ಆಸ್ಟ್ರೇಲಿಯ ಓಪನ್ ಟಿಟಿ ಜಿ. ಸಥಿಯನ್ ಮುನ್ನಡೆ
Team Udayavani, Nov 10, 2018, 6:05 AM IST
ಹೊಸದಿಲ್ಲಿ: ಭಾರತದ ಜಿ. ಸಥಿಯನ್ ಲಿನ್ಸ್‌ನಲ್ಲಿ ನಡೆಯುತ್ತಿರುವ “ಆಸ್ಟ್ರೇಲಿಯ ಓಪನ್ ಟೇಬಲ್ ಟೆನಿಸ್’ ಟೂರ್ನಿಯಲ್ಲಿ ವಿಶ್ವದ 16ನೇ ಶ್ರೇಯಾಂಕಿತ ಪೋರ್ಚುಗೀಸ್ ಆಟಗಾರ ಮಾರ್ಕೊಸ್ ಫ್ರೀಟಾಸ್‌ಗೆ 4-3ರಿಂದ ಅಘಾತವಿಕ್ಕಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 35ನೇ ಸ್ಥಾನದಲ್ಲಿರುವ ಸಥಿಯನ್ ಈ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.
ಮೊದಲ ಗೇಮ್‌ನಲ್ಲಿ 4-11 ಅಂಕಗಳಿಂದ ಸೋತ ಸಥಿಯನ್ ಅನಂತರದ 2 ಗೇಮ್‌ಗಳನ್ನು 11-9, 11-9 ಅಂಕಗಳಿಂದ ತಮ್ಮದಾಗಿಸಿಕೊಂಡರು. ಆದರೆ ಪೋರ್ಚುಗಿಸ್‌ನ ಆಟಗಾರ ತೀವ್ರ ಫೈಪೋಟಿ ನೀಡಿ ಅನಂತರದ 2 ಗೇಮ್‌ಗಳನ್ನು 11-8, 11-6 ಅಂತರರಿಂದ ಜಯಿಸಿದರು. ಸಥಿಯನ್ ಆಗ 2-3 ಗೇಮ್‌ಗಳ ಹಿನ್ನಡೆ ಅನುಭವಿಸಿದರು. 6ನೇ ಗೇಮ್‌ನಲ್ಲಿ ಉತ್ತಮ ಆಟವಾಡಿದ ಸಥಿಯನ್ 11-9 ಅಂಕಗಳಿಂದ ಜಯಿಸಿ 3-3 ಅಂತರದಿಂದ ಸಮಗೊಳಿಸಿದರು. ಅಂತಿಮ ಗೇಮ್‌ನಲ್ಲಿಯೂ ಇದೇ ಆಟ ಮುಂದುವರಿಸಿದ ಸಥಿಯನ್ 11-7 ಅಂಕಗಳ ಅಂತರದಿಂದ ಜಯಿಸಿದರು.
“ಇದು ಅತ್ಯುತ್ತಮ ಜಯವಾಗಿದೆ. ಇಂದಿನ ನನ್ನ ಆಟದಿಂದ ತೃಪ್ತಿ ಇದೆ. ಇದೇ ಪ್ರದರ್ಶನದೊಂದಿಗೆ ಈ ಟೂರ್ನಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮುಂದೆ ಸಾಗುತ್ತೇನೆ’ ಎಂದು ಸಥಿಯನ್ ಖುಷಿ ವ್ಯಕ್ತಪಡಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಲು ಸಥಿಯನ್ ವಿಶ್ವದ 2ನೇ ಶ್ರೇಯಾಂಕಿತ ಚೀನದ ಕ್ಸು ಕ್ಸಿನ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.