ಕಾರ್ತಿಕ್, ಆವೇಶ್ ಆವೇಶಕ್ಕೆ ದ.ಆಫ್ರಿಕಾ ತತ್ತರ: ಭಾರತ 82 ರನ್ ಜಯಭೇರಿ; ಸರಣಿ 2-2
ಕಾರ್ತಿಕ್ ಅರ್ಧ ಶತಕ, ಆವೇಶ್ ಖಾನ್‌ಗೆ 4 ವಿಕೆಟ್
Team Udayavani, Jun 17, 2022, 10:51 PM IST
ರಾಜ್‌ಕೋಟ್: ದಿನೇಶ್ ಕಾರ್ತಿಕ್-ಹಾರ್ದಿಕ್ ಪಾಂಡ್ಯ ಕೊನೆಯ ಹಂತದಲ್ಲಿ ನಡೆಸಿದ ಬಿರುಸಿನ ಬ್ಯಾಟಿಂಗ್ ಹಾಗೂ ಆವೇಶ್ ಖಾನ್ ಅವರ ದಿಟ್ಟ ಪ್ರತಿದಾಳಿಯಿಂದಾಗಿ ರಾಜ್‌ಕೋಟ್‌ನ ನಿರ್ಣಾಯಕ ಟಿ20 ಪಂದ್ಯವನ್ನು ಭಾರತ 82 ರನ್ನುಗಳಿಂದ ಭರ್ಜರಿಯಾಗಿ ಗೆದ್ದು ಸರಣಿಯನ್ನು 2-2 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ರವಿವಾರ ಬೆಂಗಳೂರು ಪಂದ್ಯ ಗೆದ್ದವರಿಗೆ ಸರಣಿ ಒಲಿಯಲಿದೆ.
ಸತತ 4ನೇ ಪಂದ್ಯದಲ್ಲೂ ಟಾಸ್ ಸೋತುಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 169 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 16.5 ಓವರ್‌ಗಳಲ್ಲಿ 87 ರನ್ನಿಗೆ ಸರ್ವಪತನ ಕಂಡಿತು.
ದಿನೇಶ್ ಕಾರ್ತಿಕ್ ಬಿರುಸಿನ ಗತಿಯಲ್ಲಿ 55 ರನ್ ಹೊಡೆದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾರ್ತಿಕ್ ಹೊಡೆದ ಮೊದಲ ಅರ್ಧ ಶತಕ.
ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾಕ್ಕೆ ದಿಟ್ಟ ಆರಂಭ ಸಾಧ್ಯವಾಗಲಿಲ್ಲ. ನಾಯಕ ಬವುಮ ಗಾಯಾಳಾಗಿ ಕ್ರೀಸ್ ತ್ಯಜಿಸಿದ್ದು ಕೂಡ ಹಿನ್ನಡೆಯಾಯಿತು. ಆವೇಶ್ ಖಾನ್ ಒಂದೇ ಓವರ್‌ನಲ್ಲಿ ಡುಸೆನ್, ಜಾನ್ಸೆನ್ ಮತ್ತು ಮಹಾರಾಜ್ ವಿಕೆಟ್ ಕೆಡವಿ ಭಾರತಕ್ಕೆ ಮೇಲುಗೈ ಒದಗಿಸಿದರು. ಆವೇಶ್ ಸಾಧನೆ 18ಕ್ಕೆ 4 ವಿಕೆಟ್. 20 ರನ್ ಮಾಡಿದ ಡುಸೆನ್ ಅವರೇ ದಕ್ಷಿಣ ಆಫ್ರಿಕಾ ಸರದಿಯ ಟಾಪ್ ಸ್ಕೋರರ್.
ಆರಂಭಿಕ ಒತ್ತಡ
ದಕ್ಷಿಣ ಆಫ್ರಿಕಾ ವೈಡ್ ಎಸೆತದೊಂದಿಗೆ ಪಂದ್ಯ ಆರಂಭಿಸಿತ್ತು. ಆದರೆ ಇದು ಹರಿಣಗಳಿಗೆ ಅದೃಷ್ಟವನ್ನೇ ತಂದಿತ್ತಿತು. ಭಾರತ 3 ಓವರ್ ಆಗುವಷ್ಟರಲ್ಲಿ 2 ವಿಕೆಟ್ ಉರುಳಿಸಿಕೊಂಡು ಒತ್ತಡಕ್ಕೆ ಒಳಗಾಯಿತು. ಕಳೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಗಮನ ಸೆಳೆದಿದ್ದ ಋತುರಾಜ್ ಗಾಯಕ್ವಾಡ್ ಇಲ್ಲಿ ಕೇವಲ 5 ರನ್ನಿಗೆ ಆಟ ಮುಗಿಸಿದರು. ಲುಂಗಿ ಎನ್‌ಗಿಡಿ ತಮ್ಮ ಪ್ರಥಮ ಓವರ್‌ನ ಕೊನೆಯ ಎಸೆತದಲ್ಲಿ ಈ ಯಶಸ್ಸು ತಂದಿತ್ತರು.
ಶ್ರೇಯಸ್ ಅಯ್ಯರ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿದರೂ ಮುಂದಿನ ಎಸೆತದಲ್ಲೇ ಲೆಗ್ ಬಿಫೋರ್ ಬಲೆಗೆ ಬಿದ್ದರು. ವಿಕೆಟ್ ಟೇಕರ್ ಮಾರ್ಕೊ ಜಾನ್ಸೆನ್. ಪವರ್ ಪ್ಲೇ ಮುಕ್ತಾಯಕ್ಕೆ ಭಾರತ 2 ವಿಕೆಟಿಗೆ 40 ರನ್ ಮಾಡಿತು.
ಇನ್ನೊಂದು ಬದಿಯಲ್ಲಿ ಕ್ರೀಸ್ ಆಕ್ರಮಿಸಿಕೊಂಡಿದ್ದ ಇಶಾನ್ ಕಿಶನ್ ಉತ್ತಮ ಲಯದಲ್ಲಿ ಸಾಗುತ್ತಿದ್ದರು. ಆದರೆ ಆ್ಯನ್ರಿಚ್ ನೋರ್ಜೆ ತಮ್ಮ ಪ್ರಥಮ ಎಸೆತದಲ್ಲೇ ಇಶಾನ್ ಕಿಶನ್ ಆಟಕ್ಕೆ ತೆರೆ ಎಳೆದರು. ಬ್ಯಾಟಿಗೆ ಸವರಿದ ಚೆಂಡು ನೇರವಾಗಿ ಕೀಪರ್ ಡಿ ಕಾಕ್ ಕೈ ಸೇರಿತು. 26 ಎಸೆತ ನಿಭಾಯಿಸಿದ ಇಶಾನ್ ಕಿಶನ್ 4 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 27 ರನ್ ಹೊಡೆದರು.
7ನೇ ಓವರ್‌ನಲ್ಲಿ ರಿಷಭ್ ಪಂತ್- ಹಾರ್ದಿಕ್ ಪಾಂಡ್ಯ ಜತೆಗೂಡಿದರು. ಆದರೆ ರನ್‌ಗತಿಯಲ್ಲಿ ಸುಧಾರಣೆ ಆಗಲಿಲ್ಲ. ಇಬ್ಬರೂ ನಿಧಾನವಾಗಿ ಆಡುತ್ತಿದ್ದರು. ಅರ್ಧ ಹಾದಿ ಕ್ರಮಿಸುವಾಗ ಭಾರತ 3 ವಿಕೆಟಿಗೆ ಕೇವಲ 56 ರನ್ ಮಾಡಿತ್ತು. ಹರಿಣಗಳ ಬೌಲಿಂಗ್ ದಾಳಿ ಹರಿತವಾಗಿ ಗೋಚರಿಸಿತು.
ರಿಷಭ್ ಪಂತ್ ವೈಫಲ್ಯ ಇಲ್ಲಿಯೂ ಮುಂದುವರಿ ಯಿತು. 23 ಎಸೆತಗಳಿಂದ 17 ರನ್ ಮಾಡಿದ ಅವರು ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು. 15 ಓವರ್ ಅಂತ್ಯಕ್ಕೆ ಭಾರತದ ಮೊತ್ತ 4ಕ್ಕೆ 96 ರನ್ ಆಗಿತ್ತು.
ಡೆತ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ- ದಿನೇಶ್ ಕಾರ್ತಿಕ್ ಜತೆಗೂಡಿದರು. ಇಬ್ಬರೂ ಮುನ್ನುಗ್ಗಿ ಬಾರಿಸತೊಡಗಿದರು. ಈ ಜೋಡಿ ಯಿಂದ 5ನೇ ವಿಕೆಟಿಗೆ 33 ಎಸೆತಗಳಿಂದ 65 ರನ್ ಒಟ್ಟುಗೂಡಿತು. ಇನ್ನೇನು ಪಾಂಡ್ಯ ಅರ್ಧ ಶತಕ ಪೂರೈಸಬೇಕೆನ್ನುವಾಗಲೇ ಎನ್‌ಗಿಡಿ ಮೋಡಿಗೆ ಸಿಲುಕಿದರು. ಪಾಂಡ್ಯ ಗಳಿಕೆ 31 ಎಸೆತಗಳಿಂದ 46 ರನ್ (3 ಬೌಂಡರಿ, 3 ಸಿಕ್ಸರ್).
ದಿನೇಶ್ ಕಾರ್ತಿಕ್ 26 ಎಸೆತಗಳಿಂದ ಅರ್ಧ ಶತಕ ಪೂರೈಸಿದರು. ಕಾರ್ತಿಕ್-ಪಾಂಡ್ಯ ಪರಾಕ್ರಮದಿಂದ ಭಾರತ ಡೆತ್ ಓವರ್‌ಗಳಲ್ಲಿ 73 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಕಾರ್ತಿಕ್ 27 ಎಸೆತ ಎದುರಿಸಿ 55 ರನ್ ಬಾರಿಸಿದರು. ಸಿಡಿಸಿದ್ದು 9 ಫೋರ್, 2 ಸಿಕ್ಸರ್.
ಬದಲಾಗದ ಭಾರತ ತಂಡ
ಭಾರತ 4ನೇ ಪಂದ್ಯದಲ್ಲೂ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದುದು ಅಚ್ಚರಿ ಮೂಡಿಸಿತು. ಹಾಗೆಯೇ ನಾಯಕ ರಿಷಭ್ ಪಂತ್ ಸತತ 4 ಪಂದ್ಯಗಳಲ್ಲಿ ಟಾಸ್ ಸೋತರು.
ದಕ್ಷಿಣ ಆಫ್ರಿಕಾ 3 ಪರಿವರ್ತನೆ ಮಾಡಿ ಕೊಂಡಿತು. ಗಾಯದಿಂದ ಚೇತರಿಸಿಕೊಂಡ ಕ್ವಿಂಟನ್ ಡಿ ಕಾಕ್
ತಂಡಕ್ಕೆ ಮರಳಿದರು. ಜತೆಗೆ ಮಾರ್ಕೊ ಜಾನ್ಸೆನ್ ಹಾಗೂ ಲುಂಗಿ ಎನ್‌ಗಿಡಿ ಅವರಿಗೆ ಅವಕಾಶ ಕಲ್ಪಿಸಲಾಯಿತು. ಹೊರಗುಳಿದವರು ಕಾಗಿಸೊ ರಬಾಡ, ವೇನ್ ಪಾರ್ನೆಲ್ ಮತ್ತು ರೀಝ ಹೆಂಡ್ರಿಕ್ಸ್.
ಸ್ಕೋರ್ ಪಟ್ಟಿ
ಭಾರತ
ಋತುರಾಜ್ ಗಾಯಕ್ವಾಡ್ ಸಿ ಡಿ ಕಾಕ್ ಬಿ ಎನ್‌ಗಿಡಿ 5
ಇಶಾನ್ ಕಿಶನ್ ಸಿ ಡಿ ಕಾಕ್ ಬಿ ನೋರ್ಜೆ 27
ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಜಾನ್ಸೆನ್ 4
ರಿಷಭ್ ಪಂತ್ ಸಿ ಪ್ರಿಟೋರಿಯಸ್ ಬಿ ಮಹಾರಾಜ್ 17
ಹಾರ್ದಿಕ್ ಪಾಂಡ್ಯ ಸಿ ಶಮಿÕ ಬಿ ಎನ್‌ಗಿಡಿ 46
ದಿನೇಶ್ ಕಾರ್ತಿಕ್ ಸಿ ಡುಸೆನ್ ಬಿ ಪ್ರಿಟೋರಿಯಸ್ 55
ಅಕ್ಷರ್ ಪಟೇಲ್ ಔಟಾಗದೆ 8
ಹರ್ಷಲ್ ಪಟೇಲ್ ಔಟಾಗದೆ 1
ಇತರ 6
ಒಟ್ಟು (6 ವಿಕೆಟಿಗೆ) 169
ವಿಕೆಟ್ ಪತನ: 1-13, 2-24, 3-40, 4-81, 5-146, 6-159.
ಬೌಲಿಂಗ್:
ಮಾರ್ಕೊ ಜಾನ್ಸೆನ್ 4-0-38-1
ಲುಂಗಿ ಎನ್‌ಗಿಡಿ 3-0-20-2
ಡ್ವೇನ್ ಪ್ರಿಟೋರಿಯಸ್ 4-0-41-1
ಆ್ಯನ್ರಿಚ್ ನೋರ್ಜೆ 3-0-21-1
ತಬ್ರೇಜ್ ಶಮ್ಸಿ 2-0-18-0
ಕೇಶವ್ ಮಹಾರಾಜ್ 4-0-29-1
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ ರನೌಟ್ 14
ಟೆಂಬ ಬವುಮ ರಿಟೈರ್ಡ್ ಔಟ್ 8
ಡ್ವೇನ್ ಪ್ರಿಟೋರಿಯಸ್ ಸಿ ಪಂತ್ ಬಿ ಆವೇಶ್ 0
ವಾನ್ ಡರ್ ಡುಸೆನ್ ಸಿ ಗಾಯಕ್ವಾಡ್ ಬಿ ಆವೇಶ್ 20
ಹೆನ್ರಿಕ್ ಕ್ಲಾಸೆನ್ ಎಲ್‌ಬಿಡಬ್ಲ್ಯು ಚಹಲ್ 8
ಡೇವಿಡ್ ಮಿಲ್ಲರ್ ಬಿ ಹರ್ಷಲ್ 9
ಮಾರ್ಕೊ ಜಾನ್ಸೆನ್ ಸಿ ಗಾಯಕ್ವಾಡ್ ಬಿ ಆವೇಶ್ 12
ಕೇಶವ್ ಮಹಾರಾಜ್ ಸಿ ಅಯ್ಯರ್ ಬಿ ಆವೇಶ್ 0
ಆ್ಯನ್ರಿಚ್ ನೋರ್ಜೆ ಸಿ ಇಶಾನ್ ಬಿ ಚಹಲ್ 1
ಲುಂಗಿ ಎನ್‌ಗಿಡಿ ಸಿ ಗಾಯಕ್ವಾಡ್ ಬಿ ಅಕ್ಷರ್ 4
ತಬ್ರೇಜ್ ಶಮ್ಸಿ ಔಟಾಗದೆ 4
ಇತರ 7
ಒಟ್ಟು (16.5 ಓವರ್‌ಗಳಲ್ಲಿ ಆಲೌಟ್) 87
ವಿಕೆಟ್ ಪತನ: 1-24, 2-26, 3-45, 4-59, 5-74, 6-74, 7-78, 8-80, 9-87.
ಬೌಲಿಂಗ್:
ಭುವನೇಶ್ವರ್ ಕುಮಾರ್ 2-0-8-0
ಹಾರ್ದಿಕ್ ಪಾಂಡ್ಯ 1-0-12-0
ಆವೇಶ್ ಖಾನ್ 4-0-18-4
ಹರ್ಷಲ್ ಪಟೇಲ್ 2-0-3-1
ಯಜುವೇಂದ್ರ ಚಹಲ್ 4-0-21-2
ಅಕ್ಷರ್ ಪಟೇಲ್ 3.5-0-19-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.