ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
Team Udayavani, Feb 7, 2023, 9:53 AM IST
ಸಿಡ್ನಿ: ಆಸ್ಟ್ರೇಲಿಯದ ಟಿ-20 ತಂಡದ ಕಪ್ತಾನ ಆರೋನ್ ಫಿಂಚ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಫಿಂಚ್, ಮಂಗಳವಾರ ಟಿ-20 ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ.
2021 ರಲ್ಲಿ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಬಳಿಕ, 2022 ರಲ್ಲಿ ತವರಿನಲ್ಲಿ ನಡೆದ ಟಿ-20 ವಿಶ್ವಕಪ್ ನಲ್ಲಿ ಫಿಂಚ್ ನಾಯಕತ್ವದ ತಂಡ ಸೆಮಿ ಫೈನಲ್ ತಲುಪುವ ಮುನ್ನವೇ ಕೂಟದಿಂದ ಹೊರ ಬಿದ್ದಿತ್ತು.
2024 ರ ಟಿ-20 ವಿಶ್ವಕಪ್ ವರೆಗೆ ನಾನು ಆಡಲು ಆಗುವುದಿಲ್ಲ ಎನ್ನುವುದನ್ನು ಅರಿತುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಕಪ್ತಾನ ಸ್ಥಾನದಿಂದ ಕೆಳಗಿಳಿದು, ತಂಡಕ್ಕೆ ಹೊಸ ಯೋಜನೆಗಳನ್ನು ರೂಪಿಸಲು ಹೆಚ್ಚು ಅವಕಾಶ ಕೊಡಲು ಸಹಕರಿವುದು ಇದು ಸರಿಯಾದ ಸಮಯ ಅನ್ನಿಸುತ್ತದೆ. ನನ್ನ ಪ್ರಕಾರ ಟಿ-20 ತಂಡ ಹೊಸ ಹಂತಕ್ಕೆ ಹೋಗಲು ಇದು ಸೂಕ್ತ ಸಮಯ. 2024 ರಲ್ಲಿ ವಿಶ್ವಕಪ್ ಇರಲಿದೆ. ತಂಡಕ್ಕೆ ಬರುವ ಹೊಸ ನಾಯಕ ತನ್ನ ಸಹಕಾರ, ಮಾರ್ಗದರ್ಶನವನ್ನು ನೀಡಿ ಅವರ ದಿಕ್ಕಿ ನಲ್ಲಿ ತಂಡವನ್ನು ಸಾಗಿಸಲು ಇದು ಸೂಕ್ತವಾದ ಸಂದರ್ಭವಾಗಿದೆ ಎಂದಿದ್ದಾರೆ.
ನನ್ನ 12 ವರ್ಷದ ಕ್ರಿಕೆಟ್ ಜರ್ನಿಯಲ್ಲಿ ನೂರಾರು ಅವಿಸ್ಮರಣೀಯ ನೆನಪುಗಳಿವೆ. ಹಲವರು ಸಿಹಿ ಕಹಿ ಅನುಭವಗಳಿವೆ. ನನ್ನ ಕುಟುಂಬ ಯಾವಾಗಲೂ ನನ್ನ ಬೆನ್ನ ಹಿಂದೆಯೇ ಇತ್ತು ಎಂದಿದ್ದಾರೆ.
2011 ರಲ್ಲಿ ಟಿ-20 ಕ್ರಿಕೆಟ್ ಗೆ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ್ದರು. 2 ಶತಕ,19 ಅರ್ಧ ಶತಕದೊಂದಿಗೆ 3120 ರನ್ ಗಳಿಸಿದ್ದಾರೆ. ಫಿಂಚ್ ಬಿಗ್ ಬ್ಯಾಷ್ ಲೀಗ್ ನ ಮೆಲ್ಬೋರ್ನ್ ರೆನೆಗೇಡ್ಸ್ ತಂಡದಲ್ಲಿ ಮುಂದುವರೆಯಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.