ಲಾಗೋಸ್ ಓಪನ್: ಮನು-ಸುಮೀತ್ಗೆ ಡಬಲ್ಸ್ ಪ್ರಶಸ್ತಿ
Team Udayavani, Aug 1, 2017, 7:40 AM IST
ಹೊಸದಿಲ್ಲಿ: ನೈಜೀರಿಯದಲ್ಲಿ ನಡೆದ ಲಾಗೋಸ್ ಓಪನ್ ಇಂಟರ್ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಶಟ್ಲರ್ಗಳಾದ ಸಿ. ರಾಹುಲ್ ಯಾದವ್ ಸಿಂಗಲ್ಸ್ನಲ್ಲಿ ಹಾಗೂ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನಾಲ್ಕನೇ ಶ್ರೇಯಾಂಕದ ರಾಹುಲ್ ತನ್ನ ದೇಶದವರೇ ಆದ ಕರಣ್ ರಾಜನ್ ರಾಜರಾಜನ್ ಅವರನ್ನು 21-15, 21-13 ಗೇಮ್ಗಳಿಂದ ಉರುಳಿಸಿ ಪ್ರಶಸ್ತಿ ಗೆದ್ದರು. ಕಳೆದ ವರ್ಷ ಮಾರಿಷಸ್ ಓಪನ್ ಪ್ರಶಸ್ತಿ ಜಯಿಸಿದ್ದ 19ರ ಹರೆಯದ ರಾಹುಲ್ ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಮತ್ತು ವಿಶ್ವದ 55ನೇ ರ್ಯಾಂಕಿನ ಮಿಶಾ ಝಿಬೆರ್ಮನ್ ಅವರನ್ನು ಕೆಡಹಿ ಅಚ್ಚರಿಯ ಫಲಿತಾಂಶ ದಾಖಲಿಸಿದ್ದರು.
ಡಬಲ್ಸ್ನಲ್ಲಿ ಅಗ್ರ ಶ್ರೇಯಾಂಕದ ಮನು ಅತ್ರಿ ಮತ್ತು ಸುಮೀತ್ ಅವರು ಸ್ಥಳೀಯ ತಾರೆಗಳಾದ ಗಾಡ್ವಿನ್ ಒಲೋಫುವ ಮತು ಅನೋಲ್ವಾಪೊ ಜುವೋನ್ ಒಪೆಯೋರಿ ಅವರನ್ನು 21-13, 21-15 ಗೇಮ್ಗಳಿಂದ ಕೆಡಹಿದರು.
ವನಿತೆಯರ ಸಿಂಗಲ್ಸ್ನಲ್ಲಿ ಭಾರತದ ಮುಗೊª ಆಗ್ರೆ ಅವರು ಶ್ರೀಲಂಕಾದ ತಿಲಿನಿ ಪ್ರಮೋದಿಕಾ ಹೆಂದಹೇವಾ ಅವರಿಗೆ 12-21, 14-21 ಗೇಮ್ಗಳಿಂದ ಶರಣಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.