ಆಸೀಸ್ ವನಿತಾ ವಿಕ್ರಮ ; ಭಾರತೀಯ ವನಿತೆಯರಿಗೆ ದಕ್ಕದ ಫೈನಲ್ ಗೆಲುವಿನ ಸಂಭ್ರಮ
ಆಸೀಸ್ ವನಿತಾ ದಾಳಿಗೆ ಕಂಗೆಟ್ಟ ಕೌರ್ ಪಡೆ ; ಚೊಚ್ಚಲ ಟಿ20 ವಿಶ್ವಕಪ್ ಕನಸು ಭಗ್ನ
Team Udayavani, Mar 8, 2020, 3:36 PM IST
ಮೆಲ್ಬರ್ನ್: ಹಾಲಿ ಟಿ20 ವಿಶ್ವಚಾಂಪಿಯನ್ ವನಿತೆಯರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಚೊಚ್ಚಲ ವಿಶ್ವಕಪ್ ಅನ್ನು ಎತ್ತಿ ಸಂಭ್ರಮಿಸುವ ಮತ್ತು ವಿಶ್ವ ಮಹಿಳಾ ದಿನದಂದೇ ಈ ಸಾಧನೆಯನ್ನು ಮಾಡಬಹುದಾಗಿದ್ದ ಅಪೂರ್ವ ಅವಕಾಶವನ್ನು ಭಾರತೀಯ ವನಿತಾ ಕ್ರಿಕೆಟ್ ತಂಡ ಕೈಚೆಲ್ಲಿದೆ. ಈ ಮೂಲಕ ಭಾರತೀಯ ವನಿತೆಯರು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುತ್ತಾರೆಂಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯೂ ಹುಸಿಯಾದಂತಾಗಿದೆ.
ಲೀಗ್ ಹಂತದ ಎಲ್ಲಾ ಪಂದ್ಯಗಳನ್ನೂ ಗೆದ್ದು ಅಜೇಯವಾಗಿ ಫೈನಲ್ ಅಖಾಡಕ್ಕೆ ಪ್ರವೇಶಿಸಿದ್ದ ಭಾರತೀಯ ವನಿತೆಯರು ಇಲ್ಲಿ ಮಾತ್ರ ಫೈನಲ್ ಟೆನ್ಷನ್ ಅನ್ನು ತಾಳಿಕೊಳ್ಳುವಲ್ಲಿ ವಿಫಲರಾಗಿ 85 ರನ್ ಗಳ ಭರ್ಜರಿ ಸೋಲನ್ನು ಅನುಭವಿಸಿದರು. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಆರಂಭವಾಗಿದ್ದ ಕೌರ್ ಪಡೆಯ ಟಿ20 ವಿಶ್ವ ಕಪ್ ಪಯಣ ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾಕ್ಕೆ ಶರಣಾಗುವ ಮೂಲಕ ಅಂತ್ಯಗೊಂಡಿದೆ.
ಅಸೀಸ್ ವನಿತೆಯರುವ ನೀಡಿದ 184 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತುವ ಹಂತದಲ್ಲಿ ಪ್ರಾರಂಭದಿಂದಲೇ ಎಡವಿದ ಭಾರತೀಯ ಮಹಿಳಾ ಬ್ಯಾಟ್ಸ್ ಮನ್ ಗಳು ಅಂತಿಮವಾಗಿ 19.1 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ ಬಲಿಷ್ಟ ಆಸೀಸ್ ವನಿತೆಯರಿಗೆ 85 ರನ್ ಗಳಿಂದ ಪರಾಭವಗೊಂಡ ಹರ್ಮನ್ ಪ್ರೀತ್ ಕೌರ್ ಪಡೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.
ಅಂತಿಮ ವಿಕೆಟ್ ರೂಪದಲ್ಲಿ ಪೂನಮ್ ಯಾದವ್ (1) ಔಟಾಗುವುದರೊಂದಿಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವನಿತೆಯರ ಸಂಭ್ರಮಾಚರಣೆ ಮುಗಿಲುಮುಟ್ಟಿತು.
ಆಸೀಸ್ ನೀಡಿದ ಕಠಿಣ ಗುರಿಯನ್ನು ಬೆನ್ನತ್ತಲಾರಂಭಿಸಿದ ಭಾರತೀಯ ವನಿತಾ ಬ್ಯಾಟ್ಸ್ ಮನ್ ಗಳು ಪ್ರಾರಂಭದಲ್ಲೇ ಮುಗ್ಗರಿಸಲಾರಂಭಿಸಿದರು. ಬ್ಯಾಟಿಂಗ್ ಸೆನ್ಸೇಷನ್ ಶೆಫಾಲಿ ಶರ್ಮಾ (2) ಪ್ರಥಮ ಓವರಿನ ಮೂರನೇ ಎಸೆತದಲ್ಲೇ ಔಟಾಗುವುದರೊಂದಿಗೆ ತಂಡದ ಅರ್ಧ ಬಲ ಕುಸಿದಂತಾಗಿತ್ತು. ಶೆಫಾಲಿಯನ್ನು ಪ್ರಾರಂಭದಲ್ಲೇ ಕೆಡವಿ ಕೌರ್ ಬಳಗದ ಮೇಲೆ ಒತ್ತಡ ಹೇರುವ ಆಸೀಸ್ ಬೌಲರ್ ಗಳ ಯೋಜನೆ ಫಲಕೊಟ್ಟಿತ್ತು.
ನಾಯಕಿ ಹರ್ಮನ್ ಪ್ರೀತ್ ಕೌರ್ (4) ಸಹಿತ ಭಾರತದ ಅಗ್ರ ನಾಲ್ವರು ಬ್ಯಾಟ್ಸ್ ಮನ್ ಗಳು ತಂಡದ ಮೊತ್ತ 30 ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಾಗಿತ್ತು. ಮತ್ತು ಈ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆಯೂ ಬಹುತೇಕ ಕೈ ಬಿಟ್ಟಾಗಿತ್ತು. ಶೆಫಾಲಿ (2), ಸ್ಮೃತಿ (11), ತಾನಿಯಾ (2), ಜೆಮಿಮಾ (0) ಮತ್ತು ನಾಯಕಿ ಕೌರ್ (4) ಸಹಿತ ಅಗ್ರ ಬ್ಯಾಟಿಂಗ್ ಪಡೆಯ ಇಂದಿನ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ (33), ವೇದಾ ಕೃಷ್ಣಮೂರ್ತಿ (19) ಮತ್ತು ರಿಚಾ ಘೋಷ್ (18) ಆಸೀಸ್ ಬೌಲರ್ ಗಳಿಗೆ ಸ್ವಲ್ಪ ಮಟ್ಟಿನ ಪ್ರತಿರೋಧವನ್ನು ತೋರಿದರು. ಆದರೆ ಇವರ ಹೋರಾಟ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಲೂ ಸಹಕಾರಿಯಾಗಲಿಲ್ಲ. ಕೆಳಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳೂ ತಲಾ 1 ರನ್ ಗಳಿಸುವಂತಾಗಿದ್ದು ಆಸೀಸ್ ಪಡೆಯ ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರಯತ್ನಕ್ಕೆ ಸಾಕ್ಷಿಯಾಗಿತ್ತು.
ಆಸೀಸ್ ವನಿತೆಯರ ಪರ ವೇಗಿ ಮೆಗಾನ್ ಶಟ್ ಅವರು 4 ವಿಕೆಟ್ ಪಡೆದರು. ಜೆಸ್ ಜೊನಾಸನ್ 3 ವಿಕೆಟ್ ಪಡೆದರೆ, ಸೋಫಿ ಮೊಲಿನಾಕ್ಸ್, ಡೆಲಿಸ್ಸಾ ಕಿಮಿನ್ಸ್ ಮತ್ತು ನಿಕೊಲಾ ಕ್ಯಾರಿ ತಲಾ 1 ವಿಕೆಟ್ ಪಡೆದರು.
ಆದರೆ ಒಟ್ಟಾರೆಯಾಗಿ ಈ ಟಿ20 ವಿಶ್ವಕಪ್ ನಲ್ಲಿ ಭಾರತೀಯ ವನಿತೆಯರು ತೋರಿದ ಚೇತೋಹಾರಿ ಪ್ರದರ್ಶನ ಮುಂಬರುವ ದಿನಗಳಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಲ್ಲಿ ಆಶಾದಾಯಕವಾಗಿದೆ. ಫೈನಲ್ ವರೆಗೆ ಅಜೇಯ ಅಭಿಯಾನ ನಡೆಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಮ್ಮ ಅಭಿನಂದನೆಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.