Australian Open; ಬೋಪಣ್ಣ-ಎಬ್ಡೆನ್ ಮುನ್ನಡೆ: ನಾಗಲ್ ಹೋರಾಟ ಅಂತ್ಯ
Team Udayavani, Jan 18, 2024, 11:36 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸುಮಿತ್ ನಾಗಲ್ ಅವರ ಸ್ಮರಣೀಯ ಓಟವು ದ್ವಿತೀಯ ಸುತ್ತಿನಲ್ಲಿ ಅಂತ್ಯಗೊಂಡಿದೆ. ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು ಚೀನದ ಟೆನಿಸ್ ತಾರೆ ಜುನ್‌ಚೆಂಗ್ ಶಾಂಗ್ ಅವರ ಅಮೋಘ ಆಟಕ್ಕೆ ಶರಣಾದರು.
ಅಗ್ರ 30ರೊಳಗಿನ ಆಟಗಾರನನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ನಾಗಲ್ ದ್ವಿತೀಯ ಸುತ್ತಿನಲ್ಲೂ ಅದೇ ರೀತಿಯ ಹೋರಾಟ ನೀಡಲು ಪ್ರಯತ್ನಿಸಿದರೂ ಎಡವಿದರು. 18ರ ಹರೆಯದ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಶಾನ್ ಪಂದ್ಯ ಸಾಗುತ್ತಿದ್ದಂತೆ ಹಿಡಿತ ಸಾಧಿಸಿ 2-6, 6-3, 7-5, 6-4 ಸೆಟ್‌ಗಳಿಂದ ಪಂದ್ಯ ಗೆದ್ದರು.
ದ್ವಿತೀಯ ಸುತ್ತಿನ ಈ ಹೋರಾಟವು ಬಹುತೇಕ ಮೂರು ತಾಸುಗಳವರೆಗೆ ಸಾಗಿತ್ತು. ನಾಲ್ಕನೇ ಸೆಟ್ ವೇಳೆ ನಾಗಲ್ ಅವರಲ್ಲಿ ಹೋರಾಡುವ ಶಕ್ತಿ ಕ್ಷೀಣಿಸಿತ್ತು. ಮೂರನೇ ಸೆಟ್ ಬಳಿಕವೇ ಶಾನ್ ತನ್ನ ಸರ್ವ್ ಅನ್ನು ಉತ್ತಮ ರೀತಿಯಲ್ಲಿ ಹಾಕಿ ನಾಗಲ್ ಅವರನ್ನು ಕೆಡಹಲು ಯಶಸ್ವಿಯಾದರು.
ಹರಿಯಾಣದ ಝಜ್ಜಾರ್ ಮೂಲದ 26ರ ಹರೆಯದ ನಾಗಲ್ ಅವರು ಅರ್ಹತಾ ಸುತ್ತಿನಲ್ಲಿ ಅಮೋಘವಾಗಿ ಆಡಿ ಮುಖ್ಯ ಡ್ರಾಕ್ಕೆ ಪ್ರವೇಶ ಪಡೆದಿದ್ದರು. ಅಲ್ಲಿ ಮೊದಲ ಸುತ್ತಿನಲ್ಲಿ ವಿಶ್ವದ 27ನೇ ರ್‍ಯಾಂಕಿನ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿ ಸ್ಮರಣೀಯ ಗೆಲುವು ಒಲಿಸಿಕೊಂಡಿದ್ದರು. ಇದೀಗ ದ್ವಿತೀಯ ಸುತ್ತಿನಲ್ಲಿ ನಾಗಲ್ ಸೋತರೂ ಈ ಸಾಧನೆಗಾಗಿ ಒಟ್ಟಾರೆ 98 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. ಇದು ಅವರ 2024ರ ಟೆನಿಸ್ ಕೂಟಗಳ ಪ್ರವಾಸ ಖರ್ಚನ್ನು ಬಹುತೇಕ ಭರಿಸಲಿದೆ.
ಬೋಪಣ್ಣ-ಎಬ್ಡೆನ್ ಮುನ್ನಡೆ
ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ ಅವರು ಸ್ಥಳೀಯ ಜೇಮ್ಸ್ ಡಕ್‌ವರ್ತ್ ಮತ್ತು ಮಾರ್ಕ್ ಪೊಲ್ಮಾನ್ಸ್ ಅವರನ್ನು ಸೋಲಿಸಿ ಮುನ್ನಡೆದಿದ್ದಾರೆ. ಆದರೆ ವಿಜಯ್ ಸುಂದರ್ ಪ್ರಶಾಂತ್ ಮತ್ತು ಅನಿರುದ್ಧ್ ಚಂದ್ರಶೇಖರ್ ಅವರು ಹಂಗೇರಿಯ ಮಾರ್ಟನ್ ಫುಸ್ಕೋವಿಕ್ಸ್ ಮತ್ತು ಫಾಬಿಯನ್ ಮರೊಜನ್ ಅವರಿಗೆ 3-6, 4-6 ಸೆಟ್‌ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.