ಬೌಲಿಂಗ್‌ ಮೈಮರೆವು: ಸೋತ ಭಾರತ


Team Udayavani, Mar 11, 2019, 1:33 AM IST

555.jpg

ಮೊಹಾಲಿ: ಭಾರತ ರನ್‌ ಶಿಖರವೇರಿಯೂ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯದ ಅಬ್ಬರಕ್ಕೆ ತತ್ತರಿಸಿ ಕೆಳಕ್ಕೆ ಉರುಳಿದೆ. ಮೊಹಾಲಿ ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಂಡು ಸರಣಿ ಗೆಲುವಿನ ಅವಕಾಶವನ್ನು ಕೈಚೆಲ್ಲಿದೆ.
ಶಿಖರ್‌ ಧವನ್‌ ಅವರ ಭರ್ಜರಿ ಶತಕ ಸಾಹಸದಿಂದ 9 ವಿಕೆಟಿಗೆ 358 ರನ್‌ ಪೇರಿಸಿ ಗೆಲುವಿನ ಗುಂಗಿನಲ್ಲಿ ವಿಹರಿಸುತ್ತಿದ್ದ ಭಾರತಕ್ಕೆ ಆಸ್ಟ್ರೇಲಿಯ ಮರ್ಮಾಘಾತವಿಕ್ಕಿತು. ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅವರ ಮೊದಲ ಶತಕ ಹಾಗೂ ಕೇವಲ 2ನೇ ಪಂದ್ಯ ಆಡುತ್ತಿದ್ದ ಆ್ಯಶrನ್‌ ಟರ್ನರ್‌ ಅವರ ಚೊಚ್ಚಲ ಅರ್ಧ ಶತಕದ ನೆರವಿನಿಂದ 47.5 ಓವರ್‌ಗಳಲ್ಲಿ 6 ವಿಕೆಟಿಗೆ 359 ರನ್‌ ಬಾರಿ ಜಯಭೇರಿ ಮೊಳಗಿಸಿತು. ಇದು ಭಾರತದ ವಿರುದ್ಧ ದಾಖಲಾದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ಸಾಧನೆಯಾಗಿದೆ.

ಇದು ಮೊಹಾಲಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಆಸ್ಟ್ರೇಲಿಯ ಸಾಧಿಸಿದ 6ನೇ ಗೆಲುವಾದರೆ, ಸತತವಾಗಿ ಐದನೆಯದು. ಇದರೊಂದಿಗೆ ಸರಣಿ 2-2 ಸಮಬಲಕ್ಕೆ ಬಂದಿದ್ದು, ಮಾ. 13ರ ಹೊಸದಿಲ್ಲಿ ಪಂದ್ಯವನ್ನು ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ.

ಆಸೀಸ್‌ ಪ್ರಚಂಡ ಚೇಸಿಂಗ್‌ 
ಮೊದಲ ಓವರಿನಲ್ಲೇ ನಾಯಕ ಫಿಂಚ್‌ (0), 4ನೇ ಓವರಿನಲ್ಲಿ ಶಾನ್‌ ಮಾರ್ಷ್‌ (6) ಅವರನ್ನು ಕಳೆದುಕೊಂಡಾಗ ಆಸೀಸ್‌ ಭಾರೀ ಅಪಾಯಕ್ಕೆ ಸಿಲುಕಿತ್ತು. ಆದರೆ ಉಸ್ಮಾನ್‌ ಖ್ವಾಜಾ (91)-ಪೀಟರ್‌ ಹ್ಯಾಂಡ್ಸ್‌ಕಾಂಬ್‌ (117) 3ನೇ ವಿಕೆಟಿಗೆ 192 ರನ್‌ ಸೂರೆಗೈದು ಭಾರತವನ್ನು ಕಾಡಿದರು. ಕೊನೆಯಲ್ಲಿ ಆ್ಯಶrನ್‌ ಟರ್ನರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಪಂದ್ಯವನ್ನೇ ಟರ್ನ್ ಮಾಡಿ ಬಿಟ್ಟರು!
6 ಸಿಕ್ಸರ್‌, 5 ಬೌಂಡರಿಯೊಂದಿಗೆ ಅಬ್ಬರಿಸಿದ ಟರ್ನರ್‌ ಬರೀ 43 ಎಸೆತಗಳಿಂದ ಅಜೇಯ 84 ರನ್‌ ಸಿಡಿಸಿದರು. ಹ್ಯಾಂಡ್ಸ್‌ಕಾಂಬ್‌ 105 ಎಸೆತಗಳಿಂದ 117 ರನ್‌ ಬಾರಿಸಿದರು (8 ಬೌಂಡರಿ, 3 ಸಿಕ್ಸರ್‌).

ಇನ್ನಿಂಗ್ಸ್‌ ಓಪನಿಂಗ್‌ “ಶತಕ’

ಸರಣಿಯುದ್ದಕ್ಕೂ ಬ್ಯಾಟಿಂಗ್‌ ಬರಗಾಲ ಅನುಭವಿಸುತ್ತಲೇ ಬಂದ ಭಾರತದ ಆರಂಭಿಕರಾದ ಶಿಖರ್‌ ಧವನ್‌-ರೋಹಿತ್‌ ಶರ್ಮ ತಮ್ಮ ವೈಫ‌ಲ್ಯವನ್ನು ಒಂದೇ ಏಟಿಗೆ ಹೊಡೆದೋಡಿಸಿದರು. 31 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿಕೊಂಡು, ಆಸ್ಟ್ರೇಲಿಯ ದಾಳಿ ಯನ್ನು ಪುಡಿಗುಟ್ಟುತ್ತಲೇ ಹೋದ ಇವರು 193 ರನ್‌ ಜತೆಯಾಟ ನಡೆಸಿ ಮೊಹಾಲಿಯಲ್ಲಿ ನಲಿದಾಡಿದರು. ಇದರೊಂದಿಗೆ ರೋಹಿತ್‌-ಧವನ್‌ ಜೋಡಿಯ 100ನೇ ಆರಂಭಿಕ ವಿಕೆಟ್‌ ಜತೆಯಾಟ ಸ್ಮರಣೀಯವೆನಿಸಿತು. 

ಸ್ವಾರಸ್ಯವೆಂದರೆ, ಕಳೆದ ರಾಂಚಿ ಏಕದಿನದಲ್ಲಿ ಆಸೀಸ್‌ ಆರಂಭಿಕರಾದ ಉಸ್ಮಾನ್‌ ಖ್ವಾಜಾ ಮತ್ತು ಆರನ್‌ ಫಿಂಚ್‌ ಕೂಡ ಮೊದಲ ವಿಕೆಟಿಗೆ ಇಷ್ಟೇ ರನ್‌ ಪೇರಿಸಿದ್ದರು!

ಧವನ್‌ ಜೀವನಶ್ರೇಷ್ಠ ಆಟ
ಈ ಜತೆಯಾಟದ ವೇಳೆ ಶಿಖರ್‌ ಧವನ್‌ 16ನೇ ಶತಕದೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರೆ, ರೋಹಿತ್‌ ಶರ್ಮ ಐದೇ ರನ್‌ ಕೊರತೆಯಿಂದ ಸೆಂಚುರಿ ತಪ್ಪಿಸಿಕೊಂಡರು. ಕಾಂಗರೂ ಬೌಲರ್‌ಗಳನ್ನು ಚೆಂಡಾಡುತ್ತ ಹೋದ ಧವನ್‌ 38ನೇ ಓವರ್‌ ತನಕ ಕ್ರೀಸಿನಲ್ಲಿ ಉಳಿದು 143 ರನ್‌ ಬಾರಿಸಿದರು. 115 ಎಸೆತಗಳ ಈ ರಂಜನೀಯ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ, 3 ಸಿಕ್ಸರ್‌ ಸೇರಿತ್ತು. 2015ರ ಮೆಲ್ಬರ್ನ್ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 137 ರನ್‌ ಹೊಡೆದದ್ದು ಧವನ್‌ ಅವರ ಈವರೆಗಿನ ಅತ್ಯುತ್ತಮ ಸಾಧನೆ ಯಾಗಿತ್ತು. ಶತಕ ಪೂರ್ತಿಗೊಂಡ ಬಳಿಕ ಧವನ್‌ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದರು.

ರೋಹಿತ್‌ ಶರ್ಮ ಅವರ 95 ರನ್‌ 92 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ, 2 ಸಿಕ್ಸರ್‌. ವನ್‌ಡೌನ್‌ನಲ್ಲಿ ಬಂದ ರಾಹುಲ್‌ 31 ಎಸೆತ ಎದುರಿಸಿ 26 ರನ್‌ ಮಾಡಿದರು. ಇದು ಒಂದೇ ಬೌಂಡರಿಯನ್ನು ಒಳಗೊಂಡಿತ್ತು.
ಸತತ 2 ಶತಕ ಬಾರಿಸಿ ಅಬ್ಬರಿಸಿದ್ದ ಕ್ಯಾಪ್ಟನ್‌ ಕೊಹ್ಲಿ ಮೊಹಾಲಿಯಲ್ಲಿ ಏಳೇ ರನ್‌ ಗಳಿಸಿ ಔಟಾದರು. ಆರಂಭಿಕರನ್ನು ಹೊರತುಪಡಿಸಿದರೆ 36 ರನ್‌ ಹೊಡೆದ ಪಂತ್‌ ಅವರದೇ ಹೆಚ್ಚಿನ ಗಳಿಕೆ. 24 ಎಸೆತ ನಿಭಾಯಿಸಿದ ಪಂತ್‌, 4 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ವಿಜಯ್‌ ಶಂಕರ್‌ 15 ಎಸೆತಗಳಿಂದ 26 ರನ್‌ (1 ಬೌಂಡರಿ, 2 ಸಿಕ್ಸರ್‌) ಮಾಡಿದರು. ಕೇದಾರ್‌ ಜಾಧವ್‌ ಯಶಸ್ಸು ಕಾಣಲಿಲ್ಲ (10). ಇನ್ನಿಂಗ್ಸಿನ ಅಂತಿಮ ಎಸೆತವನ್ನು ಬುಮ್ರಾ ಸಿಕ್ಸರ್‌ಗೆ ರವಾನಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ ಬಾರಿಸಿದ ಮೊದಲ ಸಿಕ್ಸರ್‌ ಆಗಿತ್ತು.

4 ಬದಲಾವಣೆ ಮಾಡಿಕೊಂಡ ಭಾರತ
ಮೊಹಾಲಿ ಏಕದಿನ ಪಂದ್ಯಕ್ಕಾಗಿ ಭಾರತ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಧೋನಿಗೆ ವಿಶ್ರಾಂತಿ ನೀಡಿದ್ದರಿಂದ ಕೀಪಿಂಗ್‌ ಜವಾಬ್ದಾರಿ ಸಹಜವಾಗಿಯೇ ರಿಷಭ್‌ ಪಂತ್‌ ಹೆಗಲೇರಿತು. ಕಾಯುತ್ತಿದ್ದ ಕೆ.ಎಲ್‌. ರಾಹುಲ್‌ ಅವರಿಗೆ ಕೊನೆಗೂ ಅವಕಾಶ ಸಿಕ್ಕಿತು. ಆದರೆ ಆರಂಭಿಕನಾಗಿ ಅಲ್ಲ, ಅಂಬಾಟಿ ರಾಯುಡು ಬದಲು ಬಂದ ಅವರು ವನ್‌ಡೌನ್‌ನಲ್ಲಿ ಆಡಲಿಳಿದರು. ರವೀಂದ್ರ ಜಡೇಜ ಮತ್ತು ಮೊಹಮ್ಮದ್‌ ಶಮಿ ಬದಲು ಯಜುವೇಂದ್ರ ಚಾಹಲ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಯಿತು.
ಆಸ್ಟ್ರೇಲಿಯ ತಂಡದಲ್ಲಿ 2 ಪರಿವರ್ತನೆ ಸಂಭವಿಸಿತು. ಸ್ಪಿನ್ನರ್‌ ನಥನ್‌ ಲಿಯೋನ್‌ ಬದಲು ಜಾಸನ್‌ ಬೆಹೆÅಂಡಾಫ್ì, ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌ ಬದಲು ಆ್ಯಶrನ್‌ ಟರ್ನರ್‌ ಅವರಿಗೆ ಅವಕಾಶ ನೀಡಲಾಯಿತು.

ರೋಹಿತ್‌-ಧವನ್‌ ದಾಖಲೆ
ರೋಹಿತ್‌ ಶರ್ಮ ಮತ್ತು ಶಿಖರ್‌ ಧವನ್‌ ಏಕದಿನದಲ್ಲಿ ಅತ್ಯಧಿಕ ರನ್‌ ಪೇರಿಸಿದ ಭಾರತದ ದ್ವಿತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೊಹಾಲಿ ಏಕದಿನದ ವೇಳೆ 6 ರನ್‌ ಪೇರಿಸಿದ ವೇಳೆ ಇವರು ಸಚಿನ್‌ ತೆಂಡುಲ್ಕರ್‌-ವೀರೇಂದ್ರ ಸೆಹವಾಗ್‌ ಜೋಡಿಯ 4,387 ರನ್ನುಗಳ ದಾಖಲೆಯನ್ನು ಮೀರಿ ನಿಂತರು. ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ 8,227 ರನ್‌ ಗಳಿಸಿದ್ದು ಭಾರತೀಯ ದಾಖಲೆಯಾಗಿದೆ. ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ 3ನೇ ಸ್ಥಾನದಲ್ಲಿದ್ದರೆ (4,332 ರನ್‌), ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ಜೋಡಿ 4ನೇ ಸ್ಥಾನಿಯಾಗಿದೆ (4,328 ರನ್‌).

ರೋಹಿತ್‌ ಅತ್ಯಧಿಕ ಸಿಕ್ಸರ್‌
ರೋಹಿತ್‌ ಶರ್ಮ ಏಕದಿನದಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಭಾರತದ ಬ್ಯಾಟ್ಸ್‌ಮನ್‌ ಎನಿಸಿದರು. ಮೊಹಾಲಿಯಲ್ಲಿ 2ನೇ ಸಿಕ್ಸರ್‌ ಬಾರಿಸಿದ ವೇಳೆ ಅವರು ಧೋನಿಯ 217 ಸಿಕ್ಸರ್‌ಗಳ ಭಾರತೀಯ ದಾಖಲೆ ಮುರಿದರು. ಧೋನಿ ಅವರ ಈ ಸಿಕ್ಸರ್‌ಗಳಲ್ಲಿ 7 “ಏಶ್ಯನ್‌ ಇಲೆವೆನ್‌’ ಪರ ಬಂದಿವೆ. ತೆಂಡುಲ್ಕರ್‌ (195), ಗಂಗೂಲಿ (189), ಯುವರಾಜ್‌ (153), ಸೆಹವಾಗ್‌ (131 ಸಿಕ್ಸರ್‌) ಅನಂತರದ ಸ್ಥಾನದಲ್ಲಿದ್ದಾರೆ.

15ನೇ ಶತಕದ ಜತೆಯಾಟ
ರೋಹಿತ್‌ ಶರ್ಮ-ಶಿಖರ್‌ ಧವನ್‌ 193 ರನ್‌ ಜತೆಯಾಟ ನಿಭಾಯಿಸಿದರು. ಇದು ಇವರಿಬ್ಬರಿಂದ ಮೊದಲ ವಿಕೆಟಿಗೆ ದಾಖಲಾದ 15ನೇ ಶತಕದ ಜತೆಯಾಟ. ಮೊದಲ ವಿಕೆಟಿಗೆ ಅತೀ ಹೆಚ್ಚು ಶತಕದ ಜತೆಯಾಟ ನಡೆಸಿದವರ ಯಾದಿಯಲ್ಲಿ ಜಂಟಿ 3ನೇ ಸ್ಥಾನ ಅಲಂಕರಿಸಿದರು. ವಿಂಡೀಸಿನ ಗ್ರೀನಿಜ್‌-ಹೇನ್ಸ್‌ ಕೂಡ 15 ಶತಕಗಳ ಜತೆಯಾಟ ನಡೆಸಿದ್ದಾರೆ. ತೆಂಡುಲ್ಕರ್‌-ಗಂಗೂಲಿ ಅವರದು ವಿಶ್ವದಾಖಲೆ (21). ಗಿಲ್‌ಕ್ರಿಸ್ಟ್‌-ಹೇಡನ್‌ (16) ದ್ವಿತೀಯ ಸ್ಥಾನದಲ್ಲಿದ್ದಾರೆ.

ಆಸೀಸ್‌ ವಿರುದ್ಧ ದಾಖಲೆ
ರೋಹಿತ್‌-ಧವನ್‌ 193 ರನ್‌ ಜತೆಯಾಟ ದಾಖಲಿಸಿದರು. ಇದು ಆಸ್ಟ್ರೇಲಿಯ ವಿರುದ್ಧ ಭಾರತದ ಆರಂಭಿಕರು ಪೇರಿಸಿದ ಅತ್ಯಧಿಕ ರನ್‌ ಆಗಿದೆ. ಸ್ವಾರಸ್ಯವೆಂದರೆ ಇವರು ತಮ್ಮದೇ ದಾಖಲೆಯನ್ನು 2 ಸಲ ಮುರಿದದ್ದು! ಇದಕ್ಕೂ ಮುನ್ನ ರೋಹಿತ್‌-ಧವನ್‌ 2013ರ ಸರಣಿಯ ನಾಗ್ಪುರ ಪಂದ್ಯದಲ್ಲಿ 178 ರನ್‌, ಇದೇ ಸರಣಿಯ ನಾಗ್ಪುರ ಪಂದ್ಯದಲ್ಲಿ 176 ರನ್‌ ಪೇರಿಸಿದ್ದರು. ಉಳಿದಂತೆ ತೆಂಡುಲ್ಕರ್‌-ಗಂಗೂಲಿ 1998ರ ಕಾನ್ಪುರ ಪಂದ್ಯದಲ್ಲಿ 175 ರನ್‌ ಪೇರಿಸಿದ್ದರು.
ಆಸ್ಟ್ರೇಲಿಯ ವಿರುದ್ಧ ಅತ್ಯಧಿಕ 5 ಶತಕದ ಜತೆಯಾಟ ನಡೆಸಿದ ಜೋಡಿ ಎಂಬ ದಾಖಲೆಯನ್ನೂ ರೋಹಿತ್‌-ಧವನ್‌ ಬರೆದರು.ಗ್ರೀನಿಜ್‌-ರಿಚರ್ಡ್ಸ್‌, ಲಕ್ಷ್ಮಣ್‌-ತೆಂಡುಲ್ಕರ್‌ ಮತ್ತು ರಹಾನೆ-ರೋಹಿತ್‌ ತಲಾ 4 ಶತಕಗಳ ಜತೆಯಾಟ ನಡೆಸಿದ್ದರು.

ಆಸೀಸ್‌ ವಿರುದ್ಧ ಸಾವಿರ ರನ್‌
ರೋಹಿತ್‌-ಧವನ್‌ ಆಸ್ಟ್ರೇಲಿಯ ವಿರುದ್ಧ ಆರಂಭಿಕ ವಿಕೆಟಿಗೆ ಸಾವಿರ ರನ್‌ ಪೇರಿಸಿದ ಭಾರತ ಮೊದಲ, ವಿಶ್ವದ 2ನೇ ಜೋಡಿ. ಗ್ರೀನಿಜ್‌-ಹೇಮ್ಸ್‌ 1,152 ರನ್‌ ಒಟ್ಟುಗೂಡಿಸಿದ್ದು ದಾಖಲೆ. ಗಂಗೂಲಿ-ತೆಂಡುಲ್ಕರ್‌ 827 ರನ್‌ ಪೇರಿಸಿ 3ನೇ ಸ್ಥಾನದಲ್ಲಿದ್ದಾರೆ.

 10 ಸಾವಿರ “ಲಿಸ್ಟ್‌ ಎ’ ರನ್‌
115 ರನ್‌ ತಲುಪಿದ ವೇಳೆ ಶಿಖರ್‌ ಧವನ್‌ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಈ ಸಾಧನೆ ಮಾಡಿದ ಭಾರತದ 11ನೇ ಆಟಗಾರ. ಉಳಿದವರೆಂದರೆ ತೆಂಡುಲ್ಕರ್‌ (21,999), ಗಂಗೂಲಿ (15,622), ದ್ರಾವಿಡ್‌ (15,271), ಧೋನಿ (13,080), ಅಜರುದ್ದೀನ್‌ (12,931), ಯುವರಾಜ್‌ (12,663), ಕೊಹ್ಲಿ (12,258-ಈ ಪಂದ್ಯಕ್ಕೂ ಮುನ್ನ), ಸೆಹವಾಗ್‌ (10,454), ರೋಹಿತ್‌ (10,196) ಮತ್ತು ಗಂಭೀರ್‌ (10,077).

ಸ್ಕೋರ್‌ಪಟ್ಟಿ
ಭಾರತ
ರೋಹಿತ್‌ ಶರ್ಮ    ಸಿ ಹ್ಯಾಂಡ್ಸ್‌ಕಾಂಬ್‌ ಬಿ ರಿಚರ್ಡ್‌ಸನ್‌    95
ಶಿಖರ್‌ ಧವನ್‌    ಬಿ ಕಮಿನ್ಸ್‌    143
ಕೆ.ಎಲ್‌. ರಾಹುಲ್‌    ಸಿ ಕ್ಯಾರಿ ಬಿ ಝಂಪ    26
ವಿರಾಟ್‌ ಕೊಹ್ಲಿ    ಸಿ ಕ್ಯಾರಿ ಬಿ ರಿಚರ್ಡ್‌ಸನ್‌    7
ರಿಷಭ್‌ ಪಂತ್‌    ಸಿ ಫಿಂಚ್‌ ಬಿ ಕಮಿನ್ಸ್‌    36
ಕೇದಾರ್‌ ಜಾಧವ್‌    ಸಿ ರಿಚರ್ಡ್‌ಸನ್‌ ಬಿ ಕಮಿನ್ಸ್‌    10
ವಿಜಯ್‌ ಶಂಕರ್‌    ಸಿ ಮ್ಯಾಕ್ಸ್‌ವೆಲ್‌ ಬಿ ಕಮಿನ್ಸ್‌    26
ಭುವನೇಶ್ವರ್‌ ಕುಮಾರ್‌    ಸಿ ಕ್ಯಾರಿ ಬಿ ರಿಚರ್ಡ್‌ಸನ್‌    1
ಕುಲದೀಪ್‌ ಯಾದವ್‌    ಔಟಾಗದೆ    1
ಯಜುವೇಂದ್ರ ಚಾಹಲ್‌    ಸಿ ಮತ್ತು ಬಿ ಕಮಿನ್ಸ್‌    0
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    6
ಇತರ        7
ಒಟ್ಟು  (9 ವಿಕೆಟಿಗೆ)        358
ವಿಕೆಟ್‌ ಪತನ: 1-193, 2-254, 3-266, 4-296, 5-314, 6-331, 7-344, 8-351, 9-352.
ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌        10-0-70-5
ಜಾಸನ್‌ ಬೆಹೆಡಾಫ್ì        10-1-61-0
ಜೇ ರಿಚರ್ಡ್‌ಸನ್‌        9-0-85-3
ಗ್ಲೆನ್‌ ಮ್ಯಾಕ್ಸ್‌ವೆಲ್‌        8-1-61-0
ಆ್ಯಡಂ ಝಂಪ        10-0-57-1
ಆರನ್‌ ಫಿಂಚ್‌        3-0-22-0

ಆಸ್ಟ್ರೇಲಿಯ
ಆರನ್‌ ಫಿಂಚ್‌    ಬಿ ಭುವನೇಶ್ವರ್‌    0
ಉಸ್ಮಾನ್‌ ಖ್ವಾಜಾ    ಸಿ ಕುಲದೀಪ್‌ ಬಿ ಬುಮ್ರಾ    91
ಶಾನ್‌ ಮಾರ್ಷ್‌    ಬಿ ಬುಮ್ರಾ    6
ಪೀಟರ್‌ ಹ್ಯಾಂಡ್ಸ್‌ಕಾಂಬ್‌ಸಿ ರಾಹುಲ್‌ ಬಿ ಚಾಹಲ್‌    117
ಗ್ಲೆನ್‌ ಮ್ಯಾಕ್ಸ್‌ವೆಲ್‌    ಎಲ್‌ಬಿಡಬ್ಲ್ಯು ಕುಲದೀಪ್‌    23
ಆ್ಯಶrನ್‌ ಟರ್ನರ್‌    ಔಟಾಗದೆ    84
ಅಲೆಕ್ಸ್‌ ಕ್ಯಾರಿ    ಸಿ ಧವನ್‌ ಬಿ ಬುಮ್ರಾ    21
ಜೇ ರಿಚರ್ಡ್‌ಸನ್‌    ಔಟಾಗದೆ    0
ಇತರ        17
ಒಟ್ಟು  (47.5 ಓವರ್‌ಗಳಲ್ಲಿ 6 ವಿಕೆಟಿಗೆ)    359
ವಿಕೆಟ್‌ ಪತನ: 1-3, 2-12, 3-204, 4-229, 5-271, 6-357.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        9-0-67-1
ಜಸ್‌ಪ್ರೀತ್‌ ಬುಮ್ರಾ        8.5-0-63-3
ವಿಜಯ್‌ ಶಂಕರ್‌        5-0-29-0
ಕುಲದೀಪ್‌ ಯಾದವ್‌        10-0-64-1
ಕೇದಾರ್‌ ಜಾಧವ್‌        5-0-44-0
ಯಜುವೇಂದ್ರ ಚಾಹಲ್‌        10-0-80-1
 

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.