Paris; ಸ್ಟೀಪಲ್‌ಚೇಸ್ ಫೈನಲ್‌ಗೆ ಸಾಬ್ಲೆ, ಈ ಸಾಧನೆ ಮೊದಲ ಭಾರತೀಯ
Team Udayavani, Aug 6, 2024, 10:16 PM IST
ಪ್ಯಾರಿಸ್: ಅಥ್ಲೀಟ್ ಅವಿನಾಶ್ ಮುಕುಂದ್ ಸಾಬ್ಲೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯ ಫೈನಲ್ ತಲುಪಿದ ಮೊದಲ ಭಾರತೀಯನೆಂಬುದು ಇವರ ಹೆಗ್ಗಳಿಕೆ.
ಸೋಮವಾರ ರಾತ್ರಿ ಸೇಂಟ್-ಡೆನಿಸ್‌ನಲ್ಲಿ ನಡೆದ 2ನೇ ವಿಭಾಗದ ಹೀಟ್‌ನಲ್ಲಿ ಸಾಬ್ಲೆ 5ನೇ ಸ್ಥಾನಿಯಾದರು. ಅವರು 8:15.43 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದರು. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಗಿಂತ ಕೆಳ ಮಟ್ಟದ ಸಾಧನೆ. ಕಳೆದ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಅವರು 8.09.91 ನಿಮಿಷಗಳ ಸಾಧನೆಗೈದದ್ದು ದಾಖಲೆಯಾಗಿದೆ.
ಮೊರಾಕ್ಕೋದ ಮೊಹಮ್ಮದ್ ಹೀಟ್‌ನಲ್ಲಿ ಅಗ್ರಸ್ಥಾನಿಯಾದರು (8:10.62). ಇಥಿಯೋಪಿಯಾದ ಸ್ಯಾಮ್ಯುಯೆಲ್ ಫೈರ್‌ವೂ ದ್ವಿತೀಯ (8:11.61), ಕೀನ್ಯಾದ ಅಬ್ರಹಾಂ ಕಿಬಿವೋಟ್ ತೃತೀಯ ಸ್ಥಾನ ಪಡೆದರು (8:12.02). ಮೊದಲ 1,000 ಮೀ. ವೇಳೆ ಅವಿನಾಶ್ ಸಾಬ್ಲೆ, ಕಿಬಿವೋಟ್ ಅವರಿಗೆ ಬಲವಾದ ಸ್ಪರ್ಧೆಯೊಡ್ಡಿದರು. ಇದು 3 ವಿಭಾಗಗಳ ಹೀಟ್ ಸ್ಪರ್ಧೆಯಾಗಿದ್ದು, ಪ್ರತೀ ಹೀಟ್‌ನಲ್ಲಿ ಮೊದಲ 5 ಸ್ಥಾನ ಪಡೆದವರು ಫೈನಲ್‌ಗೆ ಆಯ್ಕೆಯಾಗುತ್ತಾರೆ. ಗುರುವಾರ ಫೈನಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.