![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 11, 2021, 11:05 AM IST
ಬ್ರಿಸ್ಬೇನ್: ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಜಯಭೇರಿ ಸಾಧಿಸಿದೆ. ಗಾಬಾ ಪಂದ್ಯವನ್ನು 9 ವಿಕೆಟ್ ಅಂತರದಿಂದ ಗೆದ್ದ ಪ್ಯಾಟ್ ಕಮಿನ್ಸ್ ಪಡೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಎರಡು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಇಂದು 297 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಶುಕ್ರವಾರದ ಆಟದಲ್ಲಿ ಕ್ರೀಸ್ ಕಚ್ಚಿ ಪ್ರತಿರೋಧ ತೋರಿದ್ದ ನಾಯಕ ಜೋ ರೂಟ್ ಮತ್ತು ಡೇವಿಡ್ ಮಲಾನ್ ಇಂದು ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ರೂಟ್ 89 ರನ್ ಗಳಿಸಿದರೆ, ಮಲಾನ್ 82 ರನ್ ಬಾರಿಸಿದರು.
ನಂತರ ಬಂದ ಆಟಗಾರರು ಯಾರೂ ಆಸೀಸ್ ಬೌಲಿಂಗ್ ಗೆ ಸೆಡ್ಡು ಹೊಡೆದು ನಿಲ್ಲುವ ಪ್ರಯತ್ನ ಮಾಡಲಿಲ್ಲ. ಸ್ಟೋಕ್ಸ್, ಪೋಪ್, ಬಟ್ಲರ್ ಅಗ್ಗಕ್ಕೆ ಔಟಾದರು.
ವಿಕೆಟ್ ಬರ ಅನುಭವಿಸುತ್ತಿದ್ದ ಸ್ಪಿನ್ನರ್ ನಥನ್ ಲಿಯಾನ್ ನಾಲ್ಕು ವಿಕೆಟ್ ಕಿತ್ತರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 400 ವಿಕೆಟ್ ಕಿತ್ತ ಮೈಲುಗಲ್ಲು ನೆಟ್ಟರು.
ಇದನ್ನೂ ಓದಿ:400 ಟೆಸ್ಟ್ ವಿಕೆಟ್ ಕಿತ್ತು ದಾಖಲೆ ಬರೆದ ನಥನ್ ಲಿಯಾನ್
ಗೆಲುವಿಗೆ ಕೇವಲ 20 ರನ್ ಗಳಿಸಬೇಕಾದ ಸುಲಭ ಗುರಿ ಪಡೆದ ಆಸೀಸ್ ತಂಡ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಆರಂಭಿಕನಾಗಿ ಬಂದ ಅಲೆಕ್ಸ್ ಕ್ಯಾರಿ 9 ರನ್ ಗಳಿಸಿ ಔಟಾದರು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಬಾರಿಸಿದ್ದ ಟ್ರಾವಿಸ್ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.