ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !
Team Udayavani, Nov 27, 2020, 5:48 PM IST
ಸಿಡ್ನಿ: ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದೆ. ಆಸೀಸ್ ನೀಡದ 374 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬ್ಲೂ ಬಾಯ್ಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 66 ರನ್ ಗಳಿಂದ ಸೋಲುಂಡಿದೆ.
ಹಾರ್ದಿಕ್ ಪಾಂಡ್ಯ ಅಬ್ಬರ ಮತ್ತು ಶಿಖರ್ ಧವನ್ ಮನಮೋಹಕ ಆಟದ ಹೊರತಾಗಿಯೂ ಕೊಹ್ಲಿ ಪಡೆ ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು.
374 ರನ್ ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಉತ್ತಮ ಆರಂಭ ದೊರಕಿತು. ಓಪನರ್ ಗಳಾದ ಮಾಯಾಂಕ್ ಅಗರವಾಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ ಗೆ ಅರ್ಧಶತಕದ ಜೊತೆಯಾಟ ನಡೆಸಿತು. ಈ ವೇಳೆ 1 ಸಿಕ್ಸ್ ಹಾಗೂ 4 ಬೌಂಡರಿಗಳ ನೆರವಿನಿಂದ ಆಕರ್ಷಕವಾಗಿ ಆಡುತ್ತಿದ್ದ ಮಯಾಂಕ್, ಹೆಜಲ್ ವುಡ್ ಎಸೆತದಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚಿತ್ತರು.
ನಂತರ ಧವನ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಕೂಡ ಭರವಸೆಯ ಆಟವಾಡಿದರು. 1 ಸಿಕ್ಸ್ ಹಾಗೂ 2 ಫೋರ್ ಗಳ ಮೂಲಕ 21 ರನ್ ಸಿಡಿಸಿದ್ದ ವೇಳೆ ವಿರಾಟ್, ಹೆಜಲ್ ವುಡ್ ಎಸೆತದಲ್ಲಿ ಫಿಂಚ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಶ್ರೇಯಸ್ ಅಯ್ಯರ್ ಕೇವಲ ಎರಡು ರನ್ ಗಳಿಸಿ ಬಂದ ದಾರಿಯಲ್ಲೇ ಹಿಂದಿರುಗಿದರು. ಭರವಸೆಯ ಆಟಗಾರ ಕೆ.ಎಲ್ ರಾಹುಲ್ 12 ರನ್ ಗಳಿಸಿದರೇ, ಜಡೇಜಾ 25 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಇದನ್ನೂ ಓದಿ: ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ
ಈ ವೇಳೆ ಧವನ್ ಜೊತೆಯಾದ ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟವಾಡಿ ಪಂದ್ಯದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಧವನ್ ಹಾಗೂ ಪಾಂಡ್ಯ ಇಬ್ಬರು ಕೂಡ ಅರ್ಧಶತಕ ಸಿಡಿಸಿ ಮಿಂಚಿದರು. 10 ಬೌಂಡರಿಗಳ ಮೂಲಕ 74 ರನ್ ಸಿಡಿಸಿದ್ದ ಧವನ್, ಜಾಂಪಾ ಬೌಲಿಂಗ್ ನಲ್ಲಿ ಸ್ಟಾರ್ಕ್ ಗೆ ಕ್ಯಾಚ್ ನೀಡಿದರು. ಶತಕದ ಸನಿಹದಲ್ಲಿದ್ದ ಪಾಂಡ್ಯ(90) ಕೂಡ ಜಾಂಪಾ ಎಸೆತದಲ್ಲಿ ಸ್ಟಾರ್ಕ್ ಗೆ ಕ್ಯಾಚ್ ನೀಡಿ ಹೊರನಡೆದರು.
ಅಂತಿಮವಾಗಿ ನವದೀಪ್ ಸೈನಿ (29) ಹಾಗೂ ಮೊಹಮ್ಮದ ಶಮಿ (13) ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಸೀಸ್ ಪರ ಆ್ಯಡಂ ಜಾಂಪಾ 4 ವಿಕೆಟ್ ಪಡೆದು ಮಿಂಚಿದರೇ, ಹೆಜಲ್ ವುಡ್ 3 ವಿಕೆಟ್ ಉರುಳಿಸಿದರು. ಸ್ಟಾರ್ಕ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ನಮ್ಮ ಸರಕಾರಕ್ಕೆ ಮಹಾರಾಷ್ಟ್ರ ಜನತೆಯ ಆಶೀರ್ವಾದವಿದೆ! ED, CBIನಿಂದ ಬೆದರಿಸಲಾಗದು: ಉದ್ಧವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.