![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 8, 2022, 5:47 PM IST
ಕೊಲಂಬೊ: ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಭರ್ಜರಿಯಾಗಿ ಆರಂಭಿಸಿದೆ.
ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ.
ಮಂಗಳವಾರ ರಾತ್ರಿ ಕೊಲಂಬೋದ “ಆರ್. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 19.3 ಓವರ್‌ಗಳಲ್ಲಿ 128ಕ್ಕೆ ಕುಸಿದರೆ, ಆಸ್ಟ್ರೇಲಿಯ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 134 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ನಾಯಕ ಆರನ್ ಫಿಂಚ್ 61 ರನ್ (40 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಡೇವಿಡ್ ವಾರ್ನರ್ 70 ರನ್ (44 ಎಸೆತ, 9 ಬೌಂಡರಿ) ಹೊಡೆದು ಅಜೇಯರಾಗಿ ಉಳಿದರು.
ಲಂಕಾ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದವರು ವೇಗಿಗಳಾದ ಜೋಶ್ ಹ್ಯಾಝಲ್‌ವುಡ್ (16ಕ್ಕೆ 4) ಮತ್ತು ಮಿಚೆಲ್ ಸ್ಟಾರ್ಕ್ (26ಕ್ಕೆ 3).
12 ಓವರ್ ಅಂತ್ಯದ ತನಕ ಶ್ರೀಲಂಕಾ ಸುಸ್ಥಿತಿಯಲ್ಲೇ ಇತ್ತು. ಆಗ ಶಣಕ ಪಡೆ 2 ವಿಕೆಟಿಗೆ 100 ರನ್ ಪೇರಿಸಿ ಸವಾಲಿನ ಮೊತ್ತದ ಸೂಚನೆ ನೀಡಿತ್ತು. ಆದರೆ ಹ್ಯಾಝಲ್‌ವುಡ್ ಒಂದೇ ಓವರ್‌ನಲ್ಲಿ ಕುಸಲ್ ಮೆಂಡಿಸ್, ಭನುಕ ರಾಜಪಕ್ಸ ಮತ್ತು ದಸುನ್ ಶಣಕ ವಿಕೆಟ್ ಉರುಳಿಸಿ ಲಂಕೆಯನ್ನು ಸಂಕಷ್ಟಕ್ಕೆ ತಳ್ಳಿದರು. ಮತ್ತೆ ಅದು ಚೇತರಿಸಿಕೊಳ್ಳಲೇ ಇಲ್ಲ. ಈ ಸಾಧನೆಗಾಗಿ ಹ್ಯಾಝಲ್‌ವುಡ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 19.3 ಓವರ್‌ಗಳಲ್ಲಿ 128 (ಅಸಲಂಕ 38, ನಿಸ್ಸಂಕ 36, ಗುಣತಿಲಕ 26, ಹ್ಯಾಝಲ್‌ವುಡ್ 16ಕ್ಕೆ 4, ಸ್ಟಾರ್ಕ್ 26ಕ್ಕೆ 3). ಆಸ್ಟ್ರೇಲಿಯ-14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 134 (ವಾರ್ನರ್ ಔಟಾಗದೆ 70, ಫಿಂಚ್ ಔಟಾಗದೆ 61).
ಪಂದ್ಯಶ್ರೇಷ್ಠ: ಜೋಶ್ ಹ್ಯಾಝಲ್‌ವುಡ್.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.