Australia vs Pakistan T20: ಪಾಕ್ ವಿರುದ್ಧ ಆಸೀಸ್ಗೆ 2-0 ಸರಣಿ ಜಯ
Team Udayavani, Nov 16, 2024, 8:24 PM IST
ಸಿಡ್ನಿ: ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು 13 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯಾ ಸರಣಿ ವಶಪಡಿಸಿಕೊಂಡಿದೆ. ಏಕದಿನದಲ್ಲಿ ಅನುಭವಿಸಿದ 2-1 ಅಂತರದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಆಸ್ಟ್ರೇಲಿಯಾ 9 ವಿಕೆಟಿಗೆ 147 ರನ್ ಮಾಡಿದರೆ, ಪಾಕಿಸ್ತಾನ 19.4 ಓವರ್ಗಳಲ್ಲಿ 134ಕ್ಕೆ ಕುಸಿಯಿತು. ವೇಗಿ ಸ್ಪೆನ್ಸರ್ ಜಾನ್ಸನ್ 26 ರನ್ನಿಗೆ 5 ವಿಕೆಟ್ ಉಡಾಯಿಸಿ ಆಸೀಸ್ ಗೆಲುವಿನ ರೂವಾರಿಯೆನಿಸಿದರು. 7 ಓವರ್ಗಳ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 29 ರನ್ನುಗಳಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯ ಸೋಮವಾರ ಹೋಬರ್ಟ್ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪರ ಆರಂಭಕಾರ ಮ್ಯಾಥ್ಯೂ ಶಾರ್ಟ್ 32, ಪಾಕ್ ಪರ ಉಸ್ಮಾನ್ ಖಾನ್ 52 ರನ್ ಹೊಡೆದರು. 4 ಕ್ಯಾಚ್ಗಳನ್ನು ಕೈಚೆಲ್ಲಿದ್ದು ಪಾಕ್ಗೆ ಹಿನ್ನಡೆಯಾಗಿ ಪರಿಣಮಿಸಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 20 ಓವರ್, 147/9 (ಶಾರ್ಟ್ 32, ಹಾರ್ಡಿ 28, ರೌಫ್ 22ಕ್ಕೆ 4, ಅಬ್ಟಾಸ್ ಅಫ್ರಿದಿ 17ಕ್ಕೆ 3). ಪಾಕಿಸ್ತಾನ 19.4 ಓವರ್, 134 (ಉಸ್ಮಾನ್ ಖಾನ್ 52, ಇರ್ಫಾನ್ ಖಾನ್ 37, ಜಾನ್ಸನ್ 26ಕ್ಕೆ 5).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.