ನಿರೋಷನ್ ಡಿಕ್ವೆಲ್ಲಾಗೆ 2 ಪಂದ್ಯಗಳ ನಿಷೇಧ
Team Udayavani, Feb 22, 2017, 12:38 PM IST
ಕೊಲಂಬೊ: ಅಂಪಾಯರ್ ತೀರ್ಪಿನ ವಿರುದ್ಧ ಅಂಗಳದಲ್ಲೇ ಅಸಮಾಧಾನ ವ್ಯಕ್ತಪಡಿಸಿ ಅಶಿಸ್ತಿನಿಂದ ವರ್ತಿಸಿದ ಶ್ರೀಲಂಕಾ ಆರಂಭಕಾರ ನಿರೋಷನ್ ಡಿಕ್ವೆಲ್ಲ ಅವರಿಗೆ ಐಸಿಸಿ 2 ಸೀಮಿತ ಓವರ್‌ಗಳ ಪಂದ್ಯಗಳ ನಿಷೇಧ ವಿಧಿಸಿದೆ.
ಆಸ್ಟ್ರೇಲಿಯ ವಿರುದ್ಧ ರವಿವಾರ ಗೀಲಾಂಗ್‌ನಲ್ಲಿ ನಡೆದ ದ್ವಿತೀಯ ಟಿ-20 ಪಂದ್ಯದ ವೇಳೆ ಔಟಾಗಿ ಹೋಗುವಾಗ ಡಿಕ್ವೆಲ್ಲ ಅಂಪಾಯರ್ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಭುಜವನ್ನು ಹಾರಿಸುತ್ತ, ಪಿಚ್ ತುಳಿಯುತ್ತ ಪೆವಿಲಿಯನ್ ಕಡೆ ಸಾಗಿದ್ದರು. ಇದಕ್ಕಾಗಿ ನಿಷೇಧದ ಜತೆಗೆ ಪಂದ್ಯದ ಸಂಭಾವನೆಯ ಶೇ. 30ರಷ್ಟು ದಂಡವನ್ನೂ ವಿಧಿಸಲಾಗಿದೆ.
ನಿಷೇಧ ಕ್ರಮದಿಂದಾಗಿ 23ರ ಹರಯದ ನಿರೋಷನ್ ಡಿಕ್ವೆಲ್ಲ ಬುಧವಾರ ಅಡಿಲೇಡ್‌ನಲ್ಲಿ ನಡೆಯುವ 3ನೇ ಟಿ-20 ಪಂದ್ಯದಿಂದ ಹಾಗೂ ಬಾಂಗ್ಲಾದೇಶ ವಿರುದ್ಧ ಮಾ. 25ರಂದು ಆಡಲಾಗುವ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.