Pakistan; ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಮ್
ಬದಲಿ ಘೋಷಣೆ ಮಾಡಿದ ಪಾಕ್ ಕ್ರಿಕೆಟ್ ಮಂಡಳಿ
Team Udayavani, Nov 15, 2023, 11:07 PM IST
ಇಸ್ಲಮಾಬಾದ್ : ಬಾಬರ್ ಅಜಮ್ ಅವರು ಪಾಕಿಸ್ಥಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದಿರುವುದಾಗಿ ಬುಧವಾರ ಘೋಷಿಸಿದ್ದಾರೆ, ಆದರೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪಾಕಿಸ್ಥಾನದ ನಿರಾಶಾದಾಯಕ ವಿಶ್ವಕಪ್ ಅಭಿಯಾನದ ನಂತರ 29 ರ ಹರೆಯದ ಬಾಬರ್ ಅವರಿಂದ ಈ ಘೋಷಣೆ ಬಂದಿದೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಪಾಕ್ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದಿತ್ತು.
ರಾಜೀನಾಮೆ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ, ಶಾಹೀನ್ ಅಫ್ರಿದಿ ಅವರನ್ನು ಟಿ 20 ನಾಯಕನಾಗಿ ಮತ್ತು ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ಥಾನ ಪುರುಷರ ತಂಡದ ಹೊಸ ನಿರ್ದೇಶಕರಾಗಿ ಮಿಕ್ಕಿ ಆರ್ಥರ್ ಬದಲಿಗೆ ಘೋಷಿಸಿದೆ.
“ಇಂದು ನಾನು ಎಲ್ಲಾ ಸ್ವರೂಪಗಳ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ ಆದರೆ ಈ ನಿರ್ಧಾರಕ್ಕೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಬಾಬರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ 40 ರ ಸರಾಸರಿಯಲ್ಲಿ ಮತ್ತು 82.90 ಸ್ಟ್ರೈಕ್ ರೇಟ್‌ನಲ್ಲಿ ಅವರು ಕೇವಲ 320 ರನ್‌ಗಳನ್ನು ಗಳಿಸಿದ್ದರು. ಇತ್ತೀಚಿನವರೆಗೂ ನಂ.1 ಏಕದಿನ ಬ್ಯಾಟ್ಸ್ ಮ್ಯಾನ್ ಆಗಿದ್ದರು.
2019 ರಲ್ಲಿ ಸರ್ಫರಾಜ್ ಅಹ್ಮದ್ ಬದಲಿಗೆ ಬಾಬರ್ ಪಾಕ್ ತಂಡದ ಏಕದಿನ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು 2021 ರಲ್ಲಿ ಟೆಸ್ಟ್ ನಾಯಕನಾಗಿದ್ದರು. ಅವರ ನಾಯಕತ್ವದಲ್ಲಿ, ಪಾಕಿಸ್ಥಾನವು ಏಷ್ಯಾ ಕಪ್ ಮತ್ತು 2022 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.