ಡಬಲ್ಸ್: ಭಾರತೀಯರಿಗೆ ಜಯ
Team Udayavani, Jan 19, 2018, 12:06 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ಮೂರೂ ಜೋಡಿಗಳು ಗೆಲುವಿನ ಆರಂಭ ಪಡೆದಿವೆ. ಲಿಯಾಂಡರ್ ಪೇಸ್ -ಪುರವ್ ರಾಜ ಸೇರಿಕೊಂಡು ನಿಕೋಲಸ್ ಬಾಸಿಲಾಶ್ವಿಲಿ (ಜಾರ್ಜಿಯಾ)-ಆ್ಯಂಡ್ರಿಯಾಸ್ ಹೈದರ್ ಮೌರರ್ (ಆಸ್ಟ್ರಿಯಾ) ಅವರನ್ನು 6-2, 6-3ರಿಂದ ಮಣಿಸಿದರು. ಭಾರತೀಯ ಜೋಡಿ ಇನ್ನು 5ನೇ ಶ್ರೇಯಾಂಕದ ಜಾಮಿ ಮರ್ರೆ-ಬ್ರುನೊ ಸೊರೆಸ್ ವಿರುದ್ಧ ಸೆಣಸಲಿದೆ.
ಅಮೆರಿಕದ ರಾಜೀವ್ ರಾಮ್ ಜತೆಗೂಡಿ ಆಡುತ್ತಿರುವ ದಿವಿಜ್ ಶರಣ್, ಮಾರಿಯಸ್ ಕೊಪಿಲ್ (ರೊಮೇನಿಯಾ)-ವಿಕ್ಟರ್ ಟ್ರೊಯಿಕಿ (ಸರ್ಬಿಯಾ) ವಿರುದ್ಧ 7-6 (7-5), 6-4 ಅಂತರದಿಂದ ಗೆದ್ದು ಬಂದರು. ಇವರ ದ್ವಿತೀಯ ಸುತ್ತಿನ ಎದುರಾಳಿ ಆಗಿರುವವರು ಫ್ಯಾಬಿಯೊ ಫೊಗಿನಿ-ಮಾರ್ಸೆಲ್ ಗ್ರಾನೋಲ್ಲರ್.
ರೋಹನ್ ಬೋಪಣ್ಣ-ಎಡ್ವರ್ಡ್ ರೋಜರ್ ವೆಸಲಿನ್ (ಫ್ರಾನ್ಸ್) 6-2, 7-6 (7-5) ಅಂತರದಿಂದ ರಿಯಾನ್ ಹ್ಯಾರಿಸನ್ (ಅಮೆರಿಕ)-ವಾಸೆಕ್ ಪೊಸ್ಪಿಸಿಲ್ (ಕೆನಡಾ) ಜೋಡಿಯನ್ನು ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.