ಅಜ್ಲಾನ್ ಶಾ ಹಾಕಿ: ಫೈನಲ್‌ಗೇರಲು ಭಾರತಕ್ಕೆ ಸಣ್ಣ ಅವಕಾಶ
Team Udayavani, Mar 9, 2018, 6:20 AM IST
ಇಪೋ (ಮಲೇಶ್ಯ): ಮಲೇಶ್ಯ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಜ್ಲಾನ್ ಶಾ ಹಾಕಿ ಕೂಟದಲ್ಲಿ ಮೊದಲ ಗೆಲುವು ಕಂಡ ಭಾರತ ತಂಡ ಶುಕ್ರವಾರ ಅಯರ್‌ಲ್ಯಾಂಡ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದರೆ ಫೈನಲ್ ಪ್ರವೇಶಿಸುವ ಸಣ್ಣ ಅವಕಾಶವೂ ಇದೆ.
ಒಟ್ಟು 6 ತಂಡಗಳ ಗುಂಪು ಹಂತದಲ್ಲಿ ಎಲ್ಲಾ ತಂಡಗಳು ತಲಾ 4 ಪಂದ್ಯವನ್ನು ಆಡಿವೆ. ಎಲ್ಲ ತಂಡಗಳಿಗೂ ಒಂದು ಪಂದ್ಯವಷ್ಟೇ ಬಾಕಿ ಇದೆ. ನಾಲ್ಕನ್ನೂ ಗೆದ್ದಿರುವ ಆಸ್ಟ್ರೇಲಿಯ 12 ಅಂಕ ಸಂಪಾದಿಸಿ ಈಗಾಗಲೇ ಫೈನಲ್ ಪ್ರವೇಶಿಸಿದೆ.
ಇನ್ನೊಂದು ಫೈನಲ್ ಮತ್ತೂಂದು ತಂಡಕ್ಕೆ ಅರ್ಜೆಂಟೀನಾ, ಮಲೇಷ್ಯಾ, ಇಂಗ್ಲೆಂಡ್, ಭಾರತದ ನಡುವೆ ಸ್ಪರ್ಧೆ ಇದೆ.
ಈಗಾಗಲೇ ಅರ್ಜೆಂಟೀನಾ 7, ಮಲೇಷ್ಯಾ 6, ಇಂಗ್ಲೆಂಡ್ 5, ಭಾರತ 4 ಅಂಕವನ್ನು ಸಂಪಾದಿಸಿವೆ. ಭಾರತ ಫೈನಲ್ ಪ್ರವೇಶಿಸಬೇಕಾದರೆ, ಅರ್ಜೆಂಟೀನಾ ವಿರುದ್ಧ ಆಸ್ಟ್ರೇಲಿಯ ಗೆಲುವು ಸಾಧಿಸಬೇಕು. ಆಗ ಅರ್ಜೆಂಟೀನಾ ಅಂಕ 7ರಲ್ಲಿಯೇ ಉಳಿಯಲಿದೆ.
ಇಂಗ್ಲೆಂಡ್-ಮಲೇಶ್ಯ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಬೇಕು. ಆಗ ಮಲೇಶ್ಯ ಅಂಕ 7ಕ್ಕೆ, ಇಂಗ್ಲೆಂಡ್ ಅಂಕ 6ಕ್ಕೇರಲಿದೆ. ಅಯರ್‌ಲ್ಯಾಂಡ್ ವಿರುದ್ಧ ಭಾರ ಗೆಲುವು ಸಾಧಿಸಿದರೆ ಭಾರತದ ಅಂಕ 7ಕ್ಕೇರಲಿದೆ. ಇಂಥದೊಂದು ಸಂದರ್ಭ ಸೃಷ್ಟಿಯಾದರೆ ಭಾರತ, ಆರ್ಜೆಂಟೀನಾ, ಮಲೇಶ್ಯ ತಂಡಗಳು ತಲಾ 7 ಅಂಕ ಸಂಪಾದಿಸಲಿವೆ. ಈ ಸಂದರ್ಭದಲ್ಲಿ ಗೋಲುಗಳ ಅಂತರದ ಆಧಾರದ ಮೇಲೆ ಒಂದು ತಂಡ ಫೈನಲ್ ತಲುಪಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.