ಆಸ್ಟ್ರೇಲಿಯ ಕ್ರಿಕೆಟ್: ನಿಯಮ ಪಾಲಿಸಿದ ಅಪರೂಪದ ನಿದರ್ಶನ
ಕಳೆದ 7 ವರ್ಷಗಳಲ್ಲಿ ಉತ್ತಮ ನಡವಳಿಕೆಯಿಂದ ಕ್ರಿಕೆಟ್ ಋತು ಮುಗಿಸಿದ ಮೊದಲ ಉದಾಹರಣೆ!
Team Udayavani, May 10, 2019, 6:00 AM IST
ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ತಂಡ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೈದಾನದಲ್ಲಿ ನಿಯ ಮ ಉಲ್ಲಂಘಿಸದೆ ಕ್ರಿಕೆಟ್ ಋತು ವನ್ನು ಮುಗಿಸಿದೆ ಎಂದು ‘ಕ್ರಿಕೆಟ್ ಆಸ್ಟ್ರೇಲಿಯ’ ಹೇಳಿದೆ. ಇದಕ್ಕೆಲ್ಲ ಕಾರಣ, ಕಳೆದ ವರ್ಷ ಆಸ್ಟ್ರೇಲಿಯ ತಂಡ ನಡೆಸಿದ ಚೆಂಡುವಿರೂಪ ಹಗರಣ. ಅಲ್ಲಿಂದ ತಂಡದೊಳಗಿನ ವಾತಾವರಣ ಬದಲು ಮಾಡಲು ಆಸ್ಟ್ರೇಲಿಯ ಪಣ ತೊಟ್ಟು, ಇದರಲ್ಲಿ ಧಾರಾಳ ಯಶಸ್ಸು ಕಂಡಿದೆ.
2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಬಾನ್‌ಕ್ರಾಫ್ಟ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ಅದಾದ ಮೇಲೆ ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳು, ಉಳಿದಿಬ್ಬರಿಗೆ ತಲಾ ಒಂದು ವರ್ಷ ನಿಷೇಧ ಹೇರ ಲಾಗಿತ್ತು. ಈ ಘಟನೆಯ ಬಳಿಕ ಆಸ್ಟ್ರೇಲಿಯ ತಂಡದೊಳಗಿನ ಆಂತರಿಕ ಸಂಸ್ಕೃತಿ ಸುಧಾರಿಸಲು ‘ಕ್ರಿಕೆಟ್ ಆಸ್ಟ್ರೇಲಿಯ’ ನಿರ್ಧರಿಸಿತ್ತು. ಇದಕ್ಕಾಗಿ ಸಮಿತಿ ರಚನೆ ಮಾಡಿ ತನಿಖೆ ಮಾಡಿಸಲಾಗಿತ್ತು. ಆಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದವು.
ಗೆಲ್ಲಲೇಬೇಕೆಂಬ ಏಕೈಕ ಒತ್ತಡ
ಕ್ರಿಕೆಟ್ ಆಸ್ಟ್ರೇಲಿಯದ ಆಟಗಾರರು ವಿಪರೀತ ಅಹಂಕಾರಿಗಳಾಗಿದ್ದರು. ಗೆಲ್ಲಲೇಬೇಕೆಂಬ ಏಕೈಕ ಒತ್ತಡ ಅವರ ಮೇಲಿದ್ದರಿಂದ, ಇದಕ್ಕಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುವ ಸ್ಥಿತಿಗೆ ತಲುಪಿದ್ದರು. ಸ್ವತಃ ಕ್ರಿಕೆಟ್ ಆಸ್ಟ್ರೇಲಿಯದ ಮಾಜಿ ಮುಖ್ಯಸ್ಥರೇ ಅಂತಹ ಒತ್ತಡವನ್ನು ಹೇರಿದ್ದರು. ಆದ್ದರಿಂದ ಆಸೀಸ್ ಆಟಗಾರರು ಅಸಹಾಯಕ ಸ್ಥಿತಿಗೆ ತಲುಪಿದ್ದರು.
ಇದೆಲ್ಲದರ ಪರಿಣಾಮ ಮೈದಾನದಲ್ಲಿ ಅವರ ವರ್ತನೆ ಹದಗೆಟ್ಟಿತು. ಪ್ರತೀ ಬಾರಿಯೂ ನಿಯಮ ಉಲ್ಲಂಘನೆಯಾದ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಆಟಗಾರ ವರ್ತನೆಯಲ್ಲಿ ಸುಧಾರಣೆಯಲ್ಲಿ ಬದಲಾವಣೆ ತರಲು ಮಂಡಳಿ ಪ್ರಯತ್ನಿಸಿದೆ. ಬರೀ ಗೆಲುವೊಂದೇ ಮಾನದಂಡವಲ್ಲ, ನಮ್ಮ ವರ್ತನೆಯಿಂದಲೂ ಎದುರಾಳಿಗಳನ್ನು ಗೆಲ್ಲಬೇಕೆಂಬ ಸಂದೇಶವನ್ನು ನೀಡಲು ಕ್ರಿಕೆಟ್ ಆಸ್ಟ್ರೇಲಿಯ ಯಶಸ್ವಿಯಾಗಿದೆ. ಇದನ್ನು ಆಟಗಾರರು ಒಪ್ಪಿಕೊಂಡಿದ್ದರಿಂದ ವಾತಾವರಣದಲ್ಲಿ ಸಂಪೂರ್ಣ ಬದಲಾವಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.