ಟೆಸ್ಟ್‌ ಪಂದ್ಯ: ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ವರ್ಷದ ಬ್ಯಾಟರ್‌


Team Udayavani, Dec 26, 2022, 11:21 PM IST

ಟೆಸ್ಟ್‌ ಪಂದ್ಯ: ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ವರ್ಷದ ಬ್ಯಾಟರ್‌

ಕರಾಚಿ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋಮವಾರ ಆರಂಭಗೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ಬೊಂಬಾಟ್‌ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪಾಕ್‌ 5 ವಿಕೆಟ್‌ ನಷ್ಟಕ್ಕೆ 317 ರನ್‌ ಗಳಿಸಿದೆ. ಇದರಲ್ಲಿ ಬಾಬರ್‌ ಗಳಿಕೆ ಅಜೇಯ 161 ರನ್‌.

ಈ ಅಮೋಘ ಸಾಹಸದೊಂದಿಗೆ ಬಾಬರ್‌ ಆಜಂ 2022ರ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಟೆಸ್ಟ್‌ ರನ್‌ ಗಳಿಸಿದ ದಾಖಲೆ ಬರೆದರು. ಅವರ ರನ್‌ ಗಳಿಕೆ 1,251ಕ್ಕೆ ಏರಿದೆ. ಇದು ಬಾಬರ್‌ ಅವರ 9 ಟೆಸ್ಟ್‌ಗಳ 16ನೇ ಇನ್ನಿಂಗ್ಸ್‌. ಪಾಕ್‌ ಕಪ್ತಾನನ ಬ್ಯಾಟಿಂಗ್‌ ಅಬ್ಬರದ ವೇಳೆ ಇಂಗ್ಲೆಂಡ್‌ನ‌ ಮಾಜಿ ನಾಯಕ ಜೋ ರೂಟ್‌ ಅವರ 1,098 ರನ್ನುಗಳ ದಾಖಲೆ ಪತನಗೊಂಡಿತು. ರೂಟ್‌ ಇದಕ್ಕಾಗಿ 15 ಟೆಸ್ಟ್‌ಗಳ 27 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದರು.

ಬಾಬರ್‌ ಆಜಂ 2022ರ ಎಲ್ಲ ಅಂತಾರಾಷ್ಟ್ರೀಯ ಮಾದರಿಗಳಲ್ಲೂ ಸರ್ವಾಧಿಕ ರನ್‌ ಪೇರಿಸಿದ ದಾಖಲೆ ಹೊಂದಿದ್ದಾರೆ. ಇದೀಗ 2 ಸಾವಿರದ ಗಡಿ ದಾಟಿದೆ. 1,921 ರನ್‌ ಮಾಡಿರುವ ಬಾಂಗ್ಲಾದೇಶದ ಲಿಟನ್‌ ದಾಸ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

196 ರನ್‌ ಜತೆಯಾಟ
ಇಂಗ್ಲೆಂಡ್‌ ವಿರುದ್ಧ ಸೋತು ಸುಣ್ಣವಾಗಿದ್ದ ಪಾಕಿಸ್ಥಾನ, ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧವೂ ಆಘಾತಕಾರಿ ಆರಂಭ ಪಡೆದಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಾಕ್‌ 48 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು. 110ಕ್ಕೆ 4ನೇ ವಿಕೆಟ್‌ ಬಿತ್ತು. ಬಾಬರ್‌ ಆಜಂ ಹಾಗೂ 4 ವರ್ಷಗಳ ಬಳಿಕ ಟೆಸ್ಟ್‌ ಆಡಲಿಳಿದ ಸಫ‌ìರಾಜ್‌ ಅಹ್ಮದ್‌ ತಂಡದ ರಕ್ಷಣೆಗೆ ನಿಲ್ಲುವುದರೊಂದಿಗೆ ಕಿವೀಸ್‌ ಹಿನ್ನಡೆ ಕಾಣುತ್ತ ಹೋಯಿತು. ಇವರಿಂದ 5ನೇ ವಿಕೆಟಿಗೆ 196 ರನ್‌ ಒಟ್ಟುಗೂಡಿತು. ಅರ್ಥಾತ್‌, 4 ವಿಕೆಟ್‌ಗಳಿಂದ ಕೇವಲ 110 ರನ್‌ ಮಾಡಿದ್ದ ಪಾಕ್‌, ಅನಂತರ ಒಂದೇ ವಿಕೆಟ್‌ ಕಳೆದುಕೊಂಡು 207 ರನ್‌ ರಾಶಿ ಹಾಕಿತು.

ಬಾಬರ್‌ 277 ಎಸೆತಗಳಿಂದ 161 ರನ್‌ ಬಾರಿಸಿ ಕಿವೀಸ್‌ ಪಾಲಿಗೆ ಅಪಾಯಕಾರಿಯಾಗಿ ಗೋಚರಿಸಿದ್ದಾರೆ (15 ಬೌಂಡರಿ, 1 ಸಿಕ್ಸರ್‌). ಇದು ಅವರ 9ನೇ ಟೆಸ್ಟ್‌ ಶತಕ. ನ್ಯೂಜಿಲ್ಯಾಂಡ್‌ ವಿರುದ್ಧ 2ನೇ, ಈ ವರ್ಷದ 4ನೇ ಟೆಸ್ಟ್‌ ಸೆಂಚುರಿ. ಸಫ‌ìರಾಜ್‌ ಅಹ್ಮದ್‌ ದಿನದಾಟದ ಕೊನೆಯ ಹಂತದಲ್ಲಿ 86ಕ್ಕೆ ಔಟಾಗಿ ಶತಕ ವಂಚಿತರಾದರು (153 ಎಸೆತ, 9 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-5 ವಿಕೆಟಿಗೆ 317 (ಬಾಬರ್‌ ಬ್ಯಾಟಿಂಗ್‌ 161, ಸಫ‌ìರಾಜ್‌ 86, ಇಮಾಮ್‌ 24, ಶಕೀಲ್‌ 22, ಮೈಕಲ್‌ ಬ್ರೇಸ್‌ವೆಲ್‌ 61ಕ್ಕೆ 2, ಅಜಾಜ್‌ ಪಟೇಲ್‌ 91ಕ್ಕೆ 2).

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.