ಕ್ರಿಕೆಟ್‌ಗೆ ಕಂಟಕವಾದ ಆಸ್ಟ್ರೇಲಿಯದ ಕಾಡ್ಗಿಚ್ಚು
Team Udayavani, Dec 23, 2019, 12:48 AM IST
ಸಿಡ್ನಿ: ಆಸ್ಟ್ರೇಲಿಯದ ಪೂರ್ವ ಭಾಗದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದಾಗಿ ವಾತಾವರಣದಲ್ಲಿ ಹೊಗೆ ತುಂಬಿಕೊಂಡಿದ್ದು, ಗಾಳಿಯ ಗುಣಮಟ್ಟ ಕುಸಿದಿದೆ. ಇದರಿಂದಾಗಿ ಜನಜೀವನ ದುಸ್ತರವಾಗಿರುವುದು ಮಾತ್ರವಲ್ಲದೆ ಕ್ರಿಕೆಟ್ ವೇಳಾಪಟ್ಟಿಯೂ ವ್ಯತ್ಯಯವಾಗುವ ಭೀತಿ ತಲೆದೋರಿದೆ.
ಇತ್ತೀಚೆಗೆ ಕ್ಯಾನ್‌ಬೆರಾದ “ಮನುಕ ಓವಲ್’ನಲ್ಲಿ ಸಿಡ್ನಿ ಥಂಡರ್ ಮತ್ತು ಅಡಿಲೇಡ್ ಸ್ಟ್ರೈಕರ್ ನಡುವೆ ನಡೆಯಲಿದ್ದ ಪಂದ್ಯವನ್ನು ವಾತಾವರಣದ ಗುಣಮಟ್ಟ ಕುಸಿದಿರುವ ಕಾರಣ ರದ್ದುಪಡಿಸಲಾಗಿತ್ತು.
ಪಂದ್ಯ ವೀಕ್ಷಿಸಲು ಬಂದವರ ಆರೋಗ್ಯ ಕೆಟ್ಟು ವೈದ್ಯರನ್ನು ಕರೆಸಬೇಕಾಯಿತು ಹಾಗೂ ವೇಗಿಗಳಿಗೆ ಎರಡು ಓವರ್ ಎಸೆದಾಗಲೇ ಉಬ್ಬಸ ಬರತೊಡಗಿತ್ತು.
ಹದಗೆಟ್ಟಿರುವ ವಾತಾವರಣ ಎನ್ನುವುದು ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವೆ ಸಿಡ್ನಿಯಲ್ಲಿ ನಡೆಯಲಿರುವ ಹೊಸ ವರ್ಷದ ಟೆಸ್ಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ವಾತಾವರಣದ ಗುಣಮಟ್ಟ ಸುಧಾರಿಸುವ ಯಾವ ಲಕ್ಷಣವೂ ಗೋಚರಿಸದಿರುವುದರಿಂದ ಈ ಟೆಸ್ಟ್ ಸರಣಿಯ ಭವಿಷ್ಯ ಅತಂತ್ರವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಪಂದ್ಯಗಳ ವೇಳಾಪಟ್ಟಿ ಹೊಂದಾಣಿಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.