ಆಸ್ಟ್ರೇಲಿಯನ್ ಓಪನ್ ಟೆನಿಸ್ ಜೊಕೋ-ಫೆಡರರ್ ಸೆಮಿ ಸೆಣಸಾಟ
Team Udayavani, Jan 28, 2020, 10:43 PM IST
ಮೆಲ್ಬರ್ನ್: ಟೆನಿಸ್ ವಿಶ್ವದ ಇಬ್ಬರು ದಿಗ್ಗಜ ತಾರೆಗಳಾದ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಸ್ವಿಟ್ಸರ್ಲಂಡಿನ ರೋಜರ್ ಫೆಡರರ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗುತ್ತಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಜೊಕೋವಿಕ್ ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆನಡದ ಮಿಲೋಸ್ ರೋನಿಕ್ ಅವರನ್ನು 6-4, 3-7, 7- (7-1) ಸೆಟ್‌ಗಳಿಂದ ಉರುಳಿಸಿ ಎಂಟನೇ ಬಾರಿ ಇಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. ರಾಡ್ ಲಾವೆರ್ ಅರೇನಾದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಈ ಪಂದ್ಯದಲ್ಲಿ ಜೊಕೋವಿಕ್ ಅದ್ಭುತ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು. ಮೊದಲೆರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದ ಜೊಕೋವಿಕ್ ಅವರು ಮೂರನೇ ಸೆಟ್‌ನಲ್ಲಿ ಸ್ವಲ್ಪಮಟ್ಟಿನ ಪ್ರತಿರೋಧ ಎದುರಿಸಿದರು. ಸಮಬಲದಿಂದ ಸಾಗಿದ ಈ ಸೆಟ್ ಅಂತಿಮವಾಗಿ ಟೈಬ್ರೇಕರ್‌ನಲ್ಲಿ ಅಂತ್ಯಗೊಂಡಿತು.
ಫೆಡರರ್ “ಪವಾಡ’
ಇನ್ನೊಂದು ಕ್ವಾ. ಫೈನಲ್ ಹೋರಾಟದಲ್ಲಿ ರೋಜರ್ ಫೆಡರರ್ ಐದು ಸೆಟ್‌ಗಳ ಸಂಘರ್ಷಪೂರ್ಣ ಸೆಣಸಾಟದಲ್ಲಿ ಪವಾಡ ರೀತಿಯಲ್ಲಿ ಸೋಲಿನಿಂದ ಪಾರಾಗಿ ಸೆಮಿಫೈನಲ್ ತಲುಪಿದ್ದಾರೆ. ಎದುರಾಳಿ ಅಮೆರಿಕದ 100ನೇ ರ್‍ಯಾಂಕಿನ ಟೆನ್ನಿಸ್ ಸ್ಯಾಂಡ್‌ಗೆÅನ್. ಏಳು ಬಾರಿ ಪಂದ್ಯ ಅಂಕ ರಕ್ಷಿಸಿದ ಫೆಡರರ್ ಪವಾಡ ರೀತಿಯಲ್ಲಿ ಸೋಲಿನಿಂದ ಪಾರಾಗಿ ಮುನ್ನಡೆದರು. 6-3, 2-6, 2-6, 7-6 (10-8), 6-3 ಸೆಟ್‌ಗಳಿಂದ ಜಯಭೇರಿ ಬಾರಿಸಿದ ಫೆಡರರ್ ಪವಾಡಗಳಲ್ಲಿ ನನಗೆ ನಂಬಿಕೆಯಿದೆ ಎಂದು ಪಂದ್ಯ ಗೆದ್ದ ಬಳಿಕ ಉದ್ಗರಿಸಿದ್ದರು.
ಆರು ಬಾರಿಯ ಚಾಂಪಿಯನ್ ಫೆಡರರ್ ದೈಹಿಕವಾಗಿ ಉತ್ತಮ ನಿರ್ವಹಣೆ ನೀಡಲು ಒದ್ದಾಡುತ್ತಿದ್ದರು. ನಾಲ್ಕನೇ ಸೆಟ್‌ನಲ್ಲಿ 4-5ರಲ್ಲಿರುವಾಗ ಮೂರು ಪಂದ್ಯ ಅಂಕ ರಕ್ಷಿಸಿದ ಅವರು ಟೈಬ್ರೇಕರ್‌ನಲ್ಲಿ ಮತ್ತೆ ನಾಲ್ಕು ಪಂದ್ಯ ಅಂಕ ರಕ್ಷಿಸಿ ಅಪಾಯದಿಂದ ಪಾರಾಗಿದ್ದರು.
ಫೆಡರರ್‌ಗೆ ಗೆಲ್ಲಲು ಕಠಿನ ಸವಾಲು ಒಡ್ಡಿದ್ದ ಸ್ಯಾಂಡ್‌ಗೆÅನ್ ಈ ಹಿಂದಿನ ಪಂದ್ಯದಲ್ಲೂ ನಾಲ್ಕು ಸೆಟ್‌ಗಳ ಹೋರಾಟ ನಡೆಸಿದ್ದರು. ಈ ಪಂದ್ಯದ ಟೈಬ್ರೇಕರ್‌ನಲ್ಲಿ ಅವರು ದುರದೃಷ್ಟವಶಾತ್ ಚೆಂಡು ಹೆಕ್ಕುವ ಹುಡುಗಿ ಜತೆ ಢಿಕ್ಕಿಯಾಗಿದ್ದರು.
ಪೇಸ್-ಒಸ್ಟಾಪೆಂಕೊ ಜೋಡಿಗೆ ಸೋಲು
ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಇಲ್ಲಿ ನಡೆಯುತ್ತಿರುವ “ಆಸ್ಟ್ರೇಲಿಯನ್ ಓಪನ್’ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋತು ಕೂಟದಿಂದ ಹೊರ ನಡೆದಿ¨ªಾರೆ.
ಮಂಗಳವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಲಾತ್ವಿಯಾದ ಜಲೆನಾ ಒಸ್ಟಾಪೆಂಕೊ ಜತೆಗೂಡಿ ಆಡಿದ ಪೇಸ್ 2-6, 5-7 ಅಂತರದಿಂದ ಆಂಗ್ಲೊ-ಅಮೆರಿಕನ್ ಜೋಡಿಯಾದ ಜಾಮಿ ಮರ್ರೆ ಮತ್ತು ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿಗೆ ಶರಣಾಯಿತು.
ಕೋಬ್ ಹೆಸರಿನ ಜರ್ಸಿ ಧರಿಸಿ ಕಣ್ಣೀರಿಟ್ಟ ಜೊಕೋ
ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್‌ಫೈನಲ್ ಪಂದ್ಯದ ಬಳಿಕ ಮಾತನಾಡಿದ ನೊವಾಕ್ ಜೊಕೋವಿಕ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಖ್ಯಾತ ಬಾಸ್ಕೆಟ್‌ಬಾಲ್ ತಾರೆ ಕೋಬ್ ಬ್ರ್ಯಾಂಟ್ ಅವರನ್ನು ನೆನೆದು ಕಣ್ಣೀರಿಟ್ಟರು. ಕೆಬಿ ಹೆಸರಿನ ಜರ್ಸಿ ಧರಿಸಿದ್ದ ಅವರು ಕೋಬ್ ಅವರ ಗೆಳೆತನವನ್ನು ಸ್ಮರಿಸಿಕೊಂಡು ಅತ್ತರು. ಕಳೆದ 10 ವರ್ಷಗಳಿಂದ ಅವರು ನನ್ನ ಪಾಲಿನ ಮೆಂಟರ್ ಮತ್ತು ಸ್ನೇಹಿತರಾಗಿದ್ದರು. ಅವರ ಅಗಲುವಿಕೆಯಿಂದ ಆಘಾತವಾಗಿದೆ. ಅವರು ನನಗೆ ಮಾತ್ರವಲ್ಲದೇ ವಿಶ್ವದ ಹಲವಾರು ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದರು ಎಂದರು.
ಬಾರ್ಟಿ ಸೆಮಿಫೈನಲಿಗೆ
ಅಗ್ರ ಶ್ರೇಯಾಂಕದ ಮತ್ತು ಕಣದಲ್ಲಿ ಉಳಿದಿರುವ ಆಸ್ಟ್ರೇಲಿಯದ ಏಕೈಕ ಆಟಗಾರ್ತಿಯಾಗಿರುವ ಆ್ಯಶೆÉ ಬಾರ್ಟಿ ಅವರು ಕಠಿನ ಹೋರಾಟದಲ್ಲಿ ಪೆಟ್ರಾ ಕ್ವಿಟೋವಾ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ಹಂತಕ್ಕೇರಿದ್ದಾರೆ.
ಕ್ವಿಟೋವಾ ಅವರನ್ನು 7-6 (8-6), 6-2 ಸೆಟ್‌ಗಳಿಂದ ಉರುಳಿಸಿದ ಬಾರ್ಟಿ ಅವರು ಸೆಮಿಫೈನಲ್‌ನಲ್ಲಿ 14ನೇ ಶ್ರೇಯಾಂಕದ ಅಮೆರಿಕದ ಸೋಫಿಯಾ ಕೆನಿನ್ ಅವರ ಸವಾಲನ್ನು ಎದರಿಸಲಿದ್ದಾರೆ. 23ರ ಹರೆಯದ ಬಾರ್ಟಿ ಅವರು ಕಳೆದ ವರ್ಷ ಇಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿಯ ಕೈಯಲ್ಲಿ ಕ್ವಾರ್ಟರ್‌ಫೈನಲ್ ಹಂತದಲ್ಲಿಯೇ ಸೋತಿದ್ದರು. ಇದೀಗ ಕಠಿನ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡರು. ಬಾರ್ಟಿ ಅವರ ಸೆಮಿಫೈನಲ್ ಎದುರಾಳಿ ಕೆನಿನ್ ತನ್ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಟ್ಯುನಿಶಿಯಾದ ಓನಸ್ ಜಬೆಯುರ್ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.