ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್: ಪ್ರಶಸ್ತಿ ಜಯಿಸಿದ ಅಕ್ಸೆಲ್ಸೆನ್, ಯಮಾಗುಚಿ
Team Udayavani, Aug 29, 2022, 12:17 AM IST
ಟೋಕಿಯೊ: ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ಮತ್ತು ಆತಿಥೇಯ ದೇಶದ ಅಕಾನೆ ಯಮಾಗುಚಿ “ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್’ ಬ್ಯಾಡ್ಮಿಂ ಟನ್ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ವಿಕ್ಟರ್ ಅಕ್ಸೆಲ್ಸೆನ್ ಥಾಯ್ಲೆಂಡ್ನ ವಿತಿದ್ಸರ್ನ್ ವಿರುದ್ಧ 50 ನಿಮಿಷಗಳ ಹೋರಾಟ ನಡೆಸಿ 21-5, 21-16 ಅಂತರದಿಂದ ಗೆದ್ದು ಬಂದರು. ಈ ಕೂಟದಲ್ಲಿ ಅವರು ಒಂದೂ ಗೇಮ್ ಕಳೆದುಕೊಳ್ಳಲಿಲ್ಲ. ಒಂದು ವರ್ಷದಲ್ಲಿ ಅವರು ಗೆದ್ದ 3ನೇ ಪ್ರತಿಷ್ಠಿತ ಬ್ಯಾಡ್ಮಿಂಟನ್ ಪ್ರಶಸ್ತಿ ಇದಾಗಿದೆ. ಟೋಕಿಯೋದಲ್ಲಿ ಚಿನ್ನ ಜಯಿಸಿದ ಬಳಿಕ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಇದು ಅಕ್ಸೆಲ್ಸೆನ್ ಗೆದ್ದ ದ್ವಿತೀಯ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ. ಗ್ಲಾಸೊYàದಲ್ಲಿ ನಡೆದ 2017ರ ಕೂಟದಲ್ಲಿ ಮೊದಲ ಸಲ ಚಾಂಪಿಯನ್ ಆಗಿದ್ದರು.
ಇನ್ನೊಂದೆಡೆ, 21 ವರ್ಷದ ವಿತಿದ್ಸರ್ನ್ ಕಳೆದ ಸಲದ ಚಾಂಪಿಯನ್ ಲೋಹ್ ಕೀನ್ ವ್ಯೂ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಆದರೆ ಮೊದಲ ಸಲ ಈ ಪ್ರಶಸ್ತಿಯನ್ನು ಥಾಯ್ಲೆಂಡ್ಗೆ ತಂದುಕೊಡುವಲ್ಲಿ ಯಶಸ್ಸು ಕಾಣಲಿಲ್ಲ.
ಯಮಾಗುಚಿ ಸಂಭ್ರಮ
ಅಗ್ರ ಶ್ರೇಯಾಂಕದ ಅಕಾನೆ ಯಮಾಗುಚಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಉಳಿಸಿಕೊಂಡು ಸಂಭ್ರಮಿಸಿದರು. ಫೈನಲ್ನಲ್ಲಿ ಒಲಿಂಪಿಕ್ ಚಾಂಪಿಯನ್ ಖ್ಯಾತಿಯ ಚೀನದ ಆಟಗಾರ್ತಿ ಚೆನ್ ಯುಫಿ ಅವರನ್ನು 21-12, 10-21, 21-14 ಅಂತರದಿಂದ ಪರಾಭವಗೊಳಿಸಿದರು. ಈ ಋತುವಿನಲ್ಲಿ ಯಮಾಗುಚಿ ಗೆದ್ದ ಎರಡನೇ ಪ್ರಶಸ್ತಿ ಇದಾಗಿದೆ. ಕಳೆದ ಮಾರ್ಚ್ನಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.