Australian Open 2025: ಮೊದಲ ದಿನವೇ ಮಳೆ ಆಟ
Team Udayavani, Jan 13, 2025, 12:20 AM IST
ಮೆಲ್ಬರ್ನ್: ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಪಂದ್ಯಾವಳಿಗೆ ಮಳೆಯ ಕಾಟ ಎದುರಾಗಿದೆ. ಇದರಿಂದ 5 ಸಿಂಗಲ್ಸ್ ಪಂದ್ಯಗಳನ್ನು ರದ್ದುಗೊಳಿಸ ಬೇಕಾಯಿತು.
ಉಳಿದಂತೆ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ, ಒಲಿಂಪಿಕ್ ಚಾಂಪಿಯನ್ ಜೆಂಗ್ ಕ್ವಿನ್ವೆನ್, ಯುವ ಆಟಗಾರ್ತಿ ಮಿರ್ರಾ ಆ್ಯಂಡ್ರೀವಾ, ಡೋನಾ ವೆಕಿಕ್, ಅಲೆಕ್ಸಾಂಡರ್ ಜ್ವೆರೇವ್, ಆರ್ಥರ್ ಫಿಲ್ಸ್ ಅವರೆಲ್ಲ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿ
ದ್ದಾರೆ. ಇವರಲ್ಲಿ ಕ್ವಿನ್ವೆನ್ ರನ್ನರ್ ಅಪ್ ಆಗಿದ್ದು, ಕಳೆದ ವರ್ಷದ ಫೈನಲ್‌ನಲ್ಲಿ ಅರಿನಾ ಸಬಲೆಂಕಾಗೆ ಶರಣಾಗಿದ್ದರು.
ರಷ್ಯಾದ 17 ವಷಅìದ ಮಿರ್ರಾ ಆ್ಯಂಡ್ರೀವಾ 113ನೇ ಆವೃತ್ತಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಅವರು ಜೆಕ್ ಗಣರಾಜ್ಯದ ಮಾರೀ ಬೌಜ್ಕೋವಾ ವಿರುದ್ಧ 6-3, 6-3 ಅಂತರದ ಸುಲಭ ಜಯ ಸಾಧಿಸಿದರು.
ಹ್ಯಾಟ್ರಿಕ್ ಪ್ರಶಸ್ತಿಯ ಹಾದಿಯಲ್ಲಿ ರುವ ಅರಿನಾ ಸಬಲೆಂಕಾ 2017ರ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರನ್ನು 6-3, 6-2ರಿಂದ ಸೋಲಿಸಿದರು.
ವಿಶ್ವದ 5ನೇ ರ್‍ಯಾಂಕ್‌ನ ಜೆಂಗ್ ಕ್ವಿನ್ವೆನ್ ರೊಮೇನಿಯಾದ ಅರ್ಹತಾ ಆಟಗಾರ್ತಿ ಅನ್ಕಾ ಟೊಡೋನಿ ವಿರುದ್ಧ 7-6 (3), 6-1 ಅಂತರದಿಂದ ಗೆದ್ದು ಬಂದರು. ಮೊದಲ ಸೆಟ್ ವೇಳೆ ಚೀನೀ ಆಟಗಾರ್ತಿ ಬಹಳ ನರ್ವಸ್ ಆದಂತೆ ಕಂಡರು.
ಲಿಂಡಾ ನೊಸ್ಕೋವಾ ಈ ಕೂಟದಿಂದ ಹೊರಬಿದ್ದ ಮೊದಲ ಶ್ರೇಯಾಂಕಿತ ಆಟಗಾರ್ತಿ. 29ನೇ ಶ್ರೇಯಾಂಕದ ನೊಸ್ಕೋವಾ ಅವರನ್ನು ಕ್ಲಾರಾ ಟೌಸನ್ 5-7, 6-3, 6-4 ಅಂತರದಿಂದ ಪರಾಭವಗೊಳಿಸಿದರು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಡೋನಾ ವೆಕಿಕ್ ಫ್ರಾನ್ಸ್‌ನ ಡಿಯಾನೆ ಪ್ಯಾರ್ರಿ ವಿರುದ್ಧ 6-4, 6-4 ಅಂತರದ ಜಯ ಒಲಿಸಿಕೊಂಡರು.
ಪುರುಷರ ವಿಭಾಗ
ಪುರುಷರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂದ ಅಲೆಕ್ಸಾಂಡರ್ ಜ್ವೆರೇವ್ 6-4, 6-4, 6-4ರಿಂದ ಲುಕಾಸ್ ಪೌಲೆ ಅವರನ್ನು ಮಣಿಸಿದರು. ಕೀ ನಿಶಿಕೋರಿ ಭಾರೀ ಹೋರಾಟದ ಬಳಿಕ ಥಿಯಾಗೊ ಮಾಂಟೀರೊ ವಿರುದ್ಧ 4-6, 6-7 (4), 7-5, 6-2, 6-3 ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಕ್ಯಾಸ್ಪರ್ ರೂಡ್ 6-3, 1-6, 7-5, 2-6, 6-1ರಿಂದ ಜಾಮ್ ಮುನಾರ್ ಅವರನ್ನು ಮಣಿಸಿದರು.
20ನೇ ಶ್ರೇಯಾಂಕದ ಆರ್ಥರ್ ಫಿಲ್ಸ್ 3-6, 7-6 (4), 6-4, 6-4ರಿಂದ ಓಟೊ ವಿರ್ಟಾನೆನ್ ವಿರುದ್ಧ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.