ಆಸ್ಟ್ರೇಲಿಯಾ ಓಪನ್: ದಾಖಲೆಯ ಎಂಟನೇ ಕಿರೀಟ ಮುಡಿಗೇರಿಸಿಕೊಂಡ ಜೊಕೊವಿಕ್
Team Udayavani, Feb 2, 2020, 8:56 PM IST
ಮೆಲ್ಬೊರ್ನ್: ವಿಶ್ವದ ನಾಲ್ಕನೇ ಶ್ರೇಯಾಂಕಿತ ನೋವಾಕ್ ಜೊಕೊವಿಕ್ ಅವರು ಡೊಮೆನಿಕ್ ಥೀಮ್ ಅವರನ್ನು ಸೋಲಿಸುವ ಮೂಲಕ ಎಂಟನೇ ಬಾರಿ ಆಸ್ಟ್ರೇಲಿಯಾ ಓಪನ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಮತ್ತು ಈ ಗೆಲುವಿನೊಂದಿಗೆ ಜೊಕೊವಿಕ್ ಅವರು ಮತ್ತೆ ನಂಬರ್ ಒನ್ ಪಟ್ಟಕ್ಕೆ ಮರಳಿದ್ದಾರೆ.
ಇಂದು ನಡೆದ ರೋಚಕ ಫೈನಲ್ ಕಾದಾಟದಲ್ಲಿ ಅನುಭವಿ ಜೊಕೊವಿಕ್ ಅವರು ಆಸ್ಟ್ರಿಯಾ ಆಟಗಾರ ಡೊಮಿನಿಕ್ ಥೀಮ್ ಅವರಿಂದ ಪ್ರಬಲ ಪೈಪೋಟಿಯನ್ನೇ ಎದುರಿಸಬೆಕಾಯಿತು. ಅಂತಿಮವಾಗಿ 6-4, 4-6, 2-6, 6-3, 6-4 ಸೆಟ್ ಗಳಿಂದ ಮಣಿಸುವ ಮೂಲಕ ತಮ್ಮ ಎಂಟನೇ ಆಸ್ಟ್ರೇಲಿಯಾ ಓಪನ್ ಕಿರೀಟವನ್ನು ಮುಡಿಗೆರಿಸಿಕೊಂಡರು.
ಇದು ಜೊಕೊವಿಕ್ ಅವರ 17ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಾಗಿದೆ. 19 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರಫೆಲ್ ನಡಾಲ್ ಮತ್ತು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್ ಫೆಡರರ್ ಅವರು ಮೊದಲ ಎರಡು ಸ್ಥಾನಗಳಿದ್ದಾರೆ.
ಈ ಗೆಲುವಿನೊಂದಿಗೆ ಒಂದೇ ಕೂಟದಲ್ಲಿ ಎಂಟಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಟೆನಿಸಿಗರ ಪಟ್ಟಿಯಲ್ಲೂ ಜೊಕೊವಿಕ್ ಮೂರನೇ ಸ್ಥಾನದಲ್ಲಿದ್ದಾರೆ. ನಡಾಲ್ ಅವರು 12 ಫ್ರೆಂಚ್ ಓಪನ್ ಗೆದ್ದಿದ್ದರೆ, ಫೆಡರರ್ ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
The king has returned ?
After almost four hours, @DjokerNole def. Dominic Thiem 6-4 4-6 2-6 6-3 6-4 to claim his eighth Australian Open crown.#AO2020 | #AusOpen pic.twitter.com/EJOKBy040s
— #AusOpen (@AustralianOpen) February 2, 2020
32 ವರ್ಷ ಪ್ರಾಯದ ಸರ್ಬಿಯಾದ ಈ ಆಟಗಾರ 2008, 2011, 2012, 2013, 2015, 2016, 2019 ಮತ್ತು 2020ರಲ್ಲಿ ಆಸ್ಟ್ರೇಲಿಯಾ ಓಪನ್ ಕೂಟದ ಚಾಂಪಿಯನ್ ಆಗಿದ್ದಾರೆ.
Gr8⃣ness
? 2008
? 2011
? 2012
? 2013
? 2015
? 2016
? 2019
? 2020#AusOpen | #AO2020 | @DjokerNole pic.twitter.com/g0j8o3gZA7— #AusOpen (@AustralianOpen) February 2, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.