ಅಜರ್ ಅಲಿ ಏಕಾಂಗಿ ಹೋರಾಟ: ಆ್ಯಂಡರ್ಸನ್ ದಾಳಿಗೆ ಬೆದರಿದ ಪಾಕ್
Team Udayavani, Aug 24, 2020, 7:57 AM IST
ಸೌಥಂಪ್ಟನ್: ನಾಯಕ ಅಜರ್ ಅಲಿ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಪಾಕಿಸ್ಥಾನ ಅಂತಿಮ ಟೆಸ್ಟ್ ನಲ್ಲಿ ಭಾರಿ ಹಿನ್ನಡೆ ಸಾಧಿಸಿದೆ. ಪಾಕಿಸ್ಥಾನ 273 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
24 ರನ್ ಗೆ ಮೂರು ವಿಕೆಟ್ ಕಳೆದುಕೊಂಡಲ್ಲಿಂದ ದಿನದಾಟ ಮುಂದುವರಿಸಿದ ಪಾಕಿಸ್ಥಾನ ಆರಂಭದಲ್ಲಿ ಅಸದ್ ಶಫೀಕ್ ವಿಕೆಟ್ ಕಳೆದುಕೊಂಡಿತು. ನಾಯಕ ಅಜರ್ ಅಲಿ ಮತ್ತು ಮೊಹಮ್ಮದ್ ರಿಜ್ವಾನ್ ಸೇರಿ 138 ರನ್ ಗಳ ಜೊತೆಯಾಟ ನಡೆಸಿದರು. ರಿಜ್ವಾನ್ 53 ರನ್ ಗಳಿಸಿ ಔಟಾದರು.
ನಾಯಕನ ಆಟವಾಡಿದ ಅಜರ್ ಅಲಿ ಅಜೇಯ 141 ರನ್ ಗಳಿಸಿದರು. ಆದರೆ ರಿಜ್ವಾನ್ ಬಳಿಕ ಯಾರೂ ಅಜರ್ ಅಲಿಗೆ ಸಾಥ್ ನೀಡಲಿಲ್ಲ. ಹೀಗಾಗಿ ಪಾಕ್ ಸತತ ವಿಕೆಟ್ ಕಳೆದುಕೊಂಡಿತು. ಪಾಕಿಸ್ಥಾನ 273 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 310 ರನ್ ಹಿನ್ನಡೆ ಅನುಭವಿಸಿತು.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ ಐದು ವಿಕೆಟ್ ಪಡೆದರೆ, ಬ್ರಾಡ್ ಎರಡು ವಿಕೆಟ್ ಕಬಳಿಸಿದರು. ವೋಕ್ಸ್ ಮತ್ತು ಬೆಸ್ ತಲಾ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.