ಆಸ್ಟ್ರೇಲಿಯನ್ ಓಪನ್ ಟೆನಿಸ್: ಸೆರೆನಾ ವಿಜಯ
Team Udayavani, Jan 18, 2017, 3:45 AM IST
ವನಿತಾ ಸಿಂಗಲ್ಸ್ ವಿಭಾಗದಲ್ಲಿ ಕಳೆದ ವರ್ಷದ ಪ್ರಶಸ್ತಿ ವಂಚಿತೆ ಸೆರೆನಾ ವಿಲಿಯಮ್ಸ್ ಶುಭಾರಂಭ ಮಾಡಿದ್ದಾರೆ. ಮಂಗಳವಾರದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಅವರು ಸ್ವಿಸ್‌ನ ಅಪಾಯಕಾರಿ ಆಟಗಾರ್ತಿ ಬೆಲಿಂಡಾ ಬೆನ್ಸಿಕ್‌ಗೆ 6-4, 6-3 ಅಂತರದ ಸೋಲುಣಿಸಿದರು. ಈ ಗೆಲುವಿಗೆ ಸೆರೆನಾರ ಭಾವೀ ಪತಿ ಅಲೆಕ್ಸಿಸ್ ಒಹಾನಿಯನ್ ಸಾಕ್ಷಿಯಾದರು.
ಯುಎಸ್ ಓಪನ್ ಸೆಮಿ ಫೈನಲ್‌ನಲ್ಲಿ ಪ್ಲಿಸ್ಕೋವಾ ಕೈಯಲ್ಲಿ ಆಘಾತಕಾರಿ ಸೋಲುಂಡ ಬಳಿಕ ಸೆರೆನಾ ಫಾರ್ಮ್ ಬಗ್ಗೆ ಸ್ವಲ್ಪ ಅನುಮಾನ ಹುಟ್ಟಿಕೊಂಡಿತ್ತು. ಈ ಸೋಲಿನಿಂದ ಸೆರೆನಾರ ಅಗ್ರ ರ್‍ಯಾಂಕಿಂಗ್ ಕೂಡ ಜಾರಿತ್ತು. ಇದೂ ಸಾಲದೆಂಬಂತೆ, ಇದೇ ತಿಂಗಳ ಆಕ್ಲೆಂಡ್ ಕ್ಲಾಸಿಕ್ ದ್ವಿತೀಯ ಸುತ್ತಿನಲ್ಲೇ ಅವರು ಮ್ಯಾಡಿಸನ್ ಬ್ರಿಂಗಲ್‌ಗೆ ಸೋತಿದ್ದರು. ಆದರೆ ಬೆನ್ಸಿಕ್ ವಿರುದ್ಧ ಶಕ್ತಿಶಾಲಿ ಪ್ರದರ್ಶನವನ್ನೇ ನೀಡಿ ಅನುಮಾನವನ್ನು ದೂರ ಮಾಡಿದರು. ಆದರೆ ಇದು ಪ್ರಥಮ ಸುತ್ತಿನಲ್ಲೇ ತಾನು ಕಂಡ ಅತ್ಯಂತ ಕಠಿನ ಪಂದ್ಯ ಎಂದಿದ್ದಾರೆ.
ಸೆರೆನಾ ಆವರ 2ನೇ ಸುತ್ತಿನ ಎದುರಾಳಿ ಜೆಕ್ ಗಣರಾಜ್ಯದ ಲೂಸಿ ಸಫರೋವಾ. ಅವರು ಬೆಲ್ಜಿಯಂನ ಯಾನಿನಾ ವಿಕ್‌ವೆುàಯರ್ ವಿರುದ್ಧ ಭಾರೀ ಹೋರಾಟವೊಂದನ್ನು ಸಂಘಟಿಸಿ ಸಂಭಾವ್ಯ ಸೋಲನ್ನು ತಪ್ಪಿಸಿಕೊಂಡರು. ಸಫರೋವಾ ಜಯದ ಅಂತರ 3-6, 7-6 (9-7), 6-1. ಜೆಕ್ ಆಟಗಾರ್ತಿ ಪ್ಲಿಸ್ಕೋವಾ 6-2, 6-0 ಅಂತರದಿಂದ ಸ್ಪೇನಿನ ಸಾರಾ ಸೊರಿಬೆಸ್ ಟೊರ್ಮೊ ಅವರನ್ನು ಸೋಲಿಸಿದರು.
ಕಳೆದ ವಾರವಷ್ಟೇ ಸಿಡ್ನಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿದ ಬ್ರಿಟನ್ನಿನ 9ನೇ ಶ್ರೇಯಾಂಕಿತೆ ಜೊಹಾನಾ ಕೊಂಟಾ ಕೂಡ ಗೆಲುವಿನ ಆರಂಭ ಕಂಡು ಕೊಂಡಿದ್ದಾರೆ. ಅವರು ಬೆಲ್ಜಿಯಂನ ಅನುಭವಿ ಆಟ ಗಾರ್ತಿ ಕರ್ಸ್ಟನ್ ಫ್ಲಿಪ್‌ಕೆನ್ಸ್ ವಿರುದ್ಧ 7-5, 6-2ರಿಂದ ಮೇಲುಗೈ ಸಾಧಿಸಿದರು.
ಸಮಂತಾ ಆಟ ಅಂತ್ಯ
18ನೇ ಶ್ರೇಯಾಂಕಿತ ಆಟ ಗಾರ್ತಿ ಸಮಂತಾ ಸ್ಟೋಸರ್ ಮೊದಲ ಸುತ್ತಿ ನಲ್ಲೇ ಸೋಲುಂಡು ಆತಿಥೇಯ ನಾಡಿನ ಟೆನಿಸ್ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿದರು. ಬ್ರಿಟನ್ನಿನ ಹೀತರ್ ವಾಟ್ಸನ್ 6-3, 3-6, 6-0 ಅಂತರದಿಂದ ಆಸ್ಟ್ರೇಲಿಯನ್ ಆಟಗಾರ್ತಿಗೆ ಆಘಾತವಿಕ್ಕಿದರು.
ಆತಿಥೇಯ ದೇಶದ ಮತ್ತೂಬ್ಬ ಆಟಗಾರ್ತಿ ಅರಿನಾ ರೊಡಿಯೊನೋವಾ ಕೂಡ ಮೊದಲ ಸುತ್ತಿನಲ್ಲೇ ಎಡವಿದ್ದಾರೆ. ಅವರನ್ನು ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ 6-1, 6-2ರಿಂದ ಸುಲಭದಲ್ಲಿ ಮಣಿಸಿದರು.
ಸ್ಲೊವಾಕಿಯಾದ 6ನೇ ಶ್ರೇಯಾಂಕದ ಆಟಗಾರ್ತಿ, 2014ರ ಫೈನಲಿಸ್ಟ್ ಡೊಮಿನಿಕಾ ಸಿಬುಲ್ಕೋವಾ ಸಾಹಸಭರಿತ ಹೋರಾಟವೊಂದರಲ್ಲಿ ಜೆಕ್ ಗಣರಾಜ್ಯದ ಡೆನಿಸಾ ಅಲಟೋìವಾಗೆ 7-5, 6-2 ಅಂತರದ ಸೋಲುಣಿಸಿದರು.
21ನೇ ಶ್ರೇಯಾಂಕಿತೆ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ಆಟವನ್ನು 7-6 (7-4), 6-4ರಿಂದ ಮುಗಿಸಿದರು. ಜೆಕ್ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ, ರಶ್ಯದ ಎಲಿನಾ ವೆಸ್ನಿನಾ, ಎಕ್ತರಿನಾ ಮಕರೋವಾ, ಇಟಲಿಯ ಸಾರಾ ಎರಾನಿ ಜಯದೊಂದಿಗೆ 2ನೇ ಸುತ್ತಿಗೆ ಏರಿದ್ದಾರೆ. ಆದರೆ ಹಂಗೇರಿಯ ಟೈಮಿಯಾ ಬಬೋಸ್ (25) ಪರಾಭವಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.