ಆಸೀಸ್ ಐತಿಹಾಸಿಕ ಸರಣಿ ಗೆಲುವು ವಿಶ್ವಕಪ್‌ಗಿಂತಲೂ ದೊಡ್ಡದು:ಕೊಹ್ಲಿ
Team Udayavani, Jan 7, 2019, 6:58 AM IST
ಸಿಡ್ನಿ : “ಇದೊಂದು ಅತೀ ದೊಡ್ಡ ಸಾಧನೆ; ವಿಶ್ವಕಪ್ ಗಿಂತಲೂ ದೊಡ್ಡದಾದ ವಿಜಯ ಇದು’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಇದೇ ಮೊದಲ ಬಾರಿಗೆ ಗೆದ್ದು ಭಾರತ ಮಾಡಿರುವ ಐತಿಹಾಸಿಕ ಸಾಧನೆಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.
1947-48ರಲ್ಲಿ ಭಾರತ ಕ್ರಿಕೆಟ್ ತಂಡ ಲಾಲಾ ಅಮರ್ ನಾಥ್ ನಾಯಕತ್ವದಲ್ಲಿ ಪ್ರಪ್ರಥಮ ಆಸ್ಟ್ರೇಲಿಯ ಟೆಸ್ಟ್ ಕ್ರಿಕೆಟ್ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಈ ತನಕ ಭಾರತ, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಲು 11 ಸಲ ಪ್ರಯತ್ನಿಸಿ ವಿಫಲವಾಗಿತ್ತು. ಇದೀಗ ಇದೇ ಮೊದಲ ಬಾರಿಗೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ , ಭಾರತ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಐತಿಹಾಸಿಕ ದಾಖಲೆಯನ್ನು ಮಾಡಿದೆ.
ಮುಂಬಯಿಯ ವಾಂಖೇಡೆ ಕ್ರೀಡಾಂಗಣದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರ ವಿಶ್ವ ಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಓರ್ವ ಯುವ ಸದಸ್ಯರಾಗಿದ್ದರು.
“ನಮ್ಮ ಇಂದಿನ ಗೆಲುವು ಅಂದಿನ ವಿಶ್ವಕಪ್ ಗೆಲುವಿಗಿಂತಲೂ ದೊಡ್ಡದಾಗಿದೆ; ಇದು ನನ್ನ ಕ್ರಿಕೆಟ್ ಬದುಕಿನ ಅತೀ ದೊಡ್ಡ ಸಾಧನೆಯಾಗಿದೆ’ ಎಂದು ಕೊಹ್ಲಿ ಪಂದ್ಯಾನಂತರದ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ವೇಳೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ವಿಶೇಷದ ಮಾತೆಂದರೆ ಇದೇ ಸಿಡ್ನಿ ಕ್ರಿಕೆಟ್ ಅಂಗಣದಲ್ಲ ಕೊಹ್ಲಿಗೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಶಾಶ್ವತ ನಾಯಕತ್ವವನ್ನು ನೀಡಲಾಗಿತ್ತು. ಇಂದು ಅದೇ ಸಿಡ್ಡಿ ಅಂಗಣದಲ್ಲಿ ಕೊಹ್ಲಿ ಆಸೀಸ್ ವಿರುದ್ಧ ಅದರ ನೆಲದಲ್ಲೇ ಮೊತ್ತ ಮೊದಲ ಟೆಸ್ಟ್ ಸರಣಿಯನ್ನು ಭಾರತಕ್ಕೆ ಗೆದ್ದುಕೊಡುವ ಐತಿಹಾಸಿಕ ಸಾಧನೆಯನ್ನು ದಾಖಲಿಸಿದರು.
ಪಂದ್ಯ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಚೇತೇಶ್ವರ ಪೂಜಾರ ಅವರ ನಿರ್ವಹಣೆಯನ್ನು ಬಹುವಾಗಿ ಕೊಂಡಾಡಿದ ಕೊಹ್ಲಿ, ವೇಗದ ಎಸೆಗಾರ ಜಸ್‌ಪ್ರೀತ್ ಬುಮ್ರಾ ಅವರ ಸಾಧನೆಯನ್ನು ಕೂಡ ಪ್ರಶಂಸಿಸಿದರು.
ಇದೇ ರೀತಿ ಉಜ್ವಲ ಬ್ಯಾಟಿಂಗ್ ಮೆರೆದ ಮಾಯಾಂಕ್ ಅಗರ್‌ವಾಲ್ ಮತ್ತು ರಿಷ್ ಪಂತ್ (ಅನುಕ್ರಮವಾಗಿ 77 ಮತ್ತು 159) ಅವರನ್ನು ಕೂಡ ಕೊಹ್ಲಿ ಹೊಗಳಿದರು. ಇವರಿಂದಾಗಿಯೇ ಭಾರತ ಸಿಡ್ನಿ ಟೆಸ್ಟ್‌ನಲ್ಲಿ 7 ವಿಕೆಟ್ ನಷ್ಟೆ 622 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.