ಆಸ್ಟ್ರೇಲಿಯನ್ ಓಪನ್: ಸಾನಿಯಾ ಮಿರ್ಜಾ ಗೆಲುವಿನ ಆರಂಭ
ಪುರುಷರ ಡಬಲ್ಸ್‌ನಲ್ಲಿ ಸೋಲನುಭವಿಸಿದ ಭಾರತ
Team Udayavani, Jan 19, 2023, 10:35 PM IST
ಮೆಲ್ಬೋರ್ನ್:ಸಾನಿಯಾ ಮಿರ್ಜಾ ತಮ್ಮ ಕೊನೆಯ ಆಸ್ಟ್ರೇಲಿಯನ್ ಓಪನ್ ಸ್ಪರ್ಧೆಯನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಕಝಕಸ್ತಾನದ ಅನ್ನಾ ಡ್ಯಾನಿಲಿನಾ ಅವರೊಂದಿಗೆ ವನಿತಾ ಡಬಲ್ಸ್‌ನಲ್ಲಿ ಕಣಕ್ಕಿಳಿದಿರುವ ಅವರು ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಇಂಡೋ-ಕಝಕ್ ಜೋಡಿ ಸೇರಿಕೊಂಡು ಅಮೆರಿಕದ ಬರ್ನಾರ್ಡ್ ಪೆರಾ-ಹಂಗೇರಿಯ ದಲ್ಮಾ ಗಾಲ್ಫಿ ಅವರನ್ನು 6-2, 7-5 ಅಂತರದಿಂದ ಹಿಮ್ಮೆಟ್ಟಿಸಿತು.
ಸಾನಿಯಾ-ಡ್ಯಾನಿಲಿನಾ ದ್ವಿತೀಯ ಸುತ್ತಿನಲ್ಲಿ ಅನೆಲಿನಾ ಕಲಿನಿನಾ (ಉಕ್ರೇನ್)-ಅಲಿಸನ್ ವಾನ್ ಯುಟ್ವಾಂಕ್ (ಬೆಲ್ಜಿಯಂ) ಸವಾಲನ್ನು ಎದುರಿಸಲಿದ್ದಾರೆ. 36 ವರ್ಷದ ಸಾನಿಯಾ ಮಿರ್ಜಾ ಮಿಕ್ಸೆಡ್ ಡಬಲ್ಸ್‌ನಲ್ಲೂ ಆಡಲಿದ್ದು, ಇಲ್ಲಿ ಭಾರತದವರೇ ಆದ ರೋಹನ್ ಬೋಪಣ್ಣ ಜೋಡಿ ಆಗಿದ್ದಾರೆ.
ಪುರುಷರಿಗೆ ಸೋಲು:
ಪುರುಷರ ಡಬಲ್ಸ್‌ನಲ್ಲಿ ಭಾರತ ಸೋಲನುಭವಿಸಿದೆ. ಮೊದಲ ಸಲ ಗ್ರ್ಯಾನ್‌ಸ್ಲಾéಮ್‌ನಲ್ಲಿ ಜತೆಗೂಡಿ ಆಡಲಿಳಿದ ಯುಕಿ ಭಾಂಬ್ರಿ-ಸಾಕೇತ್ ಮೈನೆನಿ 14ನೇ ಶ್ರೇಯಾಂಕದ ಜಾನ್ ಪೀಯರ್ (ಆಸ್ಟ್ರೇಲಿಯ)-ಆ್ಯಂಡ್ರಿಯ ಮೀಸ್ (ಜರ್ಮನಿ) ವಿರುದ್ಧ 6-7 (5), 7-6 (4), 3-6 ಅಂತರದಿಂದ ಎಡವಿದರು. ಮೆಕ್ಸಿಕೊದ ಮಿಗ್ಯುಯೆಲ್ ಏಂಜೆಲ್ ರಿಯೆಸ್ ವರೇಲ ಅವರೊಂದಿಗೆ ಆಡಲಿಳಿದ ರಾಮ್‌ಕುಮಾರ್ ರಾಮನಾಥನ್ ಕೂಡ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಸಿಸಿಪಸ್ ಸೋದರರಾದ ಸ್ಟೆಫನಸ್-ಪೆಟ್ರೋಸ್ ಈ ಪಂದ್ಯವನ್ನು 3-6, 7-5, 6-3ರಿಂದ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.