30 AM IST

AUS-NZ-WIn-20-T-16.jpg

ಆಕ್ಲೆಂಡ್‌: ಟಿ20 ಕ್ರಿಕೆಟಿನ ಅಸಾಮಾನ್ಯ ಚೇಸಿಂಗ್‌ ಒಂದಕ್ಕೆ ಸಾಕ್ಷಿಯಾದ ಆಸ್ಟ್ರೇಲಿಯ ನೂತನ ವಿಶ್ವದಾಖಲೆಯೊಂದಿಗೆ ತ್ರಿಕೋನ ಸರಣಿಯ ಶುಕ್ರವಾರದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡನ್ನು 5 ವಿಕೆಟ್‌ಗಳಿಂದ ಮಣಿಸಿದೆ.

ಆಕ್ಲೆಂಡ್‌ನ‌ಲ್ಲಿ ನಡೆದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 243 ರನ್‌ ಪೇರಿಸಿದರೆ, ಆಸ್ಟ್ರೇಲಿಯ 18.5 ಓವರ್‌ಗಳಲ್ಲಿ 5ಕ್ಕೆ 245 ರನ್‌ ಬಾರಿಸಿ ಸಂಭ್ರಮಿಸಿತು.

ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿನ ಸರ್ವಾಧಿಕ ಮೊತ್ತದ ಯಶಸ್ವೀ ಚೇಸಿಂಗ್‌. 2015ರ ಜೊಹಾನ್ಸ್‌ಬರ್ಗ್‌ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ 19.2 ಓವರ್‌ಗಳಲ್ಲಿ 7ಕ್ಕೆ 231 ರನ್‌ ಬೆನ್ನಟ್ಟಿ ಗೆದ್ದದ್ದು ಈವರೆಗಿನ ದಾಖಲೆಯಾಗಿತ್ತು.

ಡೇವಿಡ್‌ ವಾರ್ನರ್‌ (24 ಎಸೆತ, 59 ರನ್‌, 5 ಸಿಕ್ಸರ್‌, 4 ಬೌಂಡರಿ) ಮತ್ತು ಡಿ’ಆರ್ಸಿ ಶಾರ್ಟ್‌ (44 ಎಸೆತ, 76 ರನ್‌, 8 ಬೌಂಡರಿ, 3 ಸಿಕ್ಸರ್‌) ಅವರ ಅಮೋಘ ಆರಂಭ ಆಸೀಸ್‌ ಚೇಸಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇವರು 8.3 ಓವರ್‌ಗಳಿಂದ 121 ರನ್‌ ರಾಶಿ ಹಾಕಿದರು. 

ಮ್ಯಾಕ್ಸ್‌ವೆಲ್‌ 31 ರನ್‌ (14 ಎಸೆತ, 3 ಬೌಂಡರಿ, 2 ಸಿಕ್ಸರ್‌), ಫಿಂಚ್‌ ಅಜೇಯ 36 ರನ್‌ (14 ಎಸೆತ, 3 ಸಿಕ್ಸರ್‌, 3 ಬೌಂಡರಿ) ಸಿಡಿಸಿ ತಂಡದ ಅಮೋಘ ಗೆಲುವಿಗೆ ಕಾರಣರಾದರು. ಶಾರ್ಟ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಗಪ್ಟಿಲ್‌, ಮುನ್ರೊ ಮಿಂಚಿನಾಟ
ನ್ಯೂಜಿಲ್ಯಾಂಡಿಗೆ ಮಾರ್ಟಿನ್‌ ಗಪ್ಟಿಲ್‌-ಕಾಲಿನ್‌ ಮುನ್ರೊ ಮಿಂಚಿನ ಆರಂಭ ಒದಗಿಸಿದ್ದರು. ಕೇವಲ 10.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 132 ರನ್‌ ಸೂರೆಗೈದು ಮೆರೆದರು. ಈ ಬ್ಯಾಟಿಂಗ್‌ ಅಬ್ಬರದ ವೇಳೆ ಗಪ್ಟಿಲ್‌ 105 ರನ್‌, ಮುನ್ರೊ 76 ರನ್‌ ಹೊಡೆದರು.

ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವಿತ್ತ ಗಪ್ಟಿಲ್‌ ಕೇವಲ 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಒಟ್ಟು 54 ಎಸೆತಗಳಲ್ಲಿ 105 ರನ್‌ ಪೇರಿಸಿದರು. ಇದರಲ್ಲಿ 9 ಪ್ರಚಂಡ ಸಿಕ್ಸರ್‌ ಹಾಗೂ 6 ಬೌಂಡರಿ ಒಳಗೊಂಡಿತ್ತು. ಇದು ಗಪ್ಟಿಲ್‌ ಅವರ 2ನೇ ಟಿ20 ಅಂತಾರಾಷ್ಟ್ರೀಯ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಗಪ್ಟಿಲ್‌ 17ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಕಾಂಗರೂ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು.

ಸರ್ವಾಧಿಕ ರನ್‌ ದಾಖಲೆ
ಈ ಬ್ಯಾಟಿಂಗ್‌ ಸಾಹಸದ ವೇಳೆ ಗಪ್ಟಿಲ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸರ್ವಾಧಿಕ ರನ್‌ ಪೇರಿಸಿದ ವಿಶ್ವದಾಖಲೆಗೂ ಪಾತ್ರರಾದರು (73 ಪಂದ್ಯ, 2,145 ರನ್‌). ತಮ್ಮದೇ ದೇಶದ ಬ್ರೆಂಡನ್‌ ಮೆಕಲಮ್‌ ದಾಖಲೆಯನ್ನು ಮುರಿದರು (71 ಪಂದ್ಯ, 2,140 ರನ್‌). 1,956 ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

ಮುನ್ರೊ ಬರೀ 33 ಎಸೆತಗಳಿಂದ 76 ರನ್‌ ಚಚ್ಚಿದರು. ಸಿಡಿಸಿದ್ದು 6 ಬೌಂಡರಿ ಹಾಗೂ 6 ಸಿಕ್ಸರ್‌. ಆದರೆ ಇವರ ಸಿಡಿಲಬ್ಬರದ ಆಟದ ಹೊರತಾಗಿಯೂ ತಂಡ ಸೋಲು ಕಾಣಬೇಕಾಯಿತು. ಆಸ್ಟ್ರೇಲಿಯವೀಗ ಸತತ 4 ಗೆಲುವಿನೊಂದಿಗೆ ಅಜೇಯ ಓಟ ಬೆಳೆಸಿದೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-6 ವಿಕೆಟಿಗೆ 243 (ಗಪ್ಟಿಲ್‌ 105, ಮುನ್ರೊ 76, ರಿಚರ್ಡ್‌ಸನ್‌ 40ಕ್ಕೆ 2, ಟೈ 64ಕ್ಕೆ 2). ಆಸ್ಟ್ರೇಲಿಯ-18.5 ಓವರ್‌ಗಳಲ್ಲಿ 5 ವಿಕೆಟಿಗೆ 245 (ಶಾರ್ಟ್‌ 76, ವಾರ್ನರ್‌ 59, ಫಿಂಚ್‌ ಅಜೇಯ 36, ಮ್ಯಾಕ್ಸ್‌ವೆಲ್‌ 31, ಸೋಧಿ 35ಕ್ಕೆ 1, ಬೌಲ್ಟ್ 42ಕ್ಕೆ 1). ಪಂದ್ಯಶ್ರೇಷ್ಠ: ಡಿ’ಆರ್ಸಿ ಶಾರ್ಟ್‌.

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Australia qualify for the WTC25 Final

World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್‌ ಸ್ಥಾನ ಭದ್ರ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.