Olympics ಕುಸ್ತಿ ಆಯ್ಕೆ ಟ್ರಯಲ್ಸ್ ಮಧ್ಯಾಂತರ ಸಮಿತಿಗೆ ಅಧಿಕಾರ
Team Udayavani, Mar 9, 2024, 12:31 AM IST
ಹೊಸದಿಲ್ಲಿ: ಈ ಬಾರಿಯ ಹಿರಿಯರ ಏಷ್ಯಾ ಕುಸ್ತಿ ಕೂಟ ಮತ್ತು ಒಲಿಂಪಿಕ್ಸ್ ಏಷ್ಯಾ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್ ನಿಂದ ಡಬ್ಲ್ಯುಎಫ್ಐ (ಭಾರತ ಕುಸ್ತಿ ಒಕ್ಕೂಟ) ಹಿಂದೆ ಸರಿದಿದೆ. ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಅದು ಹಿಂದೆ ಸರಿದಿರುವುದರಿಂದ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನೇಮಿಸಿದ ಮಧ್ಯಾಂತರ ಸಮಿತಿ ಆಯ್ಕೆ ಟ್ರಯಲ್ಸ್ ನಡೆಸಲಿದೆ.
ಇದೇ ವೇಳೆ ಮಧ್ಯಂತರ ಸಮಿತಿಗೆ ಪರ್ಯಾಯವಾಗಿ ಬೇರೆ ಯಾರೂ ಆಯ್ಕೆ ಟ್ರಯಲ್ಸ್ ನಡೆಸುವಂತಿಲ್ಲ. ಮಧ್ಯಂತರ ಸಮಿತಿಯ ಟ್ರಯಲ್ಸ್ನಲ್ಲಿ ಎಲ್ಲ ಅರ್ಹ ಕುಸ್ತಿಪಟುಗಳಿಗೂ ಅವಕಾಶ ನೀಡಬೇಕೆಂದು ನ್ಯಾಯಾಲಯ ಹೇಳಿದೆ.
ಬೆಳವಣಿಗೆಯ ಹಿನ್ನೆಲೆ
ಫೆ. 26ರಂದು ಡಬ್ಲ್ಯುಎಫ್ಐ ಹೊರಡಿಸಿದ್ದ ಒಂದು ಸುತ್ತೋಲೆಯಲ್ಲಿ ತಾನೇ ಆಯ್ಕೆ ಟ್ರಯಲ್ಸ್ ನಡೆಸುವುದಾಗಿ ಹೇಳಿತ್ತು. ಇದನ್ನು ವಿರೋಧಿಸಿ, ಬಜರಂಗ್ ಪುನಿಯ, ವಿನೇಶ್ ಫೊಗಾಟ್, ಸಾಕ್ಷಿ ಮಲಿಕ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವ ಡಬ್ಲ್ಯುಎಫ್ಐಗೆ ಆಯ್ಕೆ ಟ್ರಯಲ್ಸ್ ನಡೆಸುವ ಅಧಿಕಾರವಿಲ್ಲ, ಅದು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಉಲ್ಲಂ ಸಿದೆ ಎಂದು ಅರ್ಜಿ ಹಾಕಿದ್ದರು. ಇದನ್ನು ದಿಲ್ಲಿ ಉಚ್ಚ ನ್ಯಾಯಾಲಯ ಪುರಸ್ಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.