ಬ್ಯಾಡ್ಮಿಂಟನ್ :ಪ್ರಣಯ್, ಕಶ್ಯಪ್ ಪ್ರಿ-ಕ್ವಾರ್ಟರ್‌ಫೈನಲಿಗೆ
Team Udayavani, Aug 3, 2017, 8:35 AM IST
ಆಕ್ಲಂಡ್: ಉತ್ತಮ ಫಾರ್ಮ್ನಲ್ಲಿರುವ ಭಾರತದ ಎಚ್‌ಎಸ್ ಪ್ರಣಯ್ ಮತ್ತು ಪಾರುಪಳ್ಳಿ ಕಶ್ಯಪ್ ಅವರು ನೇರ ಗೇಮ್‌ಗಳ ಜಯ ದೊಂದಿಗೆ ನ್ಯೂಜಿಲ್ಯಾಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಕೂಟದ ಪ್ರಿ-ಕ್ವಾರ್ಟರ್‌ಫೈನಲಿಗೇರಿದ್ದಾರೆ.
ಕಳೆದ ತಿಂಗಳು ಕ್ಯಾಲಿಫೋರ್ನಿಯದಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದ 24ರ ಹರೆಯದ ಪ್ರಣಯ್ ಇಂಡೋನೇಶ್ಯದ ಫಿರ್ಮಾನ್ ಅಬ್ದುಲ್ ಖೋಲಿಕ್ ಅವರನ್ನು ಕಠಿನ ಹೋರಾಟದಲ್ಲಿ 23-21, 21-18 ಗೇಮ್‌ಗಳಿಂದ ಉರುಳಿಸಿದರು. ಪ್ರಣಯ್ ಮುಂದಿನ ಸುತ್ತಿನಲ್ಲಿ 10ನೇ ಶ್ರೇಯಾಂಕದ ಹಾಂಕಾಂಗ್‌ನ ವೆಯಿ ನಾನ್ ಅವರನ್ನು ಎದುರಿಸಲಿದ್ದಾರೆ.
ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ನ್ಯೂಜಿಲ್ಯಾಂಡಿನ ಆಸ್ಕರ್ ಗುವೊ ಅವರನ್ನು 21-9, 21-18 ಗೇಮ್‌ಗಳಿಂದ ಮಣಿಸಿದರು. ಕಶ್ಯಪ್ ಯುಎಸ್ ಓಪನ್‌ನ ಫೈನಲ್‌ನಲ್ಲಿ ಪ್ರಣಯ್‌ಗೆ ಶರಣಾಗಿದ್ದರು. 15ನೇ ಶ್ರೇಯಾಂಕದ ಕಶ್ಯಪ್ ಮುಂದಿನ ಸುತ್ತಿನಲ್ಲಿ ತನ್ನ ದೇಶದವರೇ ಆದ ಸೌರಭ್ ವರ್ಮ ಅವರನ್ನು ಎದುರಿಸಲಿದ್ದಾರೆ.
ಏಳನೇ ಶ್ರೇಯಾಂಕದ ಸೌರಭ್ ಇನ್ನೊಂದು ಪಂದ್ಯದಲ್ಲಿ ಇಂಡೋನೇಶ್ಯದ ಹೆನ್ರಿಕೊ ಖೊ ವಿಬೊವೊ ಅವರನ್ನು 21-16, 21-16 ಗೇಮ್‌ಗಳಿಂದ ಸೋಲಿಸಿದರೆ ಸಿರಿಲ್ ವರ್ಮ ಅವರು ಇಂಡೋನೇಶ್ಯದ ಸಪುತ್ರ ವಿಕಿ ಅಂಘ ಅವರನ್ನು 21-14, 21-16 ಗೇಮ್‌ಗಳಿಂದ ಸದೆಬಡಿದರು.
ಆದರೆ ಯುವ ಶಟ್ಲರ್‌ಗಳಾದ ಸಾಹಿಲ್ ಸಿಪಾನಿ ಮತ್ತು ನೀರಜ್ ವಶಿಷ್ಟ್ ಅವರು ದ್ವಿತೀಯ ಸುತ್ತಿನಲ್ಲಿ ನೇರ ಗೇಮ್‌ಗಳಿಂದ ಸೋತು ಹೊರಬಿದ್ದರು. ಸಾಹಿಲ್ ಅವರು 11ನೇ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯು ಸಿಯೆನ್ ಅವರೆದುರು 9-21, 8-21 ಗೇಮ್‌ಗಳಿಂದ ಸೋತರೆ ನೀರಜ್ ಆಸ್ಟ್ರೇಲಿಯದ ಜೋಯ್ ವಿರುದ್ಧ 16-21, 13-21 ಗೇಮ್‌ಗಳಿಂದ ಪರಾಭವಗೊಂಡರು.
ಪ್ರತುಲ್ ಜೋಶಿ ಅವರ ಹೋರಾಟ ಕೂಡ ಅಂತ್ಯಗೊಂಡಿದೆ. ಅವು ಅಗ್ರ ಶ್ರೇಯಾಂಕದ ಚೈನೀಸ್ ತೈಪೆಯ ಝು ವೆಯಿ ವಾಂಗ್ ಅವರಿಗೆ 13-21, 22-24 ಗೇಮ್‌ಗಳಿಂದ ಶರಣಾದರು.
ವನಿತೆಯರ ಡಬಲ್ಸ್‌ನಲ್ಲಿ ಸನ್ಯೋಗಿತಾ ಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್ ಅವರು ನಾಲ್ಕನೇ ಶ್ರೇಯಾಂಕದ ಜಪಾನಿನ ಅಯಕೊ ಸಕುರಮೊಟೊ ಮತ್ತು ಯುಕಿಕೊ ತಕಹತಾ ಅವರೆದುರು 15-21, 18-21 ಗೇಮ್‌ಗಳಿಂದ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.