Australian Open: ಮೆಡ್ವೆಡೇವ್-ಜ್ವೆರೇವ್ ಸೆಮಿಫೈನಲ್
Team Udayavani, Jan 25, 2024, 12:22 AM IST
ಮೆಲ್ಬರ್ನ್: ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.
ಬುಧವಾರದ ಕ್ವಾರ್ಟರ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೇವ್ ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಝ್ ವಿರುದ್ಧ 5 ಸೆಟ್‌ಗಳ ಕಠಿನ ಕಾದಾಟದ ಬಳಿಕ 7-6 (7-4), 2-6, 6-3, 5-7, 6-4 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಆಟವನ್ನು 6-1, 6-3, 6-7 (2-7), 6-4ರಿಂದ ಕೊನೆಗೊಳಿಸಿದರು.
ಡಯಾನಾ ಸಾಧನೆ
ವನಿತೆಯರ ವಿಭಾಗದಲ್ಲಿ ಉಕ್ರೇನ್‌ನ ಡಯಾನಾ ಯಾಸ್ಟ್ರೆಮ್‌ಸ್ಕಾ ದಾಖಲೆಯೊಂದನ್ನು ಬರೆದರು. 1978ರ ಬಳಿಕ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಅರ್ಹತಾ ಆಟಗಾರ್ತಿ ಎನಿಸಿದರು. ಅಂದು ಕ್ರಿಸ್ಟಿನ್ ಸ್ಟೋರಿ ಈ ಸಾಧನೆಗೈದಿದ್ದರು.
ಡಯಾನಾ ಯಾಸ್ಟ್ರೆಮ್‌ಸ್ಕಾ ಕ್ವಾರ್ಟರ್ ಫೈನಲ್‌ನಲ್ಲಿ 19 ವರ್ಷದ ಜೆಕ್ ಆಟಗಾರ್ತಿ ಲಿಂಡಾ ನೊಸ್ಕೋವಾ ಅವರನ್ನು 6-3, 6-4ರಿಂದ ಮಣಿಸಿದರು. ನೊಸ್ಕೋವಾ ಈ ಕೂಟದಲ್ಲಿ ಉಳಿದ ಅತೀ ಕಿರಿಯ ಆಟಗಾರ್ತಿ ಆಗಿದ್ದರು.
“ಸೂಪರ್ ಹ್ಯಾಪ್ಪಿ. ಇತಿಹಾಸ ನಿರ್ಮಿಸಿದ್ದಕ್ಕೆ ಬಹಳ ಖುಷಿ ಆಗುತ್ತಿದೆ. ಸ್ಟೋರಿ ಈ ದಾಖಲೆ ಬರೆಯುವಾಗ ನಾನಿನನ್ನೂ ಜನಿಸಿರಲಿಲ್ಲ. ನನ್ನದು 2000ದ ಇಸವಿ’ ಎಂಬುದಾಗಿ ಡಯಾನಾ ಹೇಳಿದರು. ಈ ಪಂದ್ಯ 38 ಡಿಗ್ರಿ ಸೆಲಿÏಯಸ್‌ನಷ್ಟು ಬಿಸಿಯಲ್ಲಿ ನಡೆದ ಕಾರಣ ಆಟಗಾರ್ತಿಯರಿಬ್ಬರೂ ಬಹಳ ಬಳಲಿದರು.
ಡಯಾನಾ ಯಾಸ್ಟ್ರೆಮ್‌ಸ್ಕಾ ಅವರಿನ್ನು ಚೀನದ ಕ್ವಿನ್ವೆನ್ ಜೆಂಗ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದ್ದಾರೆ. ಜೆಂಗ್ ರಷ್ಯಾದ ಅನ್ನಾ ಕಾಲಿನ್ಸ್‌ಕಯಾ ವಿರುದ್ಧ 6-7 (4-7), 6-3, 6-1 ಅಂತರದ ಗೆಲುವು ಸಾಧಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.