ಭಾರತ ಪ್ರವಾಸಕ್ಕೂ ಮುನ್ನ ಆಸೀಸ್ 3-0 ಗೆಲುವಿನ ಸ್ಕೆಚ್
Team Udayavani, Jan 3, 2017, 3:45 AM IST
ಸಿಡ್ನಿ: ಅದೃಷ್ಟ ಚೆನ್ನಾಗಿದ್ದದ್ದೇ ಹೌದಾದರೆ ಪಾಕಿಸ್ಥಾನ 1-0 ಮುನ್ನಡೆಯೊಂದಿಗೆ ಸಿಡ್ನಿಯಲ್ಲಿ ಅಂತಿಮ ಟೆಸ್ಟ್ ಪಂದ್ಯ ಆಡಲು ಆಗಮಿಸಬೇಕಿತ್ತು. ಆದರೆ ಮಿಸ್ಬಾ ಪಡೆಯ ನಸೀಬು ಬಹ ಳಷ್ಟು ಖರಾಬ್ ಆದಂತಿದೆ. ಅದೀಗ ಆತಿಥೇಯ ಆಸ್ಟ್ರೇಲಿಯ ಕೈಯಲ್ಲಿ ವೈಟ್‌ವಾಶ್‌ನಿಂದ ಪಾರಾಗುವುದು ಹೇಗೆ ಎಂಬ ಚಿಂತೆಯೊಂದಿಗೆ ಮಂಗಳವಾರ ದಿಂದ “ಸಿಡ್ನಿ ಕ್ರಿಕೆಟ್ ಗ್ರೌಂಡ್’ಗೆ ಇಳಿಯಲಿದೆ.
ಬ್ರಿಸ್ಬೇನ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್‌ನಲ್ಲಿ ಪಾಕಿಸ್ಥಾನ 490 ರಷ್ಟು ಕಠಿನ ಗುರಿ ಪಡೆದರೂ ಗೆಲುವಿನಿಂದ ಕೇವಲ 40 ರನ್ನಿನಿಂದ ಹಿಂದುಳಿಯಿತು. ಇದನ್ನು ಗೆದ್ದು ಇತಿಹಾಸ ನಿರ್ಮಿ ಸುವ ಒಳ್ಳೆಯ ಅವಕಾಶ ಮಿಸ್ಬಾ ಬಳಗದ ಮುಂದಿತ್ತು. ಆದರೆ ಇದು ತಪ್ಪಿ ಹೋಯಿತು. ಅನಂತರ ನಿಶ್ಚಿತ ವಾಗಿಯೂ ಡ್ರಾ ಹಾದಿ ಹಿಡಿದಿದ್ದ ಮೆಲ್ಬರ್ನ್ನ “ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯವನ್ನು ನಾಟಕೀಯ ರೀತಿಯಲ್ಲಿ ಸೋತಿತು.
ಮುಂದಿದೆ ಭಾರತ ಸವಾಲು
ವರ್ಷಾರಂಭವನ್ನು ಗೆಲುವಿ ನೊಂದಿಗೆ ಆರಂಭಿಸುವುದು ಎರಡೂ ತಂಡಗಳ ಗುರಿ. ಆದರೆ ಇಲ್ಲಿ ಆತಿಥೇಯ ಆಸ್ಟ್ರೇಲಿಯವೇ ಫೇವರಿಟ್ ಎಂಬು ದರಲ್ಲಿ ಅನು ಮಾನವಿಲ್ಲ. ಅದು ಹಿಂದಿನೆರಡು ಟೆಸ್ಟ್‌ಗಳನ್ನು ಗೆದ್ದ ರೀತಿಯೇ ಇದಕ್ಕೆ ಸಾಕ್ಷಿ. ಸೋಲು ಹಾಗೂ ಡ್ರಾ ಸಾಧ್ಯತೆಗಳನ್ನೂ ಗೆಲುವಾಗಿ ಪರಿವರ್ತಿಸುವ ವಿದ್ಯೆ ಯೀಗ ಸ್ಮಿತ್ ಬಳಗಕ್ಕೆ ಕರಗತವಾದಂತಿದೆ. ಅಲ್ಲದೇ ಮುಂಬರುವ ಭಾರೀ ಸವಾಲಿನ ಭಾರತ ಪ್ರವಾಸಕ್ಕೆ ಆಸೀಸ್ ಅಣಿಯಾಗಬೇಕಿದೆ. ಇದಕ್ಕಾಗಿ ಪಾಕಿಸ್ಥಾನ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯವನ್ನೂ ಗೆದ್ದು 3-0 ವೈಟ್‌ವಾಶ್ ಸಾಹಸದೊಂದಿಗೆ ಭಾರತದತ್ತ ಮುಖ ಮಾಡಿರು ವುದು, ಈ ಕಠಿನ ಸರಣಿಗೆ ಮನೋ ಬಲವನ್ನು ವೃದ್ಧಿಸಿಕೊಳ್ಳುವುದು ಕಾಂಗರೂ ಗಳ ಗುರಿ.
ತ್ರಿವಳಿ ಸ್ಪಿನ್ ದಾಳಿ
ಸಿಡ್ನಿ ಅಂಗಳ ತಿರುವು ಪಡೆ ಯುವ ಸಾಧ್ಯತೆ ಹೆಚ್ಚಿರುವುದ ರಿಂದ ಆಸ್ಟ್ರೇಲಿಯ ತ್ರಿವಳಿ ಸ್ಪಿನ್ ಬೌಲರ್‌ಗಳನ್ನು ನೆಚ್ಚಿಕೊಂಡಿದೆ. ನಥನ್ ಲಿಯೋನ್‌ಗೆ ಬೆಂಬಲ ಒದಗಿಸಲು ಹಿಲ್ಟನ್ ಕಾರ್ಟ್‌ರೈಟ್ ಮತ್ತು ಸ್ಟೀವನ್ ಓ’ಕೀಫ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್ ಕೂಡ ಆಗಿರುವ ಕಾರ್ಟ್‌ರೈಟ್‌ಗೆ ಇದು ಚೊಚ್ಚಲ ಟೆಸ್ಟ್ ಆಗಲಿದೆ. ಹಾಗೆಯೇ ಆಸೀಸ್ ಕಪ್ತಾನ ಸ್ಟೀವನ್ ಸ್ಮಿತ್ ಆಡುತ್ತಿರುವ 50ನೇ ಟೆಸ್ಟ್ ಇದಾಗಿದೆ. ಇದನ್ನು ಗೆಲುವಿನೊಂದಿಗೆ ಸಂಭ್ರಮಿಸು ವುದು ಅವರ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಚಾಂಪಿಯನ್ಸ್ ಟ್ರೋಫಿ ಪಾಕ್ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.