India ವಿರುದ್ಧ ಟಿ20 ಸರಣಿ: ವಾರ್ನರ್ ಸೇರಿ ಪ್ರಮುಖ ಆಟಗಾರಿಗೆ ವಿಶ್ರಾಂತಿ
ಈಗಲೂ ಬಲಾಢ್ಯ ತಂಡವಾಗಿ ಕಂಡು ಬರುತ್ತಿರುವ ಆಸೀಸ್
Team Udayavani, Nov 22, 2023, 6:43 PM IST
ಹೊಸದಿಲ್ಲಿ: ವಿಶ್ವಕಪ್ ಫೈನಲ್‌ನ ನಾಲ್ಕು ದಿನಗಳ ನಂತರ ಭಾರತದ ವಿರುದ್ಧ ನಾಳೆಯಿಂದ (ನವೆಂಬರ್ 23)ಪ್ರಾರಂಭವಾಗಲಿರುವ ಟಿ 20 ಸರಣಿಗೆ ಆಸ್ಟ್ರೇಲಿಯ ತಂಡದಲ್ಲಿ ಡೇವಿಡ್ ವಾರ್ನರ್ ಸೇರಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಆರಂಭಿಕ ಬ್ಯಾಟ್ಸ್ ಮ್ಯಾನ್ ವಾರ್ನರ್ ಈ ವಿಶ್ವಕಪ್‌ನಲ್ಲಿ 50 ರ ಸರಾಸರಿಯಲ್ಲಿ 535 ರನ್ ಗಳಿಸಿದ್ದರು. ಅವರೊಂದಿಗೆ ನಾಯಕರಾಗಿದ್ದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ಕ್ಯಾಮ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
“ವಿಶ್ವಕಪ್ ಅಭಿಯಾನದ ಯಶಸ್ಸಿನ ನಂತರ, ಬೇಡಿಕೆಯ ಹಿನ್ನೆಲೆಯಲ್ಲಿ ವಾರ್ನರ್ ಮನೆಗೆ ಮರಳಲು ನಿರ್ಧರಿಸಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿಕೆ ನೀಡಿದೆ. ಮ್ಯಾಥ್ಯೂ ವೇಡ್ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.
ಆಸ್ಟ್ರೇಲಿಯ ಟಿ 20 ತಂಡ: ಮ್ಯಾಥ್ಯೂ ವೇಡ್ (ನಾಯಕ ), ಆರನ್ ಹಾರ್ಡಿ, ಜೇಸನ್ ಬೆಹ್ರೆನ್‌ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಕೇನ್ ರಿಚರ್ಡ್ಸನ್, ಆಡಮ್ ಝಂಪಾ ಅವರು ತಂಡದಲ್ಲಿದ್ದಾರೆ.
ಮೊದಲ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್.
2ನೇ ಪಂದ್ಯ ನ 26 ರಂದು ತಿರುವನಂತಪುರ, 3ನೇ ಪಂದ್ಯ ನ. 28 ರಂದು ಗುವಾಹಟಿ, 4ನೇ ಪಂದ್ಯ ಡಿಸೆಂಬರ್ 1 ರಂದು ನಾಗ್ಪುರ ಮತ್ತು ಸರಣಿಯ ಕೊನೆಯ 5ನೇ ಟಿ 20 ಪಂದ್ಯ ಡಿ.3 ರಂದು ಹೈದರಾಬಾದ್ ನಲ್ಲಿ ನಡೆಯಲಿದೆ.
ಪ್ರಸಾರ
ಸರಣಿಯನ್ನು ಸ್ಪೋರ್ಟ್ಸ್ 18 ಮತ್ತುಕಲರ್ಸ್ ಸಿನಿಪ್ಲೆಕ್ಸ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ, ಆದರೆ ಪಂದ್ಯದ ಲೈವ್ ಸ್ಟ್ರೀಮ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯದ ದಿನದಂದು 7 ಗಂಟೆಯಿಂದ ಲಭ್ಯವಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.