Australian Open Tennis: ವಿಶ್ವ ನಂ.1 ಸ್ವಿಯಾಟೆಕ್‌ಗೆ ಆಘಾತ
Australian Open, Tennis, Shock, World No.1, Iga Swiatek
Team Udayavani, Jan 20, 2024, 11:45 PM IST
ಮೆಲ್ಬರ್ನ್: ವಿಶ್ವದ ನಂಬರ್ ವನ್ ಇಗಾ ಸ್ವಿಯಾಟೆಕ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಮೂರನೇ ಸುತ್ತಿನ ಹೋರಾಟದಲ್ಲಿ ಸೋತು ಆಘಾತಕ್ಕೆ ಒಳಗಾಗಿದ್ದಾರೆ. ಶನಿವಾರ ನಡೆದ ಈ ಪಂದ್ಯದಲ್ಲಿ ಸ್ವಿಯಾಟೆಕ್ ಅವರನ್ನು ಜೆಕ್ ಗಣರಾಜ್ಯದ ಹದಿಹರೆಯದ ಲಿಂಡಾ ನೋಸ್ಕೋವಾ ಅವರು 3-6, 6-3, 6-4 ಸೆಟ್‌ಗಳಿಂದ ಉರುಳಿಸಿದರು.
ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ್ದ ಸ್ವಿಯಾಟೆಕ್ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲರಾಗಿ ಶರಣಾದರು. ಈ ಮೂಲಕ ಇಲ್ಲಿ ಚೊಚ್ಚಲ ಬಾರಿ ಮತ್ತು ಒಟ್ಟಾರೆ ಗ್ರ್ಯಾನ್ ಸ್ಲಾಮ್‌ನಲ್ಲಿ ಐದನೇ ಪ್ರಶಸ್ತಿ ಗೆಲ್ಲುವ ಪ್ರಯತ್ನವು ಮೂರನೇ ಸುತ್ತಿನಲ್ಲಿ ಅಂತ್ಯಗೊಂಡಿತು.
ಅಜರೆಂಕಾ ಮುನ್ನಡೆ
ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಮೂರನೇ ಸುತ್ತಿನ ಹೋರಾಟದಲ್ಲಿ ಜೆಲೆನಾ ಒಸ್ಟಾಪೆಂಕೊ ಅವರನ್ನು ಸುಲಭವಾಗಿ ಮಣಿಸಿ ಮುನ್ನಡೆದರು. 34ರ ಹರೆಯದ ಅಜರೆಂಕಾ 6-1, 7-5 ಸೆಟ್‌ಗಳಿಂದ 2017ರ ಫ್ರೆಂಚ್ ಓಪನ್ ಚಾಂಪಿಯನ್ ಒಸ್ಟಾಪೆಂಕೊ ಅವರನ್ನು ಉರುಳಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಡಯಾನಾ ಯಸೆŒàಮಸ್ಕಾ ಅವರನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ಪಂದ್ಯದಲ್ಲಿ ಎಮ್ಮಾ ನವಾರೊ ಅವರನ್ನು 6-2, 2-6, 6-1 ಸೆಟ್‌ಗಳಿಂದ ಕೆಡಹಿದ್ದರು.
ಸ್ಟೀಫನ್ಸ್‌ಗೆ ಸೋಲು
ಅಮೆರಿಕದ ಮಾಜಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಅವರು ಮೂರು ಸೆಟ್‌ಗಳ ಹೋರಾಟದಲ್ಲಿ ಅನ್ನಾ ಕಲಿನ್‌ಸ್ಕಾಯಾ ಅವರೆದುರು ಸೋಲನ್ನು ಕಂಡು ಹೊರಬಿದ್ದರು. 6-7 (8), 6-1, 6-4 ಸೆಟ್‌ಗಳಿಂದ ಜಯ ಸಾಧಿಸಿದ ಕಲಿನ್‌ಸ್ಕಾಯಾ ಅವರು ಮುಂದಿನ ಸುತ್ತಿನಲ್ಲಿ ಇಟಲಿಯ ಜಾಸ್ಮಿನ್ ಪೊಲಿನಿ ಅವರನ್ನು ಎದುರಿಸಲಿದ್ದಾರೆ. ಪೊಲಿನಿ ಇನ್ನೊಂದು ಪಂದ್ಯದಲ್ಲಿ ರಷ್ಯಾದ ಅನ್ನಾ ಬ್ಲಿಂಕೋವಾ ಅವರನ್ನು 7-6 (1), 6-4 ಸೆಟ್‌ಗಳಿಂದ ಸೋಲಿಸಿದ್ದರು. ಚೀನದ ಆಟಗಾರ್ತಿಯರ ನಡುವೆ ನಡೆದ ಪಂದ್ಯದಲ್ಲಿ ಝೆನ್ ಕ್ವಿನ್ವೆನ್ ಅವರು ವಾಂಗ್ ಯಫಾನ್ ಅವರನ್ನು 6-4, 2-6, 7-6 (8) ಸೆಟ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಒಸೀನ್ ಡೊಡಿನ್ ಅವರನ್ನು ಎದುರಿಸಲಿದ್ದಾರೆ.
ಅಲ್ಕರಾಜ್ ನಾಲ್ಕನೇ ಸುತ್ತಿಗೆ
ಪಂದ್ಯದ ನಡುವೆ ಚೀನದ ವೈಲ್ಡ್‌ಕಾರ್ಡ್ ಪ್ರವೇಶಿಗ ಶಾಂಗ್ ಜುನ್‌ಚೆಂಗ್ ಗಾಯದಿಂದಾಗಿ ನಿವೃತ್ತಿಯಾದ ಕಾರಣ ಕಾರ್ಲೋಸ್ ಅಲ್ಕರಾಜ್ ನಾಲ್ಕನೇ ಸುತ್ತಿಗೇರಿದರು. ಎರಡು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ಅಲ್ಕರಾಜ್ 18ರ ಹರೆಯದ ಶಾಂಗ್ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಅಂತಿಮವಾಗಿ ಶಾಂಗ್ ಪಂದ್ಯ ತ್ಯಜಿಸಿದಾಗ ಅಲ್ಕರಾಜ್ 6-1, 6-1, 1-0 ಅಂತರದಿಂದ ಮುನ್ನಡೆಯಲ್ಲಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸರ್ಬಿಯಾದ ಮಿಯೊಮಿರ್ ಕೆಮನೋವಿಕ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.