ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್; 6ನೇ ಟಿ20 ವಿಶ್ವಕಪ್ ಸಡಗರ
ಇಂದಿನಿಂದ ಸೂಪರ್-12 ಸ್ಪರ್ಧೆಗಳ ರೋಮಾಂಚನ
Team Udayavani, Oct 23, 2021, 6:00 AM IST
ಅಬುಧಾಬಿ: ಬರೋಬ್ಬರಿ 5 ವರ್ಷಗಳ ಬಳಿಕ 6ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರದಿಂದ ಚಾಲನೆ ಲಭಿಸಲಿದೆ. ಅರ್ಹತಾ ಸುತ್ತಿನಿಂದ ಬಂದ 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳ ಮುಖಾಮುಖಿ ಕಾವೇರಿಸಿಕೊಳ್ಳಲಿದೆ. ಈ ವರೆಗೆ ಕಪ್ ಗೆಲ್ಲದ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಸೆಣಸುವುದು ವಿಶೇಷ.
ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವೆ ನಡೆ ಯುತ್ತಿರುವ ಕೇವಲ 2ನೇ ವಿಶ್ವಕಪ್ ಪಂದ್ಯ. 2012ರಲ್ಲಿ ಆಡಲಾದ ಏಕೈಕ ಪಂದ್ಯದಲ್ಲಿ ಆಸೀಸ್ ವಿಜಯಿಯಾಗಿತ್ತು.
ಇವೆರಡೂ ಬಲಿಷ್ಠ ತಂಡಗಳಾದರೂ ಕೂಟದ ನೆಚ್ಚಿನ ತಂಡಗಳಂತೂ ಅಲ್ಲ. 2010ರಲ್ಲಿ ಫೈನಲ್ ಪ್ರವೇಶಿಸಿದ್ದಷ್ಟೇ ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆ. ಇನ್ನೊಂದೆಡೆ, ಹರಿಣಗಳ ಪಡೆಗೆ ಫೈನಲ್ ಕೂಡ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿ ಇತ್ತಂಡಗಳೂ ಹೊಸ ಎತ್ತರ ತಲುಪುವ ಯೋಜನೆಯೊಂದಿಗೆ ಹೋರಾಟಕ್ಕೆ ಇಳಿಯಬೇಕಿದೆ.
ಆಸೀಸ್ ಸೋಲಿನ ಹಾದಿ
ಕಾಂಗರೂ ಬಳಗದ ವಿಶ್ವಕಪ್ ಆಗಮನದ ಹಾದಿಯಂತೂ ಸೋಲಿನ ಹಾದಿಯೇ ಆಗಿತ್ತು. ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್, ಭಾರತ, ಇಂಗ್ಲೆಂಡ್… ಹೀಗೆ ಎಲ್ಲ ತಂಡಗಳ ವಿರು ದ್ಧವೂ ಸರಣಿ ಸೋಲನುಭವಿಸಿತ್ತು. ಇಲ್ಲಿ ಆಡಲಾದ 13 ಪಂದ್ಯಗಳಲ್ಲಿ ಗೆದ್ದದ್ದು ಐದರಲ್ಲಿ ಮಾತ್ರ.
ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ; 9 ಆಣೆಕಟ್ಟಿಗೆ ರೆಡ್, 7 ಜಿಲ್ಲೆಗೆ ಯೆಲ್ಲೋ ಅಲರ್ಟ್
ಆಸ್ಟ್ರೇಲಿಯದ ಅಡಿಪಾಯವೇ ಗಟ್ಟಿ ಇಲ್ಲ. ಡೇವಿಡ್ ವಾರ್ನರ್ ಅವರ ಫಾರ್ಮ್ ಎಂದೋ ಕೈಕೊಟ್ಟಿದೆ. ಅಭ್ಯಾಸ ಪಂದ್ಯಗಳಲ್ಲೂ ಇದು ಸಾಬೀತಾಗಿದೆ. ಒಂದರಲ್ಲಿ ಸೊನ್ನೆ ಸುತ್ತಿದರೆ, ಇನ್ನೊಂದರಲ್ಲಿ ಗಳಿಸಿದ್ದು ಒಂದೇ ರನ್. ಮೊಣಕಾಲಿನ ಶಸ್ತ್ರಚಿಕಿತ್ಸೆ ಮುಗಿಸಿ ಬಂದಿರುವ ನಾಯಕ ಆರನ್ ಫಿಂಚ್ ಅವರಿಗೆ ಅಭ್ಯಾಸದ ಕೊರತೆ ಎದುರಾಗಿದೆ. ಪ್ರಧಾನ ವೇಗಿ ಪ್ಯಾಟ್ ಕಮಿನ್ಸ್ ಐಪಿಎಲ್ “ಫಸ್ಟ್ ಲೆಗ್’ ಬಳಿಕ ಯಾವುದೇ ಪಂದ್ಯವನ್ನಾಡಿಲ್ಲ.
ಆಸ್ಟ್ರೇಲಿಯದ ಬಲ ಇರುವುದೇ ಮಧ್ಯಮ ಕ್ರಮಾಂಕದಲ್ಲಿ. ಸ್ಮಿತ್, ಮಿಚೆಲ್ ಮಾರ್ಷ್, ಮ್ಯಾಕ್ಸ್ ವೆಲ್, ಸ್ಟೋಯಿನಿಸ್ ಇಲ್ಲಿನ ಇನ್‌ಫಾರ್ಮ್ ಆಟ ಗಾರರು. ಸ್ಟಾರ್ಕ್, ಹ್ಯಾಝಲ್‌ವುಡ್, ರಿಚರ್ಡ್ ಸನ್ ಅವರನ್ನೊಳಗೊಂಡ ವೇಗದ ವಿಭಾಗವೂ ಪರಾಗಿಲ್ಲ.
ಆಫ್ರಿಕಾ ಹೆಚ್ಚು ಬಲಿಷ್ಠ
ಆಸ್ಟ್ರೇಲಿಯಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ. ತಾಂತ್ರಿಕವಾಗಿಯೂ ಮೇಲುಗೈ ಹೊಂದಿದೆ. ವಿಂಡೀಸ್, ಐರ್ಲೆಂಡ್ ಮತ್ತು ಲಂಕಾ ವಿರುದ್ಧ ಸರಣಿ ಗೆದ್ದ ಬಳಿಕ ಎರಡೂ ಅಭ್ಯಾಸ ಪಂದ್ಯಗಳನ್ನೂ ಜಯಿಸಿದೆ.
ಡಿ ಕಾಕ್, ಬವುಮ, ಮಾರ್ಕ್‌ರಮ್, ಹೆಂಡ್ರಿಕ್ಸ್ ಅವರನ್ನೊಳಗೊಂದ ಅಗ್ರ ಕ್ರಮಾಂಕ ಹೆಚ್ಚು ಬಲಿಷ್ಠ. ಆದರೆ ಐಪಿಎಲ್ ಹೀರೋ ಡು ಪ್ಲೆಸಿಸ್ ಇಲ್ಲದಿರುವುದೊಂದು ಕೊರತೆ. ಪವರ್ ಹಿಟ್ಟರ್ ಮಿಲ್ಲರ್ ಫಾರ್ಮ್ ಬಗ್ಗೆ ಅನುಮಾನವಿದೆ. ಮಧ್ಯಮ ಕ್ರಮಾಂಕ ಸಾಮಾನ್ಯ. ಬೆಸ್ಟ್ ಫಿನಿಶರ್ ಕೊರತೆ ಇದೆ.
ಬೌಲಿಂಗ್ ವಿಭಾಗದಲ್ಲಿ ವೈವಿಧ್ಯವಿದೆ. ರಬಾಡ, ಎನ್‌ಗಿಡಿ, ನೋರ್ಜೆ, ಮಹಾರಾಜ್ ಎದುರಾಳಿಯನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡ್ ಪಾತ್ರ ನಿಭಾಯಿಸಲು ಪ್ರಿಟೋರಿಯಸ್ ಮತ್ತು ಮುಲ್ಡರ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.